Asianet Suvarna News Asianet Suvarna News

ಶ್ರೀಲಂಕಾ ಎದುರು ಟಿ20 ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

* ಲಂಕಾ ಎದುರು ಟಿ20 ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

* 3-0 ಅಂತರದಲ್ಲಿ ಟಿ20 ಸರಣಿ ಕ್ಲೀನ್ ಸ್ವೀಪ್‌ ಮಾಡಿದ ಹರಿಣಗಳ ಪಡೆ

* ಲಂಕಾ ಎದುರು ಸುಲಭ ಗೆಲುವು ದಾಖಲಿಸಿದ ಆಫ್ರಿಕಾ

South Africa Cricket Team beats Sri Lanka by 10 wickets sweeps T20I series kvn
Author
Colombo, First Published Sep 15, 2021, 4:04 PM IST
  • Facebook
  • Twitter
  • Whatsapp

ಕೊಲಂಬೊ(ಸೆ.15): ರೀಜಾ ಹೆಂಡ್ರಿಕ್ಸ್‌ ಹಾಗೂ ಕ್ವಿಂಟನ್ ಡಿ ಕಾಕ್‌ ಅಜೇಯ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ದಕ್ಷಿಣ ಆಫ್ರಿಕಾ 3-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಕೊಲಂಬೊದಲ್ಲಿ ನಡೆದ ಶ್ರೀಲಂಕಾ ನೀಡಿದ್ದ 121 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 14.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿದೆ. ಕ್ವಿಂಟನ್ ಡಿ ಕಾಕ್‌ 59 ರನ್‌ ಸಿಡಿಸಿದರೆ, ರೀಜಾ ಹೆಂಡ್ರಿಕ್ಸ್‌ 56 ರನ್‌ ಬಾರಿಸಿದರು. 

ಕೊಹ್ಲಿ ನಾಯಕತ್ವ ಬದಲಾವಣೆ: ಕೊನೆಗೂ ತುಟಿಬಿಚ್ಚಿದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ..!

ಮೊದಲೆರಡು ಟಿ20 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡು ಬೀಗಿದ್ದ ಕೊನೆಯ ಟಿ20 ಪಂದ್ಯದಲ್ಲೂ ಅರ್ಹ ಗೆಲುವು ದಾಖಲಿಸಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಟಿ20 ತಂಡದಲ್ಲಿ ಸತತ 7ನೇ ಗೆಲುವು ದಾಖಲಿಸಿತು. ಏಕದಿನ ಸರಣಿ ಸೋಲಿನ ಬಳಿಕ ನಮ್ಮ ಹುಡುಗರು ಉತ್ತಮ ಪ್ರದರ್ಶನ ತೋರಿದರು. ಇದರೊಂದಿಗೆ ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ಉತ್ತಮ ತಯಾರಿಯಾಗಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಕೇಶವ್ ಮಹಾರಾಜ್‌ ಹೇಳಿದ್ದಾರೆ.

ಲಂಕಾ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವು ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಲಂಕಾಗೆ ಶರಣಾಗಿತ್ತು. 
 

Follow Us:
Download App:
  • android
  • ios