Asianet Suvarna News Asianet Suvarna News

ಕ್ರೀಡಾ ಜಗತ್ತಿನಲ್ಲಿ ಮುಗಿಯದ ಸಾವಿನ ಶೋಕ... 3 ತಿಂಗಳು, 3 ದಿಗ್ಗಜರ ಸಾವು!

ಕಳೆದ ಮೂರು ತಿಂಗಳು ಕ್ರೀಡಾ ಜಗತ್ತು, ವಿಶ್ವ ಕ್ರಿಕೆಟ್ ಹಾಗೂ ಆಸ್ಟ್ರೇಲಿಯಾದ ಪಾಲಿಗೆ ಅತ್ಯಂತ ಕರಾಳ ಕ್ಷಣಗಳು. ಈ ಮೂರು ತಿಂಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತನ್ನ ದಿಗ್ಗಜ ಕ್ರಿಕೆಟಿಗರಾದ ರಾಡ್ ಮಾರ್ಷ್, ಶೇನ್ ವಾರ್ನ್ ಹಾಗೂ ಶ್ರೇಷ್ಠ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್‌ ಅವರನ್ನು ಕಳೆದುಕೊಂಡಿದೆ. ಒಂದು ಸಾವನ್ನು ಅರಗಿಸಿಕೊಳ್ಳುವ ಮುನ್ನವೇ ಇನ್ನೊಂದು ಸಾವು ಆಸೀಸ್ ಕ್ರೀಡಾ ಲೋಕಕ್ಕೆ ಬಂದಪ್ಪಳಿಸಿದೆ.
 

sorrow continue in world of Cricket sports and australia 3 months 3 death shane warne rodney marsh andrew symonds death san
Author
Bengaluru, First Published May 15, 2022, 10:46 AM IST

ಮೆಲ್ಬೋರ್ನ್ (ಮೇ. 15): ಭಾನುವಾರ ಬೆಳಗ್ಗೆ ಕ್ರೀಡಾ ಲೋಕಕ್ಕೆ ಮತ್ತೊಂದು ದುಃಖದ ಸುದ್ದಿ ಹೊರಬಿದ್ದಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ (Andrew Symonds Death). ಮುಂದಿನ ತಿಂಗಳು ಜೂನ್ 9 ರಂದು 47ನೇ ವರ್ಷಕ್ಕೆ ಕಾಲಿಡಬೇಕಿದ್ದ ಆಂಡ್ರ್ಯೂ ಸೈಮಂಡ್ಸ್‌ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಕಳೆದ 3 ತಿಂಗಳಲ್ಲಿ ಈ ಮೂರನೇ ಹಿರಿಯ ಕ್ರಿಕೆಟಿಗ ಸಾವನ್ನಪ್ಪಿದ್ದು, ಮೂವರೂ ಆಸ್ಟ್ರೇಲಿಯಾದವರು (Australia) ಎನ್ನುವುದು ಅಚ್ಚರಿಯ ವಿಚಾರ.

ಈ ಪರಿಸ್ಥಿತಿಯಲ್ಲಿ ಕಳೆದ ಮೂರು ತಿಂಗಳು ಆಸ್ಟ್ರೇಲಿಯಾ ಕ್ರಿಕೆಟ್ (Australia Cricket) ಪಾಲಿಗೆ ಅತ್ಯಂತ ಕಠಿನ ಸಮಯ ಎನಿಸಿದೆ. ಈ ಮೂವರು ಕ್ರಿಕೆಟಿಗರು ಆಸೀಸ್ ನ ದಿಗ್ಗಜ ಕ್ರಿಕೆಟಿಗರು. ಒಂದಲ್ಲಾ ಒಂದು ಸಂದರ್ಭದಲ್ಲಿ ಆಸೀಸ್ ಸುವರ್ಣ ದಶಕದಲ್ಲಿ ಆಡಿದಂಥ ಆಟಗಾರರಾಗಿದ್ದಾರೆ. ಇದರಿಂದ ಕ್ರೀಡಾ ಲೋಕದಲ್ಲೂ ಶೋಕ ಮಡುಗಟ್ಟಿದೆ. ಮೊದಲನೆಯದಾಗಿ, ಮಾರ್ಚ್ 4 ರಂದು ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಡ್ ಮಾರ್ಷ್ (Rod Marsh) ನಿಧನರಾದರು.

ಮಾರ್ಚ್ 4 ರಂದು, ವಿಶ್ವಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (Shane Warne) ಕೂಡ ಇನ್ನಿಲ್ಲ ಎಂಬ ಎರಡನೇ ಸುದ್ದಿ ಬಂದಿತು. 74 ವರ್ಷದ ರಾಡ್ ಮಾರ್ಷ್ ಅವರಂತೆ 52 ವರ್ಷದ ವಾರ್ನ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಾಗಿ ಮೂರು ತಿಂಗಳ ಬಳಿಕ ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಜಗತ್ತಿಗೆ ವಿದಾಯ ಹೇಳಿದ್ದಾರೆ.

ಹೃದಯಾಘಾತದಿಂದ ಕೋಮಾಕ್ಕೆ ಜಾರಿದ್ದ ರಾಡ್ ಮಾರ್ಷ್: ಆಸ್ಟ್ರೇಲಿಯಾದ ಮಾಜಿ ದಿಗ್ಗಜ ರಾಡ್ ಮಾರ್ಷ್ ಹೃದಯಾಘಾತದಿಂದ ರಾಯಲ್ ಅಡಿಲೇಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅದರ ನಂತರ ಅವರು ಕೋಮಾಗೆ ಜಾರಿದ್ದರು. ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾರ್ಚ್ 4 ರಂದು ನಿಧನರಾದರು. ವೇಗಿ ಡೆನ್ನಿಸ್ ಲಿಲ್ಲಿ ಅವರೊಂದಿಗೆ ವಿಕಟ್ ಕೀಪರ್ ಮಾರ್ಷ್ ಜೊತೆಯಾಟವನ್ನು ಇಂದಿಗೂ ವಿಶ್ವ ಕ್ರಿಕೆಟ್ ಸ್ಮರಣೀಯವಾಗಿ ನೆನಪಿಸಿಕೊಳ್ಳುತ್ತದೆ. ಇವರಿಬ್ಬರೂ ಸೇರಿ ಟೆಸ್ಟ್ ಕ್ರಿಕೆಟ್ ನಲ್ಲಿ95 ವಿಕೆಟ್ ಉರುಳಿಸಿದ್ದರು. 96 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮಾರ್ಷ್, ಮೂರು ಟೆಸ್ಟ್ ಶತಕಗಳನ್ನು ಬಾರಿಸಿದ್ದರು. ಅದರಲ್ಲದೆ, ವಿಕೆಟ್ ನ ಹಿಂದೆ 355 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿರುವ ದಾಖಲೆ ಇವರ ಬೆನ್ನಿಗಿದೆ.

ಥಾಯ್ಲೆಂಡ್ ನಲ್ಲಿ ವಿಹಾರದಲ್ಲಿರುವಾಗಲೇ ಸಾವು ಕಂಡ ವಾರ್ನ್: ಶೇನ್ ವಾರ್ನ್ ಮಾರ್ಚ್ 4 ರಂದು 52 ನೇ ವಯಸ್ಸಿನಲ್ಲಿ ನಿಧನರಾದರು. ಶೇನ್ ವಾರ್ನ್ ಅವರು ವಿಹಾರಕ್ಕಾಗಿ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ವಾಸವಿದ್ದರು. ವಾರ್ನ್ ತಮ್ಮ ಸ್ವಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ವಾರ್ನ್ ತಮ್ಮ 145 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಮುತ್ತಯ್ಯ ಮುರಳೀಧರನ್ (800 ವಿಕೆಟ್) ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕವಾಗಿದೆ. ವಾರ್ನ್ 194 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಕಬಳಿಸಿದ್ದಾರೆ. ಶೇನ್ ವಾರ್ನ್ ತಮ್ಮ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಮಾಡಿದರು. 2008 ರ ಮೊದಲ ಋತುವಿನ ಅಂತಿಮ ಪಂದ್ಯದಲ್ಲಿ, ವಾರ್ನ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಸೋಲಿಸಿತು. ವಾರ್ನ್ 29 ಐಪಿಎಲ್ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 25.39 ಸರಾಸರಿಯಲ್ಲಿ 57 ವಿಕೆಟ್‌ಗಳನ್ನು ಪಡೆದರು.

Andrew Symonds: ಆಕ್ಸಿಡೆಂಟ್‌ನಲ್ಲಿ ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಸೈಮಂಡ್ಸ್ ದುರಂತ ಸಾವು..!

ಜಗತ್ತಿಗೆ ವಿದಾಯ ಹೇಳಿದ ಸೈಮಂಡ್ಸ್:
ಈಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕೂಡ ಜಗತ್ತಿಗೆ ವಿದಾಯ ಹೇಳಿದ್ದಾರೆ. ಶನಿವಾರ (ಮೇ 14) ರಾತ್ರಿ 10:30 ರ ಸುಮಾರಿಗೆ ಕಾರು ಅಪಘಾತದಲ್ಲಿ ನಿಧನರಾದರು. ನಗರದ ಪಶ್ಚಿಮಕ್ಕೆ ಸುಮಾರು 50 ಕಿಮೀ ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಶನಿವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ. ಸೈಮಂಡ್ಸ್ ಮುಂದಿನ ತಿಂಗಳು ಜೂನ್ 9 ರಂದು 47 ನೇ ವರ್ಷಕ್ಕೆ ಕಾಲಿಡುವವರಿದ್ದರು.

#RIPAndrewSymonds: ಸೈಮಂಡ್ಸ್‌ ನಿಧನಕ್ಕೆ ಕಂಬನಿ ಮಿಡಿದ ಹರ್ಭಜನ್ ಸಿಂಗ್‌..!

ಸೈಮಂಡ್ಸ್ ತಮ್ಮ ವೃತ್ತಿಜೀವನದಲ್ಲಿ 26 ಟೆಸ್ಟ್, 198 ಏಕದಿನ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ 1462 ರನ್, ಏಕದಿನದಲ್ಲಿ 5088 ರನ್ ಮತ್ತು ಟೆಸ್ಟ್‌ನಲ್ಲಿ 337 ರನ್, ಏಕದಿನದಲ್ಲಿ 5088 ರನ್ ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ. ಸೈಮಂಡ್ಸ್ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ 39 ಪಂದ್ಯಗಳನ್ನು ಆಡಿದ್ದು, 974 ರನ್ ಗಳಿಸಿದ್ದಾರೆ.

Follow Us:
Download App:
  • android
  • ios