ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ದಕ್ಷಿಣ ಆಫ್ರಿಕಾ ಲಗ್ಗೆ!
ಪಾಕಿಸ್ತಾನ ವಿರುದ್ಧದ ರೋಚಕ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಗೆಲುವಿನೊಂದಿಗೆ, ಫೈನಲ್‌ನ ಮೊದಲ ತಂಡವಾಗಿ ದಕ್ಷಿಣ ಆಫ್ರಿಕಾ ಹೊರಹೊಮ್ಮಿದೆ.
ಸೆಂಚೂರಿಯನ್: ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ರೋಚಕ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ, 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆ ಅಧಿಕೃತ ಪ್ರವೇಶ ಪಡೆದಿದೆ. ದ.ಆಫ್ರಿಕಾ ಈ ಬಾರಿ ಫೈನಲ್‌ಗೇರಿದ ಮೊದಲ ತಂಡವಾಗಿದ್ದು, ಮತ್ತೊಂದು ಸ್ಥಾನಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನೇರ ಪೈಪೋಟಿ ಇದೆ.
ಗೆಲುವಿಗೆ 148 ರನ್‌ಗಳ ಗುರಿ ಪಡೆದಿದ್ದ ದ.ಆಫ್ರಿಕಾ 3ನೇ ದಿನಾಂತ್ಯಕ್ಕೆ 3 ವಿಕೆಟ್‌ಗೆ 27 ರನ್ ಗಳಿಸಿತ್ತು. ತಂಡ ಭಾನುವಾರವೂ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. 99ಕ್ಕೆ 8 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ತಂಡವನ್ನು, ಮಾರ್ಕೊ ಯಾನ್ಸನ್ (16) ಹಾಗೂ ಕಗಿಸೊ ರಬಾಡ(31) ಗೆಲ್ಲಿಸಿದರು.
ಹರ್ಯಾಣಕ್ಕೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ!
ಈ ಗೆಲುವಿನೊಂದಿಗೆ ವಿಶ್ವಟೆಸ್ಟ್ ಅಂಕಪಟ್ಟಿ ಯಲ್ಲಿ ದ.ಆಫ್ರಿಕಾ ಶೇ.66.67 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನ ಭದ್ರಪಡಿಸಿ, ಫೈನಲ್‌ಗೇರಿತು. ಆಸ್ಟ್ರೇಲಿಯಾ ಶೇ.58.89 ಗೆಲುವಿನ ಪ್ರತಿಶತದೊಂದಿಗೆ 2ನೇ, ಭಾರತ (ಶೇ.55.88) 3ನೇ ಸ್ಥಾನದಲ್ಲಿದೆ. ಇತ್ತಂಡಗಳ ನಡುವಿನ ಸರಣಿಯಲ್ಲೇ ಫೈನಲ್‌ನ ಮತ್ತೊಂದು ತಂಡ ಯಾವುದು ಎಂಬ ಕುತೂಹಲಕ್ಕೆ ತೆರೆ ಬೀಳಬಹುದು.
ಟೆಸ್ಟ್ ಕ್ರಿಕೆಟ್‌ನಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಅದ್ಭುತ ಪ್ರದರ್ಶನ ತೋರುತ್ತಾ ಮುನ್ನುಗ್ಗುತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಹರಿಣಗಳ ಪಡೆ ಎದುರು ನೋಡುತ್ತಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ ಕಾಂಗರೂಗಳು, 333 ಬೃಹತ್ ಮುನ್ನಡೆ
ಮೆಲ್ಬರ್ನ್ ಟೆಸ್ಟ್‌ಗೆ ನಾಲ್ಕು ದಿನ 299,329 ಪ್ರೇಕ್ಷಕರು: ಬಾಕ್ಸಿಂಗ್ ಡೇ ದಾಖಲೆ!
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯವನ್ನು 4 ದಿನಗಳಲ್ಲಿ ಒಟ್ಟಾರೆ 299,329 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಿದ್ದಾರೆ. ಇದು ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲೇ ಹೊಸ ದಾಖಲೆ.
ಈ ಮೊದಲು 2013ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ 271,865 ಪ್ರೇಕ್ಷಕರು ಆಗಮಿಸಿದ್ದರು. ಇನ್ನು, 2014ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್‌ಗೆ 194,481 ಪ್ರೇಕ್ಷಕರು ಆಗಮಿಸಿದ್ದು ಈ ವರೆಗೂ ಇತ್ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ನ ದಾಖಲೆಯಾಗಿತ್ತು.