Asianet Suvarna News Asianet Suvarna News

ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ

* ದಕ್ಷಿಣ ಆಫ್ರಿಕಾ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ

* ವರ್ಷಾಂತ್ಯದಲ್ಲಿ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ

* 3 ಟೆಸ್ಟ್, 3 ಎಕದಿನ ಹಾಗೂ 4 ಟಿ20 ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ

South Africa to host India 3 Format Cricket Series in year End kvn
Author
Johannesburg, First Published Sep 11, 2021, 12:27 PM IST

ಜೋಹಾನ್ಸ್‌ಬರ್ಗ್(ಸೆ.11)‌: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ವೇಳಾಪಟ್ಟಿಯಂತೆ ಈ ವರ್ಷಾಂತ್ಯದಲ್ಲಿ ಮೂರು ಮಾದರಿಯ ಕ್ರಿಕೆಟ್‌ ಸರಣಿಯನ್ನಾಡಲು ಟೀಂ ಇಂಡಿಯಾ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. 

ಈ ವರ್ಷ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿತು. ದಕ್ಷಿಣ ಆಫ್ರಿಕಾ ತವರಿನ ಸರಣಿಗಳು 2021ರ ನವೆಂಬರ್‌ನಿಂದ 2022ರ ಏಪ್ರಿಲ್‌ವರೆಗಿನ ವೇಳಾಪಟ್ಟಿ ಪ್ರಕಟಗೊಂಡಿದೆ.

ಇಂಗ್ಲೆಂಡ್ ತವರಿನ ಸರಣಿ ವೇಳಾಪಟ್ಟಿ: ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

ಡಿಸೆಂಬರ್ 17ರಿಂದ 2022ರ ಜನವರಿ 7ರ ವರೆಗೂ ಟೆಸ್ಟ್‌ ಸರಣಿ ನಿಗದಿಯಾಗಿದೆ. ಮೊದಲೆರಡು ಟೆಸ್ಟ್‌ ಪಂದ್ಯಗಳು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದರೆ, ಮೂರನೇ ಟೆಸ್ಟ್‌ ಪಂದ್ಯಕ್ಕೆ ಸೆಂಚುರಿಯನ್ ಆತಿಥ್ಯವನ್ನು ವಹಿಸಲಿದೆ. ಈ ಮೂರು ಟೆಸ್ಟ್‌ ಪಂದ್ಯಗಳು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿವೆ. ಜನವರಿ 11ರಿಂದ 16ರ ವರೆಗೂ ಏಕದಿನ ಸರಣಿ ನಡೆದರೆ, ಜನವರಿ 19ರಿಂದ ಜನವರಿ 26ರ ವರೆಗೂ ಟಿ20 ಸರಣಿ ನಡೆಯಲಿದೆ.

Follow Us:
Download App:
  • android
  • ios