Andrew Symonds: ಆಕ್ಸಿಡೆಂಟ್‌ನಲ್ಲಿ ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಸೈಮಂಡ್ಸ್ ದುರಂತ ಸಾವು..!

* ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌

* ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಸೈಮಂಡ್ಸ್‌

* ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 26 ಟೆಸ್ಟ್ ಹಾಗೂ 198 ಏಕದಿನ ಪಂದ್ಯ

Australian Cricket Star Andrew Symonds Dies In Car Crash kvn

ಮೆಲ್ಬೊರ್ನ್‌(ಮೇ.15): ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಪೋಟಕ ಆಲ್ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌, ಕಾರು ಅಪಘಾತದಲ್ಲಿ (Andrew Symonds Car Accident) ದುರಂತ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ದಿಗ್ಗಜರಾದ ಶೇನ್ ವಾರ್ನ್‌ (Shane Warne), ರಾಡ್ ಮಾರ್ಷ್ ನಿಧನರಾಗಿರುವ ಕಹಿ ಸುದ್ದಿ ಮಾಸುವ ಮುನ್ನವೇ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಕೊನೆಯುಸಿರೆಳೆದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ಗೆ 46 ವರ್ಷ ವಯಸ್ಸಾಗಿತ್ತು.

46 ವರ್ಷದ ಆಂಡ್ರ್ಯೂ ಸೈಮಂಡ್ಸ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 26 ಟೆಸ್ಟ್ ಹಾಗೂ 198 ಏಕದಿನ ಪಂದ್ಯಗಳನ್ನಾಡಿದ್ದಾರೆ. ಶನಿವಾರ ತಡರಾತ್ರಿ ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ಟೌನ್ಸ್‌ವಿಲ್ಲೇ ನಗರದ ಹೊರಭಾಗದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್‌ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಆಂಡ್ರ್ಯೂ ಸೈಮಂಡ್ಸ್ ಒಬ್ಬರೇ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.

ಅಪಘಾತ ನಡೆದ ತಕ್ಷಣವೇ ಪೊಲೀಸರು ತಕ್ಷಣವೇ ತುರ್ತು ಸೇವೆಯನ್ನು ಒದಗಿಸಲು ಮುಂದಾಗಿದ್ದರು. ಆದರೆ ಕಾರು ಪಲ್ಟಿಹೊಡೆದು, ರಸ್ತೆಯ ಮಧ್ಯದಲ್ಲೇ ಬಿದ್ದಿದ್ದರಿಂದ ತೀವ್ರ ಇಂಜರಿಯಾಗಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು. 

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಮತ್ತೊಬ್ಬ ಶ್ರೇಷ್ಠ ಆಟಗಾರರನ್ನು ಕಳೆದುಕೊಂಡಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಚೇರ್‌ಮನ್‌ ಲಾಚನ್ ಹೆಂಡರ್‌ಸನ್‌ ಪತ್ರಿಕಾ ಪ್ರಕಟಣೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ ಶತಮಾನದ ಪ್ರತಿಭಾನ್ವಿತ ಆಲ್ರೌಂಡರ್‌ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ವಿಶ್ವಕಪ್ ಯಶಸ್ಸಿನ ಹಿಂದೆ ಹಾಗೂ ಕ್ವೀನ್ಸ್‌ಲ್ಯಾಂಡ್‌ ಪರ ಅಮೋಘ ಪ್ರದರ್ಶನ ತೋರಿದ್ದರು ಎಂದು ಹೇಳಿದ್ದಾರೆ. 

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರಾದ ರಾಡ್ ಮಾರ್ಷ್‌ ಹಾಗೂ ಶೇನ್ ವಾರ್ನ್‌ ಕೊನೆಯುಸಿರೆಳೆದು ತಿಂಗಳು ಕಳೆಯುವ ಮುನ್ನವೇ ಭೀಕರ ರಸ್ತೆ ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್ ಕೊನೆಯುಸಿರೆಳೆದಿದ್ದಾರೆ. ದುರಾದೃಷ್ಟವಶಾತ್, ಈ ವರ್ಷ ನಾವು ಈ ರೀತಿಯ ಹಲವು ದುರಂತಗಳಿಗೆ ಸಾಕ್ಷಿಯಾಗಿದ್ದೇವೆ. ನಾನು ಈ ವಿಚಾರವನ್ನು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಇದು ಕ್ರಿಕೆಟ್‌ ಲೋಕದ ಮತ್ತೊಂದು ದುರಂತ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಾರ್ಕ್‌ ಟೇಲರ್‌ ಚಾನೆಲ್ ನೈನ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Pat Cummins: ಐಪಿಎಲ್‌ನಿಂದ ಹೊರಬಿದ್ದ ಕೆಕೆಆರ್ ಸ್ಟಾರ್ ಆಟಗಾರ..!

ಆಂಡ್ರ್ಯೂ ಸೈಮಂಡ್ಸ್‌, ಆಸ್ಟ್ರೇಲಿಯಾ ಕ್ರಿಕೆಟ್ ಕಂಡಂತಹ (Australia Cricket Team) ಅತ್ಯಂತ ಯಶಸ್ವಿ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿದ್ದರು. ಬೌಲಿಂಗ್‌ನಲ್ಲಿ ಸಮಯಕ್ಕೆ ತಕ್ಕಂತೆ ಆಫ್‌ಸ್ಪಿನ್ ಹಾಗೂ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಿದ್ದ ಸೈಮಂಡ್ಸ್‌, ಬ್ಯಾಟಿಂಗ್‌ನಲ್ಲಿ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 2003 ಹಾಗೂ 2007ರ ಐಸಿಸಿ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಆಂಡ್ರ್ಯೂ ಸೈಮಂಡ್ಸ್‌ ಮಹತ್ತರ ಪಾತ್ರ ವಹಿಸಿದ್ದರು. ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾತ್ರವಲ್ಲದೇ ಸೈಮಂಡ್ಸ್‌ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕವೂ ಗಮನ ಸೆಳೆದಿದ್ದರು. ಇನ್ನು ದೇಸಿ ಕ್ರಿಕೆಟ್‌ನಲ್ಲಿ ಸೈಮಂಡ್ಸ್‌ 17 ಆವೃತ್ತಿಗಳಲ್ಲಿ ಕ್ವೀನ್ಸ್‌ಲ್ಯಾಂಡ್‌ ಪ್ರತಿನಿಧಿಸಿದ್ದರು. ಇದರ ಜತೆಗೆ ಕೌಂಟಿ ಕ್ರಿಕೆಟ್‌ನಲ್ಲಿ ಗ್ಲೌಸೆಸ್ಟರ್‌ಸ್ಟೈರ್, ಕೆಂಟ್, ಲಾನ್ಸ್‌ಸೈರ್ ಹಾಗೂ ಸರ್ರೆ ತಂಡಗಳನ್ನು ಪ್ರತಿನಿಧಿಸಿದ್ದರು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಸೈಮಂಡ್ಸ್‌ ಕಾಣಿಸಿಕೊಂಡಿದ್ದರು.

Latest Videos
Follow Us:
Download App:
  • android
  • ios