2026ನೇ ವರ್ಷವು ಕ್ರೀಡಾಭಿಮಾನಿಗಳ ಪಾಲಿಗೆ ಮಹಾ ಸಂಭ್ರಮವನ್ನು ತರಲಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಕ್ರಿಕೆಟ್, ಫುಟ್ಬಾಲ್ ಹಾಗೂ ಹಾಕಿ ವಿಶ್ವಕಪ್‌ಗಳು ನಡೆಯಲಿದ್ದು, ಇದರ ಜೊತೆಗೆ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಬಹುರಾಷ್ಟ್ರೀಯ ಕ್ರೀಡಾಕೂಟಗಳೂ ಆಯೋಜನೆಗೊಂಡಿವೆ.

ಬೆಂಗಳೂರು: 2026 ಕ್ರೀಡಾಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದೆ. 2014ರ ಬಳಿಕ ಒಂದೇ ವರ್ಷದಲ್ಲಿ ಕ್ರಿಕೆಟ್, ಫುಟ್ಬಾಲ್ ಹಾಗೂ ಹಾಕಿ ವಿಶ್ವಕಪ್ ನೋಡುವ ಭಾಗ್ಯ ಕ್ರೀಡಾಭಿಮಾನಿಗಳಿಗೆ ಸಿಗಲಿದೆ. ಇದರ ಜತೆಗೆ ಮಹಿಳಾ ಟಿ20 ವಿಶ್ವಕಪ್, ಪುರುಷರ ಅಂಡರ್-19 ಕ್ರಿಕೆಟ್ ವಿಶ್ವಕಪ್ ಜತೆಗೆ ಕಾಮನ್‌ವೆಲ್ತ್ ಗೇಮ್ಸ್‌ ಹಾಗೂ ಏಷ್ಯನ್ ಗೇಮ್ಸ್‌ನಂತಹ ಮಲ್ಟಿ ನೇಷನ್ ಗೇಮ್ಸ್‌ ಕೂಡಾ ನಡೆಯಲಿದೆ. ಅಂತರಾಷ್ಟ್ರೀಯ ಟೂರ್ನಿಗಳ ಜತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡಾ ನಡೆಯಲಿದೆ.

ಇದರ ಜತೆಗೆ ಪ್ರತಿ ವರ್ಷದಂತೆ ನಡೆಯಲಿರುವ ನಾಲ್ಕು ಟೆನಿಸ್ ಗ್ರ್ಯಾನ್‌ಸ್ಲಾಂ, ಚೆಸ್ ವಿಶ್ವಕಪ್ ಸೇರಿದಂತೆ ವರ್ಷ ಪೂರ್ತಿ ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಯಾವ ತಿಂಗಳು ಯಾವೆಲ್ಲಾ ಕ್ರೀಡಾಕೂಟಗಳು ನಡೆಯಲಿವೆ ಎನ್ನುವುದರ ಸ್ಪೋರ್ಟ್ಸ್‌

ಜನವರಿ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

1. ವುಮೆನ್ಸ್ ಪ್ರೀಮಿಯರ್ ಲೀಗ್: ಜನವರಿ 09ರಿಂದ ಫೆಬ್ರವರಿ 05- ಭಾರತದ ಎರಡು ನಗರಗಳಲ್ಲಿ

2. ಪುರುಷರ ಅಂಡರ್-19 ವಿಶ್ವಕಪ್: ಜನವರಿ 15ರಿಂದ ಫೆಬ್ರವರಿ 06 - ಜಿಂಬಾಬ್ವೆಯ ಐದು ನಗರಗಳಲ್ಲಿ

3. ಆಸ್ಟ್ರೇಲಿಯನ್ ಓಪನ್: ಜನವರಿ 18ರಿಂದ ಜನವರಿ 31 - ಆಸ್ಟ್ರೇಲಿಯಾ(ಮೆಲ್ಬರ್ನ್‌)

ಫೆಬ್ರವರಿ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

4. ಪುರುಷರ ಟಿ20 ವಿಶ್ವಕಪ್: ಫೆಬ್ರವರಿ 07ರಿಂದ ಮಾರ್ಚ್ 08 - ಭಾರತ-ಶ್ರೀಲಂಕಾದ 7 ನಗರಗಳಲ್ಲಿ

ಮಾರ್ಚ್ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

5. ಇಂಡಿಯನ್ ಪ್ರೀಮಿಯರ್ ಲೀಗ್: ಮಾರ್ಚ್ 26ರಿಂದ ಮೇ 31 - ಭಾರತದ 10ಕ್ಕೂ ಹೆಚ್ಚು ನಗರಗಳಲ್ಲಿ

6. ಕ್ಯಾಂಡಿಡೇಟ್ಸ್‌ ಚೆಸ್ ಚಾಂಪಿಯನ್‌ಶಿಪ್: ಮಾರ್ಚ್ 29ರಿಂದ ಏಪ್ರಿಲ್ 16 - ಸೈಪ್ರಸ್

ಮೇ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

7. ಫ್ರೆಂಚ್ ಓಪನ್: ಮೇ 23ರಿಂದ ಜೂನ್ 06 - ಫ್ರಾನ್ಸ್‌(ಪ್ಯಾರಿಸ್)

ಜೂನ್ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

8. ಫುಟ್ಬಾಲ್ ವಿಶ್ವಕಪ್: ಜೂನ್ 11ರಿಂದ ಜುಲೈ 19ರ ವರೆಗೆ- ಯುಎಸ್‌ಎ, ಕೆನಡಾ, ಮೆಕ್ಸಿಕೋದ 16 ನಗರಗಳಲ್ಲಿ

9. ಮಹಿಳಾ ಟಿ20 ವಿಶ್ವಕಪ್: ಜೂನ್ 12ರಿಂದ ಜುಲೈ 05ರ ವರೆಗೆ - ಇಂಗ್ಲೆಂಡ್‌ನ ಆರು ನಗರಗಳಲ್ಲಿ

10. ವಿಂಬಲ್ಡನ್ ಚಾಂಪಿಯನ್‌ಶಿಪ್: ಜೂನ್ 21ರಿಂದ ಜುಲೈ 04ರ ವರೆಗೆ - ಇಂಗ್ಲೆಂಡ್(ಲಂಡನ್)

ಜುಲೈ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

11. ಕಾಮನ್‌ವೆಲ್ತ್ ಗೇಮ್ಸ್‌: ಜುಲೈ 23ರಿಂದ ಆಗಸ್ಟ್ 02ರ ವರೆಗೆ - ಸ್ಕಾಟ್ಲೆಂಡ್‌(ಗ್ಲಾಸ್ಗೋ)

ಆಗಸ್ಟ್‌ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

12. ಪುರುಷ&ಮಹಿಳಾ ಹಾಕಿ ವಿಶ್ವಕಪ್: ಆಗಸ್ಟ್‌ 14ರಿಂದ ಆಗಸ್ಟ್‌ 30ರ ವರೆಗೆ - ಬೆಲ್ಜಿಯಂ, ನೆದರ್‌ಲೆಂಡ್‌ನ ಎರಡು ನಗರಗಳಲ್ಲಿ.

13. ಯುಎಸ್ ಓಪನ್: ಆಗಸ್ಟ್‌ 30ರಿಂದ ಸೆಪ್ಟೆಂಬರ್ 12ರವರೆಗೆ - ಅಮೆರಿಕ(ನ್ಯೂಯಾರ್ಕ್)

ಸೆಪ್ಟೆಂಬರ್ ತಿಂಗಳಿನಲ್ಲಿನ ಸ್ಪೋರ್ಟ್ಸ್‌ ಕ್ಯಾಲೆಂಡರ್‌

14. ಏಷ್ಯನ್ ಗೇಮ್ಸ್‌: ಸೆಪ್ಟೆಂಬರ್ 19ರಿಂದ ಅಕ್ಟೋಬರ್ 04ರ ವರೆಗೆ- ಜಪಾನ್