Asianet Suvarna News Asianet Suvarna News

ಕ್ಯಾಚ್ ಹಿಡಿಯಲು ಹೋಗಿ 4 ಹಲ್ಲು ಮುರಿದುಕೊಂಡ ಲಂಕಾ ಸ್ಟಾರ್ ಕ್ರಿಕೆಟಿಗ, ವಿಡಿಯೋ ವೈರಲ್..!

ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆಯಿತು ದುರ್ಘಟನೆ
ಚೆಂಡು ಬಡಿದು 4 ಹಲ್ಲು ಕಳೆದುಕೊಂಡ ಚಮಿಕಾ ಕರುಣರತ್ನೆ
ಕ್ಯಾಂಡಿ ಹಾಗೂ ಗಾಲೆ ತಂಡಗಳ ನಡುವಿನ ಪಂದ್ಯದಲ್ಲಿ ಈ ಘಟನೆ

Sri Lanka Cricketer Chamika Karunaratne loses 4 teeth in freak fielding injury while attempting catch in LPL 2022 kvn
Author
First Published Dec 9, 2022, 12:28 PM IST

ಕೊಲಂಬೊ(ಡಿ.09): ಲಂಕಾ ಪ್ರೀಮಿಯರ್‌ ಲೀಗ್‌ ಟಿ20 ಪಂದ್ಯದ ವೇಳೆ ಕ್ಯಾಚ್‌ ಹಿಡಿಯುವಾಗ ಚೆಂಡು ಬಡಿದ ಪರಿಣಾಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಚಮಿಕ ಕರುಣರತ್ನೆ 4 ಹಲ್ಲು ಕಳೆದುಕೊಂಡಿದ್ದಾರೆ. ಕ್ಯಾಂಡಿ ಹಾಗೂ ಗಾಲೆ ತಂಡಗಳ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡು ರಕ್ತ ಸುರಿಯುತ್ತಿದ್ದ ಕಾರಣ ಕರುಣರತ್ನೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

ಈ ದುರ್ಘಟನೆಯು ಪಂದ್ಯದ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ನಡೆದಿದ್ದು, ನುವಾನಿದೊ ಫರ್ನಾಂಡೋ ಅವರು ಬಾರಿಸಿದ ಚೆಂಡನ್ನು ಕವರ್‌ ಭಾಗದಲ್ಲಿದ್ದ ಚಮಿಕಾ ಕರುಣರತ್ನೆ ಕ್ಯಾಚ್ ಹಿಡಿಯುವ ಯತ್ನದಲ್ಲಿದ್ದಾಗ ಬಲವಾಗಿ ಚೆಂಡು ಮುಖಕ್ಕೆ ಅಪ್ಪಳಿಸಿದೆ. ಚಮಿಕಾ ಕರುಣರತ್ನೆ ಯಶಸ್ವಿಯಾಗಿ ಕ್ಯಾಚ್ ಹಿಡಿದರಾದರೂ ಮುಂಬಾಗದ ನಾಲ್ಕಕು ಹಲ್ಲುಗಳನ್ನು ಮುರಿದುಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೀಗಿತ್ತು ನೋಡಿ ಚಮಿಕಾ ಕರುಣರತ್ನೆ ಹಲ್ಲು ಮುರಿದುಕೊಂಡ ಕ್ಷಣ:

ಗಾಲೆ ಎದುರು ಗೆದ್ದು ಬೀಗಿದ ಕ್ಯಾಂಡಿ:  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗಾಲೆ ಗ್ಲಾಡಿಯೇಟರ್ಸ್‌ ತಂಡವು, ಕಾರ್ಲೋಸ್ ಬ್ರಾಥ್‌ವೇಟ್ ಹಾಗೂ ಜಹೂರ್ ಖಾನ್ ಮಾರಕ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇನ್ನು ಈ ಸಾಧಾರಣ ಗುರಿಯನ್ನು ಕ್ಯಾಂಡಿ ಫಾಲ್ಕನ್ಸ್ ತಂಡವು ಇನ್ನೂ 5 ಓವರ್ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು.

Ind vs Ban ಬಾಂಗ್ಲಾದೇಶ ಎದುರು ಸರಣಿ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಹೇಳಿದ್ದೇನು..?

ಕ್ಯಾಂಡಿ ಫಾಲ್ಕನ್ಸ್ ತಂಡದ ಪರ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಆಲ್ರೌಂಡರ್ ಕಾರ್ಲೋಸ್ ಬ್ರಾಥ್‌ವೇಟ್ 4 ಓವರ್ ಬೌಲಿಂಗ್‌ ಮಾಡಿ ಕೇವಲ 14 ರನ್ ನೀಡಿ 4 ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಂಧರ ವಿಶ್ವಕಪ್‌ಗೆ ಪಾಕಿಸ್ತಾನ ಸ್ಪರ್ಧೆ ಇಲ್ಲ

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಅಂಧರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸ್ಪರ್ಧಿಸುತ್ತಿಲ್ಲ. ಭಾರತ ಸರ್ಕಾರ ಪಾಕಿಸ್ತಾನ ತಂಡಕ್ಕೆ ವೀಸಾ ನೀಡಿಲ್ಲ ಎಂದು ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಮಹಾಂತೇಶ್‌ ಸ್ಪಷ್ಟಪಡಿಸಿದ್ದಾರೆ. ವೀಸಾ ವಿಳಂಬದ ಬಗ್ಗೆ ಪಾಕಿಸ್ತಾನ ಸಂಸ್ಥೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಭಾರತ ಸರ್ಕಾರ ವೀಸಾ ನೀಡಲು ಒಪ್ಪಿದೆ ಎಂದು ತಿಳಿದುಬಂದಿತ್ತು. ಆದರೆ ಪಾಕಿಸ್ತಾನ ತಂಡ ತಮ್ಮ ಪಾಸ್‌ಪೋರ್ಚ್‌ಗಳನ್ನು ಭಾರತೀಯ ರಾಯಭಾರಿ ಕಚೇರಿಗಳಿಂದ ಹಿಂಪಡೆದಾಗ ವೀಸಾ ನೀಡಿಲ್ಲ ಎನ್ನುವುದು ಗೊತ್ತಾಗಿದೆ.

ಬಾಂಗ್ಲಾ ಟೆಸ್ಟ್‌: ರೋಹಿತ್‌ ಬದಲು ಅಭಿಮನ್ಯು?

ನವದೆಹಲಿ: ಭಾರತ ‘ಎ’ ತಂಡದ ನಾಯಕ ಅಭಿಮನ್ಯು ಈಶ್ವರನ್‌ ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್‌ ಪಂದ್ಯಗಳ ಸರಣಿಗೆ ಭಾರತ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ನಾಯಕ ರೋಹಿತ್‌ ಶರ್ಮಾ 2ನೇ ಏಕದಿನ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದು, ಟೆಸ್ಟ್‌ ಸರಣಿಯಿಂದ ಹೊರಬೀಳಲಿದೆ ಎನ್ನಲಾಗಿದೆ. ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ ‘ಎ’ ತಂಡವನ್ನು ಮುನ್ನಡೆಸುತ್ತಿರುವ ಅಭಿಮನ್ಯು ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 141 ರನ್‌ ಗಳಿಸಿದ್ದರು. ಸದ್ಯ ಚಾಲ್ತಿಯಲ್ಲಿರುವ 2ನೇ ಪಂದ್ಯದಲ್ಲಿ 157 ರನ್‌ ಗಳಿಸಿದ್ದಾರೆ.

Follow Us:
Download App:
  • android
  • ios