ಕೊಲಂಬೊ(ಜ.13): ಇಂಗ್ಲೆಂಡ್‌ ವಿರುದ್ದದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ 22 ಆಟಗಾರರನ್ನೊಳಗೊಂಡ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ದಿನೇಶ್‌ ಚಾಂಡಿಮಲ್‌, ಆಂಜಲೋ ಮ್ಯಾಥ್ಯೂಸ್‌ ಹಾಗೂ ನುವಾನ್ ಪ್ರದೀಪ್ ತಂಡ ಕೂಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವು ವೈಟ್‌ವಾಷ್‌ ಆಗುವ ಮೂಲಕ ಮುಖಭಂಗ ಅನುಭವಿಸಿತ್ತು. ಇದೀಗ ಮ್ಯಾಥ್ಯೂಸ್‌ ಹಾಗೂ ಚಾಂಡಿಮಲ್‌ ತಂಡವನ್ನು ಕೂಡಿಕೊಂಡಿರವುದು ಲಂಕಾ ಬ್ಯಾಟಿಂಗ್‌ ಪಾಳಯಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಇನ್ನು ಅನುಭವಿ ವೇಗಿ ನುವಾನ್ ಪ್ರದೀಪ್‌ 2017ರ ಬಳಿಕ ಲಂಕಾ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ವಿರಾಟ್‌ ಕೊಹ್ಲಿ 

ಶ್ರೀಲಂಕಾ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯ ಜನವರಿ 14ರಿಂದ ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಆರಂಭವಾಗಲಿದೆ.  

ಶ್ರೀಲಂಕಾ ತಂಡ ಹೀಗಿದೆ ನೋಡಿ:
ದಿಮುತ್ ಕರುಣ್‌ರತ್ನೆ(ನಾಯಕ), ಕುಸಾಲ್‌ ಜನಿತ್ ಪೆರೆರಾ, ದಿನೇಶ್‌ ಚಾಂಡಿಮಲ್, ಕುಸಾಲ್ ಮೆಂಡಿಸ್‌, ಆಂಜಲ್ ಮ್ಯಾಥ್ಯೂಸ್‌, ಒಶಾಡೊ ಫೆರ್ನಾಂಡೊ, ನಿರ್ಶೋನ್ ಡಿಕ್‌ವೆಲ್ಲಾ, ಮಿನೋದ್‌ ಭಾನುಕಾ, ಲಹಿರು ತಿರುಮನ್ನೆ, ಲಸಿತ್ ಎಂಬಲ್ಡಿನಿಯಾ, ವಹಿಂದು ಹಸರಂಗ, ದಿಲ್ರೋರ್ನ ಪೆರೆರಾ, ಸುರಂಗ ಲಕ್ಮಲ್‌, ಲಹಿರು ಕುಮಾರ, ವಿಶ್ವ ಫರ್ನಾಂಡೋ, ದುಶ್ಮಂತ್ ಚಮೀರಾ, ದಶುನ್‌ ಶನಕಾ, ಆಸಿತಾ ಫರ್ನಾಂಡೋ, ರೋಶೆನ್ ಸಿಲ್ವಾ,  ಲಕ್ಷನ್‌ ಸಂದಕನ, ನುವಾನ್ ಪ್ರದೀಪ್‌, ರಮೇಶ್ ಮೆಂಡಿಸ್.