Asianet Suvarna News Asianet Suvarna News

Sky247 Lanka Premier League: ಫೈನಲ್‌ನಲ್ಲಿ ಜಾಪ್ನಾ-ಗ್ಲಾಡಿಯೇಟರ್ಸ್‌ ಕದನಕ್ಕೆ ಕ್ಷಣಗಣನೆ

* ಲಂಕಾ ಪ್ರೀಮಿಯರ್ ಲೀಗ್ ಟೂರ್ನಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ

* ಮತ್ತೊಮ್ಮೆ ಫೈನಲ್‌ನಲ್ಲಿ ಜಾಪ್ನಾ ಕಿಂಗ್ಸ್ ಹಾಗೂ ಗಾಲೆ ಗ್ಲಾಡಿಯೇಟರ್ಸ್ ಮುಖಾಮುಖಿ

* ಸತತ ಎರಡನೇ ಬಾರಿಗೆ ಕಪ್ ಗೆಲ್ಲುತ್ತಾ ಜಾಪ್ನಾ ಕಿಂಗ್ಸ್?

Sky247 Lanka Premier League Countdown begins for Jaffna Kings vs Galle Gladiators Final Clash kvn
Author
Bengaluru, First Published Dec 23, 2021, 5:13 PM IST
  • Facebook
  • Twitter
  • Whatsapp

ಬೆಂಗಳೂರು: ರೋಚಕ ಪೈಪೋಟಿ, ಅನಿರೀಕ್ಷಿತ ಜಯ, ಕೊನೆಯ ಕ್ಷಣದವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟೂರ್ನಿಯು ಇದೀಗ ಅಂತಿಮಘಟ್ಟ ತಲುಪಿದೆ. ತಂಡದ ಹೆಸರು ಬದಲಾಗಿದ್ದರೂ ಸಹಾ, ಉಭಯ ತಂಡಗಳ ಆಡುವ ಶೈಲಿ, ಹೃದಯಬಡಿತ, ಛಲದ ಹೋರಾಟ ಒಂದಿನಿತು ಕಡಿಮೆಯಾಗಿಲ್ಲ. ಇದೀಗ ಮತ್ತೊಮ್ಮೆ ಲಂಕಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಜಾಪ್ನಾ ಕಿಂಗ್ಸ್ ಹಾಗೂ ಗಾಲೆ ಗ್ಲಾಡಿಯೇಟರ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನೊಂದು ಗೆಲುವು ಎರಡನೇ ಆವೃತ್ತಿಯ Sky247 ಲಂಕಾ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಂತೆ ಮಾಡಲಿದೆ.

ಟೂರ್ನಿಯಲ್ಲಿ ಐದು ತಂಡಗಳು ಏಕಕಾಲದಲ್ಲಿ ತಮ್ಮ ಪಯಣ ಆರಂಭಿಸಿದವು. ಆದರೆ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆಯಲು ಜಾಪ್ನಾ ಕಿಂಗ್ಸ್ (Jaffna Kings) ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಗ್ರೂಪ್‌ ಹಂತದಲ್ಲಿ ಮೊದಲ 5 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಂಡಿತು.

ಜಾಪ್ನಾ ಕಿಂಗ್ಸ್ ತಂಡದ ಯಶಸ್ಸಿನ ಮೂಲಮಂತ್ರವೆಂದರೆ ಅದು, ಯುವ ಹಾಗೂ ಅನುಭವಿ ಆಟಗಾರರ ಸಮ್ಮಿಲನ ಮತ್ತು ದೇಸಿ ಹಾಗೂ ವಿದೇಶಿ ಆಟಗಾರರ ಹೊಂದಾಣಿಕೆಯ ಆಟದಿಂದಾಗಿ ಮಿಂಚುತ್ತಿದೆ. ಜಾಪ್ನಾ ಕಿಂಗ್ಸ್ ತಂಡವು ಯಾವೊಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆಟಗಾರರು ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅನುಭವಿ ಆಟಗಾರ ತಿಸಾರ ಪೆರೆರಾ(Thisara Perera) ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದರೆ, ಯುವ ಪ್ರತಿಭಾನ್ವಿಯ ಆರಂಭಿಕ ಬ್ಯಾಟರ್ ಆವಿಷ್ಕಾ ಫರ್ನಾಂಡೊ(Avishka Fernando), ಅನುಭವಿ ಆಟಗಾರರಾದ ಶೋಯೆಬ್ ಮಲಿಕ್(Shoaib Malik), ಟಾಮ್ ಕೊಹ್ಲೆರ್ ಕಾಡ್ಮೋರ್ ಮತ್ತು ರೆಹಮ್ಮತ್ತುಲ್ಲಾ ಗುರ್ಬಾಜ್‌ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಎಂ. ತೀಕ್ಷಣ ಎದುರಾಳಿ ತಂಡದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಇದೆಲ್ಲದರ ಹೊರತಾಗಿ Sky247 ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಂಡೀಸ್ ಮೂಲದ 20 ವರ್ಷದ ಜೇಡೆನ್ ಸೀಲ್ಸ್‌ ಡೆತ್ ಓವರ್‌ ಸ್ಪೆಷಲಿಸ್ಟ್ ಆಗಿ ಹೊರಹೊಮ್ಮಿದ್ದು, 13 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.

ಇನ್ನು ಗಾಲೆ ಗ್ಲಾಡಿಯೇಟರ್ಸ್‌ (Galle Gladiators) ತಂಡದ ಪ್ರದರ್ಶನ ಇದಕ್ಕಿಂತ ಭಿನ್ನವಾಗಿದ್ದು, ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ತೋರಲು ವಿಫಲವಾಗಿದೆ. ಮೇಲ್ನೋಟಕ್ಕೆ ತಂಡ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ ಸಹ, ಸಿಕ್ಕ ಉತ್ತಮ ಆರಂಭವನ್ನು ಗೆಲುವಿನತ್ತ ಕೊಂಡೊಯ್ಯಲು ವಿಫಲವಾಗುವ ಮೂಲಕ Sky247 ಲಂಕಾ ಪ್ರೀಮಿಯರ್ ಲೀಗ್ (Sky247 Lanka Premier League) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. 

ತಂಡದ ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡೀಸ್, ಮಹತ್ವದ ಪಂದ್ಯಕ್ಕೂ ಮುನ್ನ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ತಂಡದ ಮತ್ತೊಂದು ಪಾಸಿಟಿವ್ ಅಂಶವೆಂದರೆ 37 ವರ್ಷದ ಸಮಿತ್ ಪಟೇಲ್ ಅವರ ಚಾಣಾಕ್ಷ ಬೌಲಿಂಗ್ ಪ್ರದರ್ಶನ. ಭಾರತೀಯ ಮೂಲದ ಇಂಗ್ಲೆಂಡ್ ಆಟಗಾರ ಸಮಿತ್ ಪಟೇಲ್‌ (Samit Patel) ಕೇವಲ 5.50 ಎಕನಮಿಯಲ್ಲಿ ರನ್‌ ನೀಡಿ 15 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರತಿಭಾನ್ವಿತ ವೇಗಿ ನುವಾನ್ ತುಷಾರ ನಿರೀಕ್ಷಿತ ಪ್ರದರ್ಶನ ತೋರಲು ಯಶಸ್ವಿಯಾಗಿಲ್ಲದಿದ್ದರೂ, ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

Sky247 Lanka Premier League Countdown begins for Jaffna Kings vs Galle Gladiators Final Clash kvn
 
ಎಲ್ಲಾ ಆಟಗಾರರ ವೈಯುಕ್ತಿಕ ಪ್ರದರ್ಶನ, ತಂಡದ ಪ್ರದರ್ಶನಗಳನ್ನು ಬದಿಗಿಟ್ಟು ನೋಡಿದರೆ, ಇದೀಗ ಎಲ್ಲರ ಚಿತ್ತ Sky247 ಲಂಕಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಜಾಪ್ನಾ ಕಿಂಗ್ಸ್ ಹಾಗೂ ಗಾಲೆ ಗ್ಲಾಡಿಯೇಟರ್ಸ್‌ನತ್ತ ನೆಟ್ಟಿದೆ. ಜಾಪ್ನಾ ಕಿಂಗ್ಸ್‌ ತಂಡದ ಫೈನಲ್‌ವರೆಗಿನ ಹಾದಿಯನ್ನು ಗಮನಿಸಿದರೆ, ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಸೋಲಿನ ಕಹಿಯುಂಡಿದೆ. ತುಂಬಾ ಕುತೂಹಲದ ಅಂಶವೆಂದರೆ ಜಾಪ್ನಾ ಸೋತ ಎಲ್ಲಾ ಪಂದ್ಯಗಳು ಗಾಲೆ ಗ್ಲಾಡಿಯೇಟರ್ಸ್ ವಿರುದ್ದ ಎನ್ನುವುದು ವಿಶೇಷ. ಇನ್ನೊಂದೆಡೆ ಗಾಲೆ ಗ್ಲಾಡಿಯೇಟರ್ಸ್‌ ತಂಡವು ಆಡಿದ 10 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಫೈನಲ್‌ ಪ್ರವೇಶಿಸಿದೆ. ಮೂರು ಪಂದ್ಯಗಳಲ್ಲೂ ಗಾಲೆ ತಂಡವು 54, 20 ಹಾಗೂ 64 ರನ್‌ಗಳ ಅಂತರದ ಗೆಲುವು ಪಡೆದಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಜಾಪ್ನಾ ತಂಡವು 53 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಲ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟ್ರೋಫಿಗೆ ಮುತ್ತಿಕ್ಕಿತ್ತು.

ಫೈನಲ್‌ನಲ್ಲಿ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರುವ ಮೂಲಕ ಜಾಪ್ನಾ ಕಿಂಗ್ಸ್ ಎರಡನೇ ಟ್ರೋಫಿಗೆ ಮುತ್ತಿಕ್ಕಲಿದೆಯಾ? ಅಥವಾ ಗಾಲೆ ಗ್ಲಾಡಿಯೇಟರ್ಸ್ ತಂಡವು ಕಳೆದ ಫೈನಲ್‌ಗೆ ಸೇಡು ತೀರಿಸಿಕೊಳ್ಳಲಿದೆಯಾ? ಈ ಎಲ್ಲಾ ಕುತೂಹಲಕ್ಕೆ Sky247 ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಉತ್ತರ ಸಿಗಲಿದೆ. ಯಾರಾದರೂ ಗೆಲುವು ಸಾಧಿಸಲಿ, ಆದರೆ ಇಂದು ರಾತ್ರಿ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಸ್ಮರಣೀಯ ಪಂದ್ಯ ನಡೆಯುವುದಂತೂ ಗ್ಯಾರಂಟಿ.

Follow Us:
Download App:
  • android
  • ios