ಲಾಹೋರ್(ಸೆ.12)‌: ಪಾಕಿ​ಸ್ತಾನ ಕ್ರಿಕೆಟ್‌ ಮಂಡಳಿ (ಪಿ​ಸಿ​ಬಿ)ಯ ಪ್ರಧಾನ ಆಯ್ಕೆಗಾರ​ರಾಗಿ ಮಾಜಿ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ನೇಮಕಗೊಳ್ಳುವುದು ಬಹು​ತೇಕ ಖಚಿತವಾಗಿದೆ. 

ಸದ್ಯ, ಪಾಕಿ​ಸ್ತಾನ ತಂಡದ ಪ್ರಧಾನ ಕೋಚ್‌ ಮಿಸ್ಬಾ ಉಲ್‌ ಹಕ್‌, ಪ್ರಧಾನ ಆಯ್ಕೆಗಾರನ ಹುದ್ದೆಯನ್ನೂ ನಿರ್ವ​ಹಿ​ಸು​ತ್ತಿದ್ದಾರೆ. ಎರಡೂ ಹುದ್ದೆಗಳನ್ನು ನಿಭಾ​ಯಿ​ಸು​ವುದು ಕಷ್ಟ ಎನ್ನುವ ಕಾರಣಕ್ಕೆ, ಆಯ್ಕೆಗಾರನ ಹುದ್ದೆಯನ್ನು ಅಖ್ತರ್‌ಗೆ ನೀಡಲು ಪಿಸಿಬಿ ನಿರ್ಧ​ರಿ​ಸಿದೆ. 

‘ಪಿ​ಸಿಬಿ ಜೊತೆ ಮಾತು​ಕ​ತೆ ನಡೆ​ಸಿ​ದ್ದೇನೆ. ಆದರೆ ಇನ್ನೂ ಅಧಿ​ಕೃತಗೊಂಡಿಲ್ಲ’ ಎಂದು ಶೋಯೆಬ್ ಅಖ್ತರ್‌ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿ​ಯಿ​ಸಿ​ದ್ದಾರೆ. ನನಗೆ ಆಹ್ವಾನ ಬಂದಿದೆ ಎಂದು ಹೇಳಲು ನಿರಾಕರಿಸುತ್ತಿಲ್ಲ. ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಜತೆ ಮಾತುಕತೆ ಪ್ರಗತಿಯಲ್ಲಿದೆ. ನಾನು ಪಾಕಿಸ್ತಾನ ತಂಡದ ಪಾಲಿಗೆ ಮಹತ್ವದ ಪಾತ್ರ ನಿಭಾಯಿಸಲು ಉತ್ಸುಕನಾಗಿದ್ದೇನೆ. ಆದರೆ ಆಯ್ಕೆಗಾರನ ಹುದ್ದೆಯ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ ಎಂದು ಅಖ್ತರ್ ಕ್ರಿಕೆಟ್ ಬಾಜ್ ಎನ್ನುವ ಯೂಟೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಬಾಲಿವುಡ್‌ ನಟಿಯೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಲವ್ವಿ-ಡವ್ವಿ..!

ಸದ್ಯ ನಾನೀಗ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಆಡುವ ಸಂದರ್ಭದಲ್ಲಿ ತಂಡಕ್ಕೆ ನಾನು ಉಪಯುಕ್ತ ಕಾಣಿಕೆ ನೀಡಿದ್ದೇನೆ. ಈಗ ಮತ್ತೊಮ್ಮೆ ಅವಕಾಶ ಒದಗಿ ಬಂದರೆ ದೇಶ ಸೇವೆ ಮಾಡಲು ತನ್ನ ಕಂಪರ್ಟ್‌ಝೋನ್ ಬಿಟ್ಟು ಕೆಲಸ ಮಾಡಲು ಸಿದ್ಧ ಎಂದು ಅಖ್ತರ್ ಹೇಳಿದ್ದಾರೆ.