RCBಗೆ 178 ರನ್ ಟಾರ್ಗೆಟ್, ನಾಲ್ಕನೇ ಗೆಲುವು ಸಿಗುತ್ತಾ?
ಆರ್ ಸಿಬಿ ಮತ್ತು ರಾಜಸ್ಥಾನ ನಡುವಿನ ಪಂದ್ಯ/ ಆರ್ ಸಿಬಿಗೆ 178 ಟಾರ್ಗೆಟ್/ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ಬೆಂಗಳೂರು/ ಬ್ಯಾಟಿಂಗ್ ನಲ್ಲಿ ಎಡವಿದ ರಾಜಸ್ಥಾನ/ ಮುಂಬೈನಲ್ಲಿ ಸ್ಪರ್ಧಾತ್ಮಕ ಮೊತ್ತ
ಮುಂಬೈ(ಏ.22): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 16ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿಗಿವೆ. ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು.
ಬ್ಯಾಟಿಂಗ್ ಗೆ ಇಳಿದ ರಾಜಸ್ಥಾನಕ್ಕೆ ಆರ್ ಸಿಬಿ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದರು. ಆದರೆ ಶಿವಂ ದುಬೆ (46) ಮತ್ತು ಪರಾಗ್(25) ಒಳ್ಳೆಯ ಜತೆಯಾಟ ಕಟ್ಟಿಕೊಟ್ಟರು.
ದೊಡ್ಡ ಮೊತ್ತದ ದಂಡ ಕಟ್ಟಿದ ಕೆಕೆಆರ್ ನಾಯಕ
ಕೊನೆಯಲ್ಲಿ ಅಬ್ಬರಿಸಿದ ತೆವಾಟಿಯಾ ಮತ್ತು ಮೋರಿಸ್ ತಂಡದ ಮೊತ್ತವನ್ನು ಹೆಚ್ಚಿಸಿದರು. ನಲವತ್ತು ರನ್ ಗಳಿಸಿ ಹತ್ತೊಂಭತ್ತನೇ ಓವರ್ ಕೊನೆ ಎಸೆತದಲ್ಲಿ ತೆವಾಟಿಯಾ ಔಟ್ ಆದರು . ರಾಜಸ್ಥಾನ 178 ರನ್ ಟಾರ್ಗೆಟ್ ಸೆಟ್ ಮಾಡಿದೆ. ಸಂಜು ಸಾಮ್ಸನ್, ಬಟ್ಲರ್ ಸಂಪೂರ್ಣ ವಿಫಲರಾದರು.
ಒಂದು ಹಂತದಲ್ಲಿ ರಾಜಸ್ಥಾನ 43 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇತ್ತು. ಈ ವೇಳೆ ದುಬೆ ಮತ್ತು ಪರಾಗ್ ಆಶ್ರಯವಾದರು. ಹರ್ಷಲ್ ಪಟೇಲ್ ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮತ್ತೊಂದು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಆಡಿದ 3 ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.