ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ನಾಯಕನಾಗಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಇವತ್ತು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ನಾಲ್ಕನೇ ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ವು. ಈ ವೇಳೆ ನಾಯಕ ಶ್ರೇಯಸ್ ಅಯ್ಯರ್ ಅವರು ಅತ್ಯಂತ ಕೆಟ್ಟ ದಾಖಲೆ ಬರೆದುಕೊಂಡಿದ್ದಾರೆ.
ಅಯ್ಯರ್ ಕೆಟ್ಟ ದಾಖಲೆ
ಶ್ರೇಯಸ್ ಅಯ್ಯರ್ ಅವರು, ಏಕದಿನ ಪಂದ್ಯ ಒಂದಕ್ಕೆ ಇದೇ ಮೊದಲ ಬಾರಿ ನಾಯಕರಾಗಿ ಮುನ್ನಡೆಸುತ್ತಿದ್ದರು. ತಮ್ಮ ಚಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಲು ಮೂಲಕ ಕೆಟ್ಟ ದಾಖಲೆ ಬರೆದಿದ್ದಾರೆ. ಕ್ಯಾಪ್ಟನ್ ಆಗಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್ ಆದ ಮೊದಲ ಭಾರತೀಯ ಎಂಬ ಕುಖ್ಯಾತಿಗೆ ಕಾರಣರಾಗಿದ್ದಾರೆ. ಅಲ್ಲದೇ ತಾವು ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಸೋಲುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನ ಶುಬ್ಮನ್ ಗಿಲ್ ಮುನ್ನಡೆಸಿದರು. ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಆದರೆ ಅಯ್ಯರ್ ಬೇಡದ್ದ ದಾಖಲೆಯನ್ನ ಬರೆದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಅದ್ಭುತ ಆರಂಭದೊಂದಿಗೆ 333 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಅಯ್ಯರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಲ್ಲರೂ ಚೇಸಿಂಗ್ನ ಮೊದಲ ಓವರ್ನಲ್ಲಿ ಯಾವುದೇ ರನ್ ಗಳಿಸದೆ ಔಟಾದರು. ಅಯ್ಯರ್ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ನಾಯಕರಾದರು. ಅಯ್ಯರ್ಗಿಂತ ಮೊದಲು, ಇತರ ಏಳು ಕ್ರಿಕೆಟಿಗರು ಈ ಅನಗತ್ಯ ಸಾಧನೆಯನ್ನು ಮಾಡಿದ್ದರು. ಕೊನೆಯಲ್ಲಿ ಭಾರತ ತಂಡವು 26.4 ಓವರ್ಗೆ ಎಲ್ಲಾ ವಿಕೆಟ್ ಕಳೆದುಕೊಂಡು 89 ರನ್ಗಳಿಸಿ ಸೋಲಿಗೆ ಶರಣಾಯಿತು.
ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ನಾಯಕತ್ವದಲ್ಲಿ ಶೂನ್ಯಕ್ಕೆ ಔಟ್ ಆದವರ ಲಿಸ್ಟ್
- 1975ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಪೂರ್ವ ಆಫ್ರಿಕಾ ತಂಡದ ನಾಯಕ ಹರಿಲಾಲ್ ಶಾ ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್ ಆದರು ಹಾಗೂ ಆ ಪಂದ್ಯದಲ್ಲಿ ಅವರ ತಂಡವು ಸೋಲು ಕಂಡಿತು.
- 1975ರಲ್ಲಿ ಮ್ಯಾಂಚೆಸ್ಟರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ಅನುರಾ ತೆನ್ನೆಕೂನ್ ಶೂನ್ಯಕ್ಕೆ ಔಟ್ ಆಗಿದ್ದು, ಈ ಪಂದ್ಯದಲ್ಲಿ ಶ್ರೀಲಂಕಾ ಸೋಲು ಅನುಭವಿಸಿತು.
- 1985/86ರ ಋತುವಿನಲ್ಲಿ ಮೊರಟುವಾದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಗಾಜಿ ಅಶ್ರಫ್ ಶೂನ್ಯಕ್ಕೆ ಔಟ್ ಆದರು ಮತ್ತು ಬಾಂಗ್ಲಾದೇಶ ತಂಡವು ಪಂದ್ಯವನ್ನು ಸೋತಿತು.
- 1999/00ರ ಋತುವಿನಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಶಾನ್ ಪೊಲಾಕ್ ಶೂನ್ಯಕ್ಕೆ ಔಟ್ ಆದರು; ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲನುಭವಿಸಿತು.
- 2003/04ರ ಋತುವಿನಲ್ಲಿ ಜಾರ್ಜ್ಟೌನ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ರಾಮನರೇಶ್ ಸರ್ವಾನ್ ಶೂನ್ಯಕ್ಕೆ ಔಟ್ ಆದರು ಹಾಗೂ ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲು ಕಂಡಿತು.
- 2004ರಲ್ಲಿ ದಿ ಓವಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೆರಿಕ (USA) ತಂಡದ ನಾಯಕ ರಿಚರ್ಡ್ ವೇನ್ ಸ್ಟೇಪಲ್ ಶೂನ್ಯಕ್ಕೆ ಔಟ್ ಆದರು ಮತ್ತು ಅವರ ತಂಡವು ಸೋಲು ಅನುಭವಿಸಿತು.
- 2004ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ರಾಜಿನ್ ಸಾಲೆಹ್ ಶೂನ್ಯಕ್ಕೆ ಔಟ್ ಆಗಿದ್ದು, ಆ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲು ಕಂಡಿತು.
- 2026ರಲ್ಲಿ ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲೇ ಶೂನ್ಯಕ್ಕೆ ಔಟ್ ಆದರು ಹಾಗೂ ಈ ಪಂದ್ಯದಲ್ಲಿ ಭಾರತವು ಸೋಲನುಭವಿಸಿತು.














