ನಾಥ್‌ರ್‍ಸೌಂಡ್‌(ಆ್ಯಂಟಿಗಾ): ವೆಸ್ಟ್‌ಇಂಡೀಸ್‌ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಲಂಕಾ ಬ್ಯಾಟ್ಸ್‌ಮನ್‌ ಗುಣತಿಲಕ ಕ್ಷೇತ್ರ ರಕ್ಷಣೆಗೆ ಅಡ್ಡಿಪಡಿಸಿ ಔಟಾದರು. ಆದರೆ ಈ ಪ್ರಸಂಗ ವಿವಾದಕ್ಕೆ ಕಾರಣವಾಗಿದೆ. 

ಲಂಕಾ ಇನ್ನಿಂಗ್ಸ್‌ನ 21ನೇ ಓವರ್‌ ವೇಳೆ ಗುಣತಿಲಕ ರನ್‌ಗಾಗಿ ಕೆಲ ದೂರ ಓಡಿದ್ದಾಗ ವಿಂಡೀಸ್‌ ನಾಯಕ ಕಿರೋನ್‌ ಪೊಲ್ಲಾರ್ಡ್‌ ಚೆಂಡನ್ನು ಕೈಗೆತ್ತಿಕೊಳ್ಳಲು ಧಾವಿಸಿದರು. ಈ ಸಂದರ್ಭದಲ್ಲಿ ಗುಣತಿಲಕ ಕ್ರೀಸ್‌ಗೆ ವಾಪಸಾಗುವ ವೇಳೆ ಚೆಂಡಿನ ಮೇಲೆ ಕಾಲಿಟ್ಟರು.

ಈ ವೇಳೆ ಅವರ ಕಾಲಿನ ಹಿಂಬದಿಗೆ ತಗುಲಿ ಚೆಂಡು ಕೀಪರ್‌ನತ್ತ ಸಾಗಿತು. ರನೌಟ್‌ ಮಾಡಲು ಬಂದ ಪೊಲ್ಲಾರ್ಡ್‌, ಕ್ಷೇತ್ರರಕ್ಷಣೆಗೆ ಅಡ್ಡಿಪಡಿಸಿದ್ದಾಗಿ ಅಂಪೈರ್‌ ಬಳಿ ದೂರಿ ಔಟ್‌ ನೀಡುವಂತೆ ಮನವಿ ಸಲ್ಲಿಸಿದರು. ಆನ್‌ಫೀಲ್ಡ್‌ ಅಂಪೈರ್‌ ಜೋ ವಿಲ್ಸನ್‌ 3ನೇ ಅಂಪೈರ್‌ಗೆ ತೀರ್ಪು ವರ್ಗಾಯಿಸುವ ಮೊದಲು ಸಾಫ್ಟ್‌ ಸಿಗ್ನಲ್‌ ಔಟ್‌ ಎಂದು ಘೋಷಿಸಿದ್ದರು. ಗುಣತಿಲಕ ಉದ್ದೇಶಪೂರ್ವಕವಾಗಿ ಕ್ಷೇತ್ರ ರಕ್ಷಣೆಗೆ ಅಡ್ಡಿಪಡಿಸಿದ್ದಾರೆ ಎನ್ನುವುದು ಖಚಿತವಾಗದಿದ್ದರೂ ಆನ್‌ಫೀಲ್ಡ್‌ ಅಂಪೈರ್‌ ಸಾಫ್ಟ್‌ ಸಿಗ್ನಲ್‌ ಔಟ್‌ ಎಂದು ಘೋಷಿಸಿದ್ದ ಕಾರಣ 3ನೇ ಅಂಪೈರ್‌ ಔಟ್‌ ಎನ್ನುವ ತೀರ್ಮಾನಕ್ಕೆ ಬಂದರು.

ಟಿ20 ಕ್ರಿಕೆಟ್‌: ಟೀಂ ಇಂಡಿಯಾಗೆ ಮತ್ತೆ ನಂ.1 ಆಗುವ ಗುರಿ

ಈ ಘಟನೆ ಸಾಮಾಜಿಕ ತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಂಡೀಸ್‌ ಆಟಗಾರರು ಕ್ರೀಡಾ ಸ್ಫೂರ್ತಿ ಮರೆತು ವರ್ತಿಸಿದರು ಎಂದು ಆರೋಪಿಸಲಾಗಿದೆ.