ಆಸೀಸ್ ಎದುರು ಏಕದಿನ ತಂಡ ಕೂಡಿಕೊಂಡ ಟೀಂ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಜರಾಜನ್ ಟೀಂ ಇಂಡಿಯಾ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮುಂಬೈ(ನ.27): ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ಟಿ. ನಟರಾಜನ್‌ರನ್ನಯ ಬಿಸಿಸಿಐ ಆಯ್ಕೆ ಸಮಿತಿ ಏಕದಿನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಈ ಮೊದಲು ನಟರಾಜನ್ ಕೇವಲ ಟಿ20 ಸರಣಿಗೆ ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದರು.
ಆದರೆ ಶುಕ್ರವಾರದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ ಅವರನ್ನು ಏಕದಿನ ತಂಡಕ್ಕೆ ಸೇರ್ಪಡೆಗೊಳಿಸಿರುವುದಾಗಿ ಬಿಸಿಸಿಐನ ಹಿರಿಯರ ಆಯ್ಕೆ ಸಮಿತಿ ಖಚಿತಪಡಿಸಿದೆ.
ಇದರೊಂದಿಗೆ ಟಿ. ನಟರಾಜನ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಟಿ. ನಟರಾಜನ್ ಡೆತ್ ಓವರ್‌ನಲ್ಲೇ 71 ಯಾರ್ಕರ್ ಎಸೆತಗಳನ್ನು ಹಾಕಿ ಗಮನ ಸೆಳೆದಿದ್ದರು.
ಸ್ಟೀವ್ ಸ್ಮಿತ್ ಔಟ್ ಮಾಡೋದು ಹೇಗೆ? ಸಚಿನ್ ಕೊಟ್ರು ಉಪಯುಕ್ತ ಸಲಹೆ
ಮೊದಲ ಏಕದಿನ ಪಂದ್ಯದಲ್ಲಿ ಟಿ ನಟರಾಜನ್ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದಾರೆ. ಮುಂಬರುವ 2 ಏಕದಿನ ಪಂದ್ಯಗಳಲ್ಲಾದರೂ ಈ ವೇಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದನ್ನು ಕಾದುನೋಡಬೇಕಾಗಿದೆ.