ಮೆಲ್ಬರ್ನ್‌(ಮಾ.19): ಆಸ್ಪ್ರೇಲಿಯಾದ ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌ ಇಲ್ಲಿನ ಬ್ರೈಟನ್‌ನಲ್ಲಿರುವ ತಮ್ಮ ಬಂಗಲೆಯನ್ನು ಹರಾಜಿಗಿಟ್ಟಿದ್ದಾರೆ. ಏ.4ರಂದು ನಡೆಯಲಿರುವ ಹರಾಜಿನಿಂದ ಬರೋಬ್ಬರಿ  50ರಿಂದ 54 ಕೋಟಿ ಹಣ ಸಂಪಾದಿಸುವ ನಿರೀಕ್ಷೆಯಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಇದನ್ನೂ ಓದಿ: ಶೇನ್ ವಾರ್ನ್‌ ‘ಬ್ಯಾಗಿ ಗ್ರೀನ್‌’ ಕ್ಯಾಪ್‌ಗೆ ಸಿಕ್ಕಾಪಟ್ಟೆ ಬೇಡಿಕೆ!

ಎರಡು ಅಂತಸ್ಥಿನ ಕಟ್ಟದಲ್ಲಿ 5 ಬೆಡ್‌ರೂಂಗಳಿದ್ದು, ಹೋಮ್‌ ಥಿಯೇಟರ್‌, ಮಿನಿ ಬಾರ್‌, ಸ್ಪಾ, ಈಜುಕೊಳದ ಸೌಲಭ್ಯಗಳಿವೆ. 2018ರಲ್ಲಿ ಸ್ಥಳೀಯ ಫುಟ್ಬಾಲ್‌ ಕ್ಲಬ್‌ನ ಜನಪ್ರಿಯ ಆಟಗಾರ ಮ್ಯಾಥ್ಯೂ ಲಾಯ್ಡ್‌ರಿಂದ ವಾರ್ನ್‌ ಅಂದಾಜು .40 ಕೋಟಿಗೆ ಈ ಬಂಗಲೆಯನ್ನು ಖರೀದಿಸಿದ್ದರು ಎಂದು ಅಧಿಕೃತ ದಾಖಲೆಗಳಲ್ಲಿವೆ.

ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಕ್ರಿಯರಾಗಿರುವ ವಾರ್ನ್‌ ಬ್ರೈಟನ್‌ನಲ್ಲಿ ಹಲವು ಆಸ್ತಿ ಖರೀದಿ ಮಾಡಿದ್ದು, ಉತ್ತಮ ಬೆಲೆ ಬಂದಾಗ ಮಾರಾಟ ಮಾಡಿದ್ದಾರೆ. ಇದೇ ರೀತಿ ಅವರು ಕೋಟ್ಯಂತರ ರುಪಾಯಿ ಹಣ ಸಂಪಾದಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ.