ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿದ ನಂತರ, ಅರ್ಧಶತಕ ಮತ್ತು ವಿರಾಟ್ ಕೊಹ್ಲಿಯೊಂದಿಗೆ 114 ರನ್ ಜೊತೆಯಾಟವಾಡಿದ ಶ್ರೇಯಸ್ ಅಯ್ಯರ್, ವಿರಾಟ್ ರನ್ ಗಳಿಸಲು ಎಂದಿಗೂ ಕಷ್ಟಪಡಲಿಲ್ಲ, ಬದಲಿಗೆ ಅವರಿಗೆ ರನ್‌ಗಳ ಹಸಿವಿದೆ ಎಂದು ಹೇಳಿದರು. ಪಂದ್ಯಕ್ಕೂ ಮುನ್ನ ಅವರು ಅಭ್ಯಾಸಕ್ಕೆ ಒಂದು ಗಂಟೆ ಮುಂಚಿತವಾಗಿ ಬಂದಿದ್ದರು ಎಂದು ತಿಳಿಸಿದರು.
ದುಬೈ(ಯುಎಇ) ಫೆ. 23: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿದ ನಂತರ, ಅರ್ಧಶತಕ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯೊಂದಿಗೆ 114 ರನ್ ಜೊತೆಯಾಟವಾಡಿದ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, 'ವಿರಾಟ್ ರನ್ ಗಳಿಸಲು ಯಾವತ್ತೂ ಹೆಣಗಾಡಿಲ್ಲ, ಬದಲಿಗೆ ಅವರಿಗೆ ರನ್ ಗಳಿಸುವ ರಣಭಯಂಕರ ಹಸಿವಿದೆ ಎಂದರು. ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಒಂದು ಗಂಟೆ ಮುಂಚಿತವಾಗಿ ಬಂದು ಅಭ್ಯಾಸಕ್ಕೆ ನಡೆಸಿದ್ದರು ಎಂದು ತಿಳಿಸಿದರು.
ವಿರಾಟ ಪ್ರದರ್ಶನ:
ವಿರಾಟ್ ಅವರ ಸ್ಮರಣೀಯ 82ನೇ ಅಂತಾರಾಷ್ಟ್ರೀಯ ಶತಕ ಇದಾಗಿದೆ ಅಲ್ಲದೇ ಈ ಪಂದ್ಯ ಸಾಕಷ್ಟು ದಾಖಲೆಗಳನ್ನು ಬರೆಯುವಂತೆ ಮಾಡಿತು. ಶ್ರೇಯಸ್ ಅಯ್ಯರ್ ಅವರ ಅರ್ಧಶತಕ, ಕುಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಉತ್ತಮ ಬೌಲಿಂಗ್‌ನಿಂದಾಗಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಇದರಿಂದ ತಂಡವು ಸೆಮಿಫೈನಲ್‌ನಲ್ಲಿ ಒಂದು ಕಾಲಿಟ್ಟಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಹೀನಾಯವಾಗಿ ಸೋಲುತ್ತಿದ್ದಂತೆ ಅಚ್ಚರಿ ಹೇಳಿಕೆ ಕೊಟ್ಟ ಪಾಕ್ ನಾಯಕ ರಿಜ್ವಾನ್!
ರನ್ ಗಳಿಸಲು ಕೊಹ್ಲಿ ಎಂದೂ ಹೆಣಗಾಡಿಲ್ಲ:
'ವಿರಾಟ್ ರನ್ ಗಳಿಸಲು ಹೆಣಗಾಡುತ್ತಾರೆಂದು ನಾನು ಎಂದಿಗೂ ಭಾವಿಸಿಲ್ಲ. ಹಲವು ವರ್ಷಗಳಿಂದ ನೋಡುತ್ತಿರುವಂತೆ ಅವರ ಮನಸ್ಥಿತಿ ಅಷ್ಟೇ. ಅವರಿಗೆ ಯಾವಾಗಲೂ ರನ್‌ಗಳ ಹಸಿವಿರುತ್ತದೆ. ನೀವು ನೆನಪಿಡಬೇಕು, ನಿನ್ನೆ ಅವರು ಅಭ್ಯಾಸಕ್ಕಾಗಿ ನಮಗಿಂತ ಸುಮಾರು ಒಂದು ಗಂಟೆ ಮುಂಚಿತವಾಗಿ ಬಂದಿದ್ದರು! ಮೊದಲೇ ಬಂದು ಅಭ್ಯಾಸ ನಡೆಸಿದರು. ಪಂದ್ಯದ ವೇಳೆ ಚುರುಕಾಗಿ ಆಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು' ಎಂದು ಅಯ್ಯರ್ ಪಂದ್ಯ ಗೆಲುವಿನ ಬಳಿಕ ತಿಳಿಸಿದರು.
ನಾವು ಪಂದ್ಯ ಮುಂಚಿತವಾಗಿ ಗೆಲ್ಲಬಹುದಿತ್ತು. ಆದರೆ,
'ನಾವು ಸ್ವಲ್ಪ ಮುಂಚಿತವಾಗಿಯೇ ಗೆಲ್ಲಬಹುದಿತ್ತು, ಆದರೆ ವಿಕೆಟ್ ಬಿಳದಂತೆ ಎಚ್ಚರಿಕೆಯಿಂದ ಆಡಬೇಕಾಯಿತು. ಅದರಲ್ಲೂ ಹೊಸ ಚೆಂಡು ಚೆನ್ನಾಗಿ ಬರುತ್ತಿತ್ತು. ಸ್ವಲ್ಪ ಹಳೆಯದಾದ ನಂತರ ರನ್‌ಗಳಿಸಲು ಕಷ್ಟವಾಯಿತು. ನಾವು ಹೆಚ್ಚು ಆಕ್ರಮಣಕಾರಿಯಾಗಿ ಆಡಿದ್ದರೆ ಸ್ವಲ್ಪ ಮುಂಚಿತವಾಗಿ ಗೆಲ್ಲಬಹುದಿತ್ತು ಎಂದರು.
ಇದನ್ನೂ ಓದಿ: ಮ್ಯಾಚ್ ಸೋತರೂ ಚಿಂತೆ ಇಲ್ಲ, ಕೊಹ್ಲಿ ಸೆಂಚುರಿ ಸಿಡಿಸಲು ಬಿಡಬಾರದಿತ್ತು, ಪಾಕಿಸ್ತಾನಿ ಫ್ಯಾನ್ಸ್ ರಿಯಾಕ್ಷನ್ ವೈರಲ್!
ಸ್ಪಿನ್ನರ್ ಸ್ನೇಹಿ ಕ್ರೀಡಾಂಗಣ:
ವಿಶೇಷವಾಗಿ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಚೆಂಡು ತಿರುಗಿದ್ದು ನಮಗೆ ಸಹಾಯವಾಯ್ತು. ನಾವು ಇಲ್ಲಿ ಆಡಿದ ಹಿಂದಿನ ಪಂದ್ಯದಲ್ಲಿಯೂ ವಿಕೆಟ್ ಸ್ವಲ್ಪ ನಿಧಾನವಾಗಿತ್ತು. ಈ ಸ್ಟೇಡಿಯಂ ಸ್ಪಿನ್ನರ್ ಸ್ನೇಹಿಯಾಗಿದೆ ಅವರು ಸ್ಥಿರವಾಗಿ ಬೌಲಿಂಗ್ ಮಾಡುತ್ತಿರುವ ರೀತಿ, ಮೂವರು ಬೌಲರ್‌ಗಳ (ಅಕ್ಷರ್, ಕುಲದೀಪ್ ಮತ್ತು ಜಡೇಜಾ) ಶ್ರಮವೂ ಪಂದ್ಯದ ಗೆಲುವಿನ ಹಿಂದಿದೆ ಎಂದರು.
ಏಕದಿನ ಪಂದ್ಯದಲ್ಲಿ ಶ್ರೇಯಸ್ ಉತ್ತಮ ಸ್ಕೋರ್
ಅಬ್ರಾರ್ (ಅಹ್ಮದ್) ಅದ್ಭುತವಾಗಿ ಬೌಲಿಂಗ್ ಮಾಡಿದರು. ಅದಕ್ಕಾಗಿ ನಾನು ಸ್ವಲ್ಪ ಸಮಯ ತೆಗೆದುಕೊಂಡೆ, ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಅವರನ್ನು ಹಿಮ್ಮೆಟ್ಟಿಸಲು ಉತ್ತಮ ಆಯ್ಕೆಯಾಗಿದೆ. ಅದು ನನಗೆ ಚೆನ್ನಾಗಿ ಕೆಲಸ ಮಾಡಿತು. ಅಲ್ಲಿಂದ ಕೊನೆಯವರೆಗೂ ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಗಿ ನಿಲ್ಲುವುದು ಮುಖ್ಯವಾಗಿತ್ತು. ನಾವು ಚೆನ್ನಾಗಿ ಆಡಿದ್ದೇವೆ ಎಂದು ಭಾವಿಸುತ್ತೇನೆ. ಏಕದಿನ ತಂಡಕ್ಕೆ ಮರಳಿದ ನಂತರ ಉತ್ತಮ ಸ್ಕೋರ್ ಗಳಿಸುತ್ತಿರುವುದು 'ಇದೊಂದು ಆಶೀರ್ವಾದ' ಎಂದರು. ಈ ವರ್ಷದ ಐದು ಏಕದಿನ ಪಂದ್ಯಗಳಲ್ಲಿ, ಅಯ್ಯರ್ 50.40 ಸರಾಸರಿ ಮತ್ತು 109 ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಮತ್ತು 78 ಅತ್ಯುತ್ತಮ ಸ್ಕೋರ್ ಆಗಿದೆ.
