ಇಸ್ಲಾಮಾಬಾದ್[ಫೆ.28]: ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆ ನಡೆಸಿಕೊಂಡ ರೀತಿಯನ್ನು ನೋಡಿದಾಗ ಪಾಕಿಸ್ತಾನ ಸೇನೆಯ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಫಲಿಸಿತು ಭಾರತೀಯರ ಪೂಜಾಫಲ: ಅಭಿನಂದನ್ ನಾಳೆ ಭಾರತಕ್ಕೆ!

ಪಾಕ್ ಸೇನೆ ವಿಂಗ್ ಕಮಾಂಡರ್ ಅಭಿನಂದನ್ ವಿಚಾರಣೆ ಮಾಡುತ್ತಿರುವ ವಿಡಿಯೋವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಅಫ್ರಿದಿ, ನನಗೆ ಪಾಕಿಸ್ತಾನದ ಸೇನೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಶತೃಗಳನ್ನೂ ಕೂಡಾ ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದಕ್ಕೆ ಇದೇ ಸಾಕ್ಷಿ. ಭಾರತ ಆರಂಭಿಸಿರುವ ಯುದ್ಧೋನ್ಮಾದ ಇನ್ನಾದರೂ ನಿಲ್ಲಿಸಲಿ. ನಮ್ಮದು ಶಾಂತಿ ಬಯಸುವ ದೇಶ. ಇದಕ್ಕೆ ನಮ್ಮ ಪ್ರಧಾನಿ ಇಮ್ರಾನ್ ಖಾನ್ ಜಂಟಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವ ವೇಳೆ ಭಾರತದ ಮಿಗ್-21 ಯುದ್ಧ ವಿಮಾನವೊಂದು ದಾಳಿಗೆ ಗುರಿಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಗಡಿಯಾಚೆ ಪತನಗೊಂಡಿತ್ತು. ಇದನ್ನು ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ವಿ. ಅಭಿನಂದನ್ ಪಾಕ್ ಪಡೆಯ ವಶಕ್ಕೆ ಸಿಲುಕಿದ್ದರು.