ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಭಾರತ ಎದುರಿನ 4 ಪಂದ್ಯಗಳ ಟಿ20 ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

South Africa announce squad for home T20I series against India kvn

ಜೋಹಾನ್ಸ್‌ಬರ್ಗ್‌: ಭಾರತ ವಿರುದ್ಧ ನ.8ರಿಂದ ಆರಂಭಗೊಳ್ಳಲಿರುವ 4 ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ವೇಗಿಗಳಾದ ಮಾರ್ಕೊ ಯಾನ್ಸನ್‌ ಹಾಗೂ ಗೆರಾಲ್ಡ್‌ ಕೋಟ್ಜೀ ತಂಡಕ್ಕೆ ಮರಳಿದ್ದಾರೆ. ಮಿಹ್‌ಲಾಲಿ ಪೊಂಗ್‌ವಾನಾ ಹಾಗೂ ಆ್ಯಂಡಿಲೆ ಸಿಮೆಲೇನ್‌ ಮೊದಲ ಬಾರಿ ತಂಡದಲ್ಲಿ ಸ್ಥಾನ ಗಿಟ್ಟಿಕೊಂಡಿದ್ದಾರೆ. ಏಡನ್‌ ಮಾರ್ಕ್‌ರಮ್‌ ನಾಯಕತ್ವ ವಹಿಸಲಿದ್ದಾರೆ. ಪಂದ್ಯಗಳು ನ.8, 10, 12 ಹಾಗೂ 15ರಂದು ನಡೆಯಲಿವೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಏಯ್ಡನ್ ಮಾರ್ಕ್‌ರಮ್ ಜತೆಗೆ ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್, ಹೈನ್ರಿಚ್ ಕ್ಲಾಸೆನ್. ಟ್ರಿಸ್ಟನ್ ಸ್ಟಬ್ಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ಬಲ ಹೊಂದಿದ್ದು, ಭಾರತಕ್ಕೆ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆಯಿದೆ.

ಭಾರತ ಎದುರಿನ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ:
ಏಯ್ಡನ್ ಮಾರ್ಕ್‌ರಮ್(ನಾಯಕ), ಬಾರ್ಟ್‌ಮ್ಯಾನ್‌, ಗೆರಾಲ್ಡ್ ಕೋಟ್ಜೀ, ಡೊನೊವನ್‌ ಫೆರಿಯೆರಾ, ರೀಜಾ ಹೆಂಡ್ರಿಕ್‌, ಮಾರ್ಕೊ ಯಾನ್ಸನ್‌, ಹೈನ್ರಿಚ್‌ ಕ್ಲಾಸೆನ್‌, ಪ್ಯಾಟ್ರಿಕ್‌ ಕ್ರಗರ್‌, ಕೇಶವ್‌ ಮಹಾರಾಜ್‌, ಡೇವಿಡ್‌ ಮಿಲ್ಲರ್‌, ಮಿಹ್‌ಲಾಲಿ, ಎನ್‌ಖಾಬ ಪೀಟರ್‌, ರ್‍ಯಾನ್‌ ರಿಕೆಲ್ಟನ್‌, ಆ್ಯಂಡಿಲೆ, ಲುಥೊ ಸಿಪಾಮ್ಲ, ಟ್ರಿಸ್ಟನ್‌ ಸ್ಟಬ್ಸ್‌.

ಮುಂಬೈ ಟೆಸ್ಟ್‌ನಲ್ಲಿ ಜಡೇಜಾ ಮಾರಕ ದಾಳಿ; ಸಾಧಾರಣ ಮೊತ್ತಕ್ಕೆ ಕಿವೀಸ್ ಆಲೌಟ್!

ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ: 
ಸೂರ್ಯಕುಮಾರ್‌ (ನಾಯಕ), ಅಭಿಷೇಕ್‌ ಶರ್ಮಾ, ಸ್ಯಾಮ್ಸನ್‌, ರಿಂಕು ಸಿಂಗ್‌, ತಿಲಕ್‌ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್‌, ಅಕ್ಷರ್‌, ರಮಣ್‌ದೀಪ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌, ಅರ್ಶ್‌ದೀಪ್‌, ವೈಶಾಖ್‌ ವಿಜಯ್‌ಕುಮಾರ್‌, ಆವೇಶ್‌ ಖಾನ್‌, ಯಶ್‌ ದಯಾಳ್‌.

ಹಾಂಕಾಂಗ್‌ ಸಿಕ್ಸಸ್‌: ಪಾಕ್‌ ವಿರುದ್ಧ ಭಾರತಕ್ಕೆ ಸೋಲು

ಹಾಂಕಾಂಗ್‌: ಹಾಂಕಾಂಗ್‌ ಅಂ.ರಾ. ಸಿಕ್ಸಸ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದೆ. ಪ್ರತಿ ತಂಡದಲ್ಲಿ ತಲಾ 6 ಆಟಗಾರರು ಇರಲಿದ್ದು, ಪಂದ್ಯವು ತಲಾ 6 ಓವರ್‌ಗಳನ್ನು ಒಳಗೊಂಡಿರಲಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 6 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 119 ರನ್‌ ಸಿಡಿಸಿತು. ಕರ್ನಾಟಕದ ರಾಬಿನ್‌ ಉತ್ತಪ್ಪ ತಂಡದ ನಾಯಕರಾಗಿದ್ದು, ಅವರು 8 ಎಸೆತದಲ್ಲಿ 31 ರನ್‌ ಚಚ್ಚಿದ್ದರು. ರಾಜ್ಯದ ಮತ್ತೊಬ್ಬ ಆಟಗಾರ ಭರತ್‌ ಚಿಪ್ಲಿ 16 ಎಸೆತದಲ್ಲಿ 53 ರನ್‌ ಬಾರಿಸಿದರು. ಭಾರತದ ಇನ್ನಿಂಗ್ಸಲ್ಲಿ 8 ಸಿಕ್ಸರ್‌ಗಳಿದ್ದವು.

ಇಲ್ಲಿದೆ ನೋಡಿ ಎಲ್ಲಾ 10 ಐಪಿಎಲ್ ತಂಡಗಳ ರೀಟೈನ್ ಆಟಗಾರರ ಕಂಪ್ಲೀಟ್ ಡೀಟೈಲ್ಸ್‌!

ಪಾಕಿಸ್ತಾನ ವಿಕೆಟ್‌ ನಷ್ಟವಿಲ್ಲದೆ 5 ಓವರಲ್ಲೇ 121 ರನ್‌ ಗಳಿಸಿ ಗುರಿ ತಲುಪಿತು. ಅಸಿಫ್‌ ಅಲಿ 14 ಎಸೆತದಲ್ಲಿ 55 ರನ್‌ ಗಳಿಸಿ ರಿಟೈರ್ಡ್‌ ಹರ್ಟ್‌ ಆಗಿ ಹೊರನಡೆದರು. ಮುಹಮ್ಮದ್‌ ಅಖ್ಲಾಕ್‌ 12 ಎಸೆತದಲ್ಲಿ 40 ರನ್‌ ಸಿಡಿಸಿದರೆ, ನಾಯಕ ಫಹೀಂ ಅಶ್ರಫ್‌ 5 ಎಸೆತದಲ್ಲಿ 22 ರನ್‌ ಬಾರಿಸಿದರು. ಪಾಕ್‌ ಇನ್ನಿಂಗ್ಸಲ್ಲಿ 14 ಸಿಕ್ಸರ್‌ಗಳಿದ್ದವು. ಶನಿವಾರ ಭಾರತ ತನ್ನ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿವೆ. ಶನಿವಾರವೇ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಭಾನುವಾರ ಸೆಮಿಫೈನಲ್‌, ಫೈನಲ್‌ ಪಂದ್ಯ ನಿಗದಿಯಾಗಿದೆ.

Latest Videos
Follow Us:
Download App:
  • android
  • ios