2023ನೇ ಸಾಲಿನ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಗಿಲ್‌ಗೆ ಎರಡನೇ ಸ್ಥಾನವಿರಾಟ್ ಕೊಹ್ಲಿ ಸಾರ್ವಕಾಲಿಕ ದಾಖಲೆ ಮುರಿಯಲು ಗಿಲ್ ವಿಫಲ

ಅಹ​ಮ​ದಾ​ಬಾ​ದ್‌(ಮೇ.30): ಉತ್ಕೃಷ್ಠ ಲಯ​ದ​ಲ್ಲಿ​ರುವ ಗುಜ​ರಾತ್‌ನ ಶುಭ್‌​ಮನ್‌ ಗಿಲ್‌ 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ ರನ್‌ ಗಳಿ​ಕೆ​ಯಲ್ಲಿ ಮತ್ತೊಂದು ದಾಖಲೆ ಬರೆ​ದಿ​ದ್ದಾ​ರೆ. ಸೋಮ​ವಾರ ಚೆನ್ನೈ ವಿರುದ್ಧ ಫೈನ​ಲ್‌​ನಲ್ಲಿ 20 ಎಸೆ​ತ​ಗ​ಳಲ್ಲಿ 39 ರನ್‌ ಸಿಡಿ​ಸಿದ ಗಿಲ್‌, ಐಪಿ​ಎಲ್‌ ಆವೃ​ತ್ತಿ​ಯೊಂದ​ರಲ್ಲಿ ಗರಿಷ್ಠ ರನ್‌ ಸಿಡಿ​ಸಿ​ದ​ವರ ಪಟ್ಟಿ​ಯಲ್ಲಿ 2ನೇ ಸ್ಥಾನ​ಕ್ಕೇ​ರಿ​ದರು.

ಗಿಲ್‌ ಈ ಬಾರಿ 17 ಪಂದ್ಯ​ಗ​ಳಲ್ಲಿ 63.57ರ ಸರಾ​ಸ​ರಿ​ಯಲ್ಲಿ 3 ಶತಕ, 4 ಅರ್ಧ​ಶ​ತ​ಕ​ಗ​ಳ​ನ್ನೊ​ಳ​ಗೊಂಡ 890 ರನ್‌ ಸಿಡಿ​ಸಿದ್ದು, ರಾಜ​ಸ್ಥಾ​ನದ ಜೋಸ್‌ ಬಟ್ಲರ್‌ ಅವರ ದಾಖ​ಲೆ​ಯನ್ನು ಮುರಿ​ದರು. ಕಳೆದ ವರ್ಷ ಬಟ್ಲರ್‌ 863 ರನ್‌ ಕಲೆ​ ಹಾ​ಕಿ​ದ್ದರು. ಆದರೆ ಗಿಲ್‌ಗೆ ವಿರಾಟ್‌ ಕೊಹ್ಲಿ ದಾಖಲೆ ಮುರಿ​ಯಲು ಸಾಧ್ಯ​ವಾ​ಗ​ಲಿಲ್ಲ. ಕೊಹ್ಲಿ 2016ರಲ್ಲಿ 4 ಶತ​ಕ​ಗಳು ಸೇರಿ​ದಂತೆ ಬರೋ​ಬ್ಬರಿ 973 ರನ್‌ ಸಿಡಿ​ಸಿ​ದ್ದರು. ಅದೇ ಆವೃ​ತ್ತಿ​ಯಲ್ಲಿ ಡೇವಿಡ್‌ ವಾರ್ನರ್‌ ಹೈದ​ರಾ​ಬಾದ್‌ ಪರ 848 ರನ್‌ ಗಳಿ​ಸಿ​ದ್ದರು. ಈ ನಾಲ್ವ​ರ​ನ್ನು ಹೊರ​ತು​ಪ​ಡಿಸಿ ಬೇರೆ ಯಾರೂ ಒಂದು ಆವೃ​ತ್ತಿ​ಯಲ್ಲಿ 800ಕ್ಕಿಂತ ಹೆಚ್ಚು ರನ್‌ ಕಲೆ​ಹಾ​ಕಿ​ಲ್ಲ.

250 ಐಪಿಎಲ್‌ ಪಂದ್ಯ ಆ​ಡಿ​ದ ಮೊದ​ಲಿಗ ಧೋನಿ!

ಗುಜ​ರಾತ್‌ ವಿರುದ್ಧ ಫೈನ​ಲ್‌​ನಲ್ಲಿ ಕಣ​ಕ್ಕಿ​ಳಿ​ಯು​ವು​ದ​ರೊಂದಿಗೆ ಚೆನ್ನೈ ನಾಯಕ ಎಂ.ಎ​ಸ್‌.​ಧೋನಿ ಐಪಿ​ಎ​ಲ್‌​ನಲ್ಲಿ 250 ಪಂದ್ಯ​ವಾ​ಡಿದ ಮೊದಲ ಆಟಗಾರ ಎನಿ​ಸಿ​ಕೊಂಡರು. 2008ರ ಚೊಚ್ಚಲ ಆವೃ​ತ್ತಿ​ (2016, 2017ರಲ್ಲಿ ಪುಣೆ ಪರ​)ಯಿಂದಲೂ ಧೋನಿ ಚೆನ್ನೈ ಪರ ಆಡು​ತ್ತಿ​ದ್ದು, 5000ಕ್ಕೂ ಹೆಚ್ಚು ರನ್‌ ಕಲೆ​ಹಾ​ಕಿ​ದ್ದಾ​ರೆ. ಇನ್ನು, 243 ಪಂದ್ಯ​ಗ​ಳ​ನ್ನಾ​ಡಿ​ರುವ ರೋಹಿತ್‌ ಶರ್ಮಾ ಪಟ್ಟಿ​ಯಲ್ಲಿ 2ನೇ ಸ್ಥಾನ​ದ​ಲ್ಲಿದ್ದು, ದಿನೇಶ್‌ ಕಾರ್ತಿಕ್‌ 242, ವಿರಾಟ್‌ ಕೊಹ್ಲಿ 237, ಜಡೇಜಾ 226 ಪಂದ್ಯ​ಗ​ಳ​ನ್ನಾ​ಡಿ​ದ್ದಾರೆ.

ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಧೋನಿಯಂತೆ ಬದುಕೋಣ!

ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿ 300 ಬಲಿ ಪಡೆದ ಮೊದಲ ವಿಕೆಟ್‌ ಕೀಪರ್‌ ಎನ್ನುವ ದಾಖಲೆಯನ್ನೂ ಧೋನಿ ಬರೆದರು.

ಈ ಐಪಿಎಲ್‌ನಲ್ಲಿ 564 ರನ್‌ ನೀಡಿದ ತುಷಾರ್‌!

ಅಹಮದಾಬಾದ್‌: ಐಪಿಎಲ್‌ ಅವೃತ್ತಿಯೊಂದರಲ್ಲಿ ಅತಿಹೆಚ್ಚು ರನ್‌ ಚಚ್ಚಿಸಿಕೊಂಡ ಬೌಲರ್‌ ಎನ್ನುವ ಅಪಖ್ಯಾತಿಗೆ ಚೆನ್ನೈ ಸೂಪರ್‌ ಕಿಂಗ್‌್ಸನ ವೇಗಿ ತುಷಾರ್‌ ದೇಶಪಾಂಡೆ ಗುರಿಯಾಗಿದ್ದಾರೆ. ಸೋಮವಾರ ಗುಜರಾತ್‌ ವಿರುದ್ಧ ನಡೆದ ಫೈನಲ್‌ನಲ್ಲಿ ತುಷಾರ್‌ 4 ಓವರಲ್ಲಿ 56 ರನ್‌ ಬಿಟ್ಟುಕೊಟ್ಟರು. ಇದರೊಂದಿಗೆ ಈ ಆವೃತ್ತಿಯಲ್ಲಿ ಅವರು 16 ಪಂದ್ಯಗಳಲ್ಲಿ ಒಟ್ಟು 564 ರನ್‌ ನೀಡಿ, ಪ್ರಸಿದ್ಧ್ ಕೃಷ್ಣ ಅವರನ್ನು ಹಿಂದಿಕ್ಕಿದರು. 2022ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದದ ಪ್ರಸಿದ್‌್ಧ 551 ರನ್‌ ನೀಡಿದ್ದರು. 2020ರಲ್ಲಿ ಕಗಿಸೋ ರಬಾಡ 548, 2018ರಲ್ಲಿ ಸಿದ್ಧಾರ್ಥ್‌ ಕೌಲ್‌ 547 ರನ್‌ ಚಚ್ಚಿಸಿಕೊಂಡಿದ್ದರು.