Asianet Suvarna News Asianet Suvarna News

Yuvraj Singh Birthday : ಸಿಕ್ಸರ್ ಕಿಂಗ್ ಕುರಿತಾಗಿ ನಿಮಗೆ ಗೊತ್ತಿಲ್ಲದ ಕೆಲ ಸಂಗತಿಗಳು!

ಭಾನುವಾರ 40ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಯುವಿ
ಸಚಿನ್ ತೆಂಡುಲ್ಕರ್, ಗೌತಮ್ ಗಂಭೀರ್ ಸೇರಿದಂತೆ ಕ್ರಿಕೆಟ್ ದಿಗ್ಗಜರ ಶುಭಾಶಯ
ಇಲ್ಲಿದೆ ಯುವಿ ಕ್ರಿಕೆಟ್ ಜೀವನದಲ್ಲಿ ಕೆಲ ಅಪರೂಪದ ಸಂಗತಿಗಳು

Sixer King Yuvraj Singh Birthday lesser known facts about former indian cricketer san
Author
Bengaluru, First Published Dec 12, 2021, 4:00 PM IST

ಬೆಂಗಳೂರು (ಡಿ. 12): ಟೀಮ್ ಇಂಡಿಯಾ (Team India) ಮಾಜಿ ಕ್ರಿಕೆಟಿಗ, 2007ರ ಟಿ20 ವಿಶ್ವಕಪ್ (2007 T20 World Cup) ಹಾಗೂ 2011ರ ಏಕದಿನ ವಿಶ್ವಕಪ್  (2011 ODI World Cup)ಗೆಲುವಿನ ಹೀರೋ ಯುವರಾಜ್ ಸಿಂಗ್ (Yuvraj Singh) ಭಾನುವಾರ ತಮ್ಮ 40ನೇ ವರ್ಷ್ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್ ಮನ್ ಆಗಿದ್ದ ಯುವರಾಜ್ ಸಿಂಗ್2000 ಇಸವಿಯಲ್ಲಿ ನಡೆದ ಐಸಿಸಿ ನಾಕೌಟ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಭಾರತದ ಪರವಾಗಿ 304 ಏಕದಿನ ಪಂದ್ಯವಾಡಿದ್ದ ಯುವಿ, 2011ರ ಏಕದಿನ ವಿಶ್ವಕಪ್ ವೇಳೆ ಸರಣಿಶ್ರೇಷ್ಠ ಗೌರವ ಪಡೆದುಕೊಂಡಿದ್ದರು. 36.55ರ ಸರಾಸರಿಯಲ್ಲಿ 8701 ರನ್ ಬಾರಿಸಿದ್ದ ಯುವಿ, 14 ಶತಕ ಹಾಗೂ 42 ಅರ್ಧಶತಕಗಳನ್ನು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲು ವಿಫಲರಾದ ಯುವಿ ಆಡಿದ 40 ಪಂದ್ಯಗಳಿಂದ, 3 ಶತಕ ಹಾಗೂ 11 ಅರ್ಧಶತಕಗಳೊಂದಿಗೆ 1900 ರನ್ ಬಾರಿಸಿದ್ದರು. 2001ರಲ್ಲಿ ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಬಾರಿಸಿದ 169 ರನ್ ಅವರ ಗರಿಷ್ಠ ಮೊತ್ತ. 

ಸಚಿನ್ ತೆಂಡುಲ್ಕರ್ (Sachin Tendulkar), ಗೌತಮ್ ಗಂಭೀರ್ (Gautam Gambhir), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಕ್ರಿಕೆಟ್ ದಿಗ್ಗಜರು ಟೀಮ್ ಇಂಡಿಯಾದ ವಿಶ್ವಕಪ್ ಹೀರೋಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ. ಇಲ್ಲಿ ನಾವು ಯುವರಾಜ್ ಸಿಂಗ್ ಬಗ್ಗೆ ನೀವು ತಿಳಿಯದ, ಆಸಕ್ತಿಕರ ಸಂಗತಿಗಳನ್ನು ಹೇಳಿದ್ದೇವೆ.

1. ಸ್ಕೇಟರ್ ಬೇಡ ಕ್ರಿಕೆಟರ್ ಆಗು ಅಂದಿದ್ರು ಅಪ್ಪ!
14 ವಯೋಮಿತಿ ರೋಲರ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದು ಬಂದಿದ್ದ ಯುವರಾಜ್ ಸಿಂಗ್, ಪ್ರಶಸ್ತಿಯನ್ನು ಅಪ್ಪ ಯೋಗರಾಜ್ ಸಿಂಗ್ ಗೆ  ( Yograj Singh)ತೋರಿಸಿದಾಗ ಅದನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಸ್ಕೇಟರ್ ಆಗೋ ಕನಸೆಲ್ಲಾ ಬಿಡು, ನೀನು ರಾಷ್ಟ್ರೀಯ ಟೀಮ್ ಗೆ ಆಡೋದಿದ್ರೆ ಕ್ರಿಕೆಟ್ ಮಾತ್ರ ಆಡ್ಬೇಕು ಅಂಥ ಹೇಳಿದ್ದರು. ಹಾಗಾಗಿ ಟೆನಿಸ್ ಹಾಗೂ ರೋಲರ್ ಸ್ಕೇಟಿಂಗ್ ಬಗ್ಗೆ ಆಸಕ್ತಿ ಹೊಂದಿದ್ದ ಯುವಿ ಅದನ್ನೆಲ್ಲಾ ಕೈಬಿಟ್ಟು ಕ್ರಿಕೆಟ್ ಬ್ಯಾಟ್ ಹಿಡಿದಿದ್ದರು.
 


2. ನವಜೋತ್ ಸಿಂಗ್ ಸಿಧು ಪ್ರಯೋಜನ ಇಲ್ಲ ಅಂದಿದ್ರು..
ಕ್ರಿಕೆಟ್ ನ ಆರಂಭಿಕ ದಿನಗಳಲ್ಲಿ ಯುವರಾಜ್ ಸಿಂಗ್ ಗೆ ಕ್ರಿಕೆಟ್ ನ ಗಂಧ-ಗಾಳಿಯೇ ಗೊತ್ತಿರಲಿಲ್ಲ. ಭಾರತದ ಪರವಾಗಿ 1 ಟೆಸ್ಟ್ ಹಾಗೂ 6 ಏಕದಿನ ಆಡಿದ್ದ ಅಪ್ಪ ಯೋಗರಾಜ್ ಸಿಂಗ್ ಅವರ ಆಸೆಯಂತೆ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಿದ್ದರು. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ( Navjot Singh Sidhu) ಅವರಲ್ಲಿ ಪುತ್ರನಿಗೆ ತರಬೇತಿ ನೀಡುವಂತೆ ಯೋಗರಾಜ್ ಕೇಳಿದ್ದರು. ಯುವರಾಜ್ ಸಿಂಗ್ ಕ್ರಿಕೆಟ್ ಎಷ್ಟು ಕೆಟ್ಟದಾಗಿತ್ತೆಂದರೆ, ಕ್ರಿಕೆಟ್ ನಲ್ಲಿ ನಿಮ್ಮ ಮಗ ಏನೂ ಪ್ರಯೋಜನ ಇಲ್ಲ ಅಂತಾ ಹೇಳಿದ್ದರು.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!
3. ಕೂಚ್ ಬೆಹಾರ್ ಟ್ರೋಫಿಯಲ್ಲಿ 358 ರನ್ !

1995ರಲ್ಲಿ ತಮ್ಮ 13ನೇ ವರ್ಷಕ್ಕೆ ಪಂಜಾಬ್ ನ 16 ವಯೋಮಿತಿ ತಂಡದ ಪರವಾಗಿ ಆಡಿದ ಯುವಿ, ಬಿಹಾರ ವಿರುದ್ಧ ನಡೆದ 19 ವಯೋಮಿತಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ( U19 Cooch-Behar Trophy) 358 ರನ್ ಸಿಡಿಸಿದ್ದರು. ಕ್ರಿಕೆಟ್ ಜಗತ್ತಿಗೆ ಯುವರಾಜ್ ಸಿಂಗ್ ಅನ್ನುವ ಹೆಸರು ಗೊತ್ತಾಗಿದ್ದು ಈ ಪಂದ್ಯದ ಬಳಿಕ.

4. ಎರಡಲ್ಲ, ಮೂರು ವಿಶ್ವಕಪ್ ಗೆಲ್ಲಿಸಿದ ಹೀರೋ
ಯುವರಾಜ್ ಸಿಂಗ್ ಅವರನ್ನು ಎರಡು ವಿಶ್ವಕಪ್ ಗೆಲ್ಲಿಸಿದ ಹೀರೋ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್. ಆದರೆ, ಯುವರಾಜ್ 3 ವಿಶ್ವಕಪ್ ಗೆಲ್ಲಿಸಿದ ಹೀರೋ.

Team India ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆರೆಸ್ಟ್ ನಂತರ ಬಿಡುಗಡೆ..!
2000ದಲ್ಲಿ ನಡೆದ19 ವಯೋಮಿತಿ ಐಸಿಸಿ ವಿಶ್ವಕಪ್ ನಲ್ಲಿ (ICC U19 World Cup in 2000) ಭಾರತ ತಂಡದ ಗೆಲುವಿಗೆ ಯುವಿ ಕಾರಣರಾಗಿದ್ದರು. ಆ ಟೂರ್ನಿಯಲ್ಲಿ ಸರಣಿಶ್ರೇಷ್ಠ ಗೌರವ ಪಡೆದಿದ್ದರು.

5. ಪಂಜಾಬಿ ಚಿತ್ರದಲ್ಲಿ ನಟಿಸಿದ್ದ ಯುವಿ
ಬಾಲ್ಯದ ದಿನಗಳಲ್ಲಿ ಯುವಿ ಕೆಲ ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದರು. ಮೆಹದಿ ಸಜಾ ದಿ (Mehndi Sajda Di ) ಹಾಗೂ ಪುಟ್ ಸರ್ದಾರಾ (Putt Sardara) ಚಿತ್ರಗಳಲ್ಲಿ ಬಾಲನಟನಾಗಿ ಯುವಿ ಅಭಿನಯ ಮಾಡಿದ್ದರು. ಅದಲ್ಲದೆ, ಬಾಲಿವುಡ್ ಚಿತ್ರ "ಜಂಬೋ" ಗೆ (Jumbo) ತಮ್ಮ ಧ್ವನಿಯನ್ನೂ ಯುವಿ ನೀಡಿದ್ದಾರೆ.
 

Follow Us:
Download App:
  • android
  • ios