Asianet Suvarna News Asianet Suvarna News

ಭಾರತೀಯ ಬ್ಯಾಟರ್​ಗಳ ಚಿಂತೆ ಹೆಚ್ಚಿಸಿರೋ ಪಾಕ್​ ಡೆಲ್ಲಿ ವೇಗಿ ಅಫ್ರಿದಿ ..!

ಹಳೆಯ ಖದರ್​ಗೆ ಮರಳಿದ ಶಾಹೀನ್ ಅಫ್ರಿದಿ..!
2021ರ T20 ವಿಶ್ವಕಪ್​ನಲ್ಲಿ ಮಿಂಚಿದ್ದ ಎಡಗೈ ವೇಗಿ..!

Shaheen Afridi sent Silent Warning to Team India batters ahead of ICC ODI World Cup 2023 kvn
Author
First Published Jul 4, 2023, 12:25 PM IST

ಬೆಂಗಳೂರು(ಜು.04) ಏಕದಿನ ವಿಶ್ವಕಪ್ ಸಮರ ಆರಂಭಕ್ಕೆ ಇನ್ನು ಮೂರು ತಿಂಗಳು ಬಾಕಿಯಿದೆ. ಆದ್ರೆ, ಈಗಿನಿಂದಲೇ ವಲ್ಡ್​ಕಪ್ ಫೀವರ್ ಶುರುವಾಗಿದೆ. ಅದರಲ್ಲೂ ಬದ್ಧವೈರಿಗಳಾದ ಭಾರತ- ಪಾಕಿಸ್ತಾನ ಮ್ಯಾಚ್​​ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ.

ಅಕ್ಟೋಬರ್ 15 ರಂದು ಇಂಡೋ- ಪಾಕ್ ವಾರ್ ನಡೆಯಲಿದೆ.  ಹೈವೋಲ್ಟೇಜ್ ಫೈಟ್​ಗೆ ಅಹಮದಾಬಾದ್​ನ ನಮೋ ಸ್ಟೇಡಿಯಂ ಸಾಕ್ಷಿಯಾಗಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ವಿಶ್ವಕಪ್ ರಣರಂಗದಲ್ಲಿ ಗೆಲುವಿನ ಬಾವುಟ ಹಾರಿಸಲು ಈಗಿನಿಂದಲೇ ರಣತಂತ್ರ ರೂಪಿಸ್ತಿವೆ. ಆದ್ರೆ, ಟೀಂ ಇಂಡಿಯಾ ಬ್ಯಾಟರ್​ಗಳಿಗೆ, ಪಾಕ್​ನ ಈ ಬೌಲರ್​ನ ಹೇಗೆ ಎದುರಿಸೋದು ಅನ್ನೋದೆ ದೊಡ್ಡ ಚಿಂತೆಯಾಗಿದೆ. 

ಹಳೆಯ ಖದರ್​ಗೆ ಮರಳಿದ ಶಾಹೀನ್ ಅಫ್ರಿದಿ..!

ಯೆಸ್, ಇಂಜುರಿಯಿಂದಾಗಿ ಕಳೆದ ವರ್ಷ ಶಾಹೀನ್ ಅಫ್ರಿದಿ ಏಷ್ಯಾಕಪ್ ಆಡಿರಲಿಲ್ಲ. T20 ವಿಶ್ವಕಪ್  ಆಡಿದ್ರು, ಇಂಪ್ಯಾಕ್ಟ್​ಫುಲ್ ಪ್ರದರ್ಶನ ನೀಡಿರಲಿಲ್ಲ. ಆದ್ರೀಗ, ಈ ಎಡಗೈ ವೇಗಿ ಮತ್ತೆ ಫಾರ್ಮ್​ಗೆ ಬಂದಿದ್ದಾನೆ. ಇಂಗ್ಲೆಂಡ್​ T20 ಬ್ಲಾಸ್ಟ್​ ಲೀಗ್​ನಲ್ಲಿ ನಾಟಿಂಗ್​ಹ್ಯಾಮ್ಶೈರ್ ಪರ ಖತರ್ನಾಕ್ ಬೌಲಿಂಗ್​ನಿಂದ ಮಿಂಚ್ತಿದ್ದಾನೆ.  ವಾರ್​ವಿಕ್​ಶೈರ್ ವಿರುದ್ದದ ಪಂದ್ಯದಲ್ಲಿ ಅಫ್ರಿದಿ, ಇನ್ನಿಂಗ್ಸ್​​ನ ಮೊದಲ ಓವರ್​​ನಲ್ಲೇ 4  ವಿಕೆಟ್ ಬೇಟೆಯಾಡಿದ್ದಾನೆ. ಆ ಮೂಲಕ T20  ಕ್ರಿಕೆಟ್​ನ ಮೊದಲ ಓವರ್​ನಲ್ಲೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ದಾಖಲೆ ಬರೆದಿದ್ದಾನೆ.

BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!

ಮೊದಲಿಗೆ ಅಲೆಕ್ಸ್​ನ ಡೆವಿಸ್​ನ LBW ಬಲೆಗೆ ಬೀಳಿಸಿದ ಅಫ್ರಿದಿ, ನಂತರ ಕ್ರಿಸ್​ ಬೆಂಜಮಿನ್​ನ ಕ್ಲೀನ್​ ಬೌಲ್ಡ್ ಮಾಡಿದ್ರು. ಡ್ಯಾನ್ಸ್​ ಮೌಸ್ಲಿ ಕ್ಯಾಚ್ ನೀಡಿ ಔಟಾದ್ರೆ, ಎಡ್ ಬರ್ನಾರ್ಡ್​ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ದಾರಿ ಹಿಡಿದ್ರು. 

2021ರ T20 ವಿಶ್ವಕಪ್​ನಲ್ಲಿ ಮಿಂಚಿದ್ದ ಎಡಗೈ ವೇಗಿ..!

T20 ವಿಶ್ವಕಪ್​ನಲ್ಲಿ ಇಂಜುರಿ ಮಧ್ಯೆಯೇ ಶಾಹೀನ್ ಬೌಲಿಂಗ್ ಮಾಡಿದ್ರು. ಇದ್ರಿಂದ ತಮ್ಮ ಖದರ್​ಗೆ ತಕ್ಕಂತೆ ಅಬ್ಬರಿಸಲು ಸಾಧ್ಯವಾಗಿರಲಿಲ್ಲ. ಆದ್ರೆ, 2021ರ ಟಿ20 ವಿಶ್ವಕಪ್​ನಲ್ಲಿ ಶಾಹೀನ್ ಅಫ್ರಿದಿ, ಭಾರತದ ಟಾಪ್ ಆರ್ಡರ್ ಬ್ಯಾಟ್ಸ್​​​ಮನ್​ಗಳಿಗೆ ವಿಲನ್ ಆಗಿದ್ರು. ಕೆ.ಎಲ್ ರಾಹುಲ್, ರೋಹಿತ್​ ಶರ್ಮಾ ಆಫ್ರೀದಿ ಬೌಲಿಂಗ್​ನಲ್ಲಿ ಆಡಲಾಗದೆ ವಿಕೆಟ್ ಒಪ್ಪಿಸಿದ್ರು. 

ಮೊದಲೇ ಭಾರತೀಯ ಬ್ಯಾಟರ್ಸ್ ಎಡಗೈ ವೇಗಿಗಳ ವಿರುದ್ಧ ಆಡಲು ಪರದಾಡ್ತಾರೆ. ಅಂತದ್ರಲ್ಲಿ,  ಶಾಹೀನ್ ಅಫ್ರಿದಿಯ ಈ ಫಾರ್ಮ್​ ನೋಡಿದ್ರೆ, ಮುಂಬರೋ ಏಷ್ಯಾಕಪ್ ಮತ್ತು ವಿಶ್ವಕಪ್​​ನಲ್ಲಿ ಭಾರತದ ಬ್ಯಾಟರ್ಸ್​ಗೆ ಕಂಟಕ ತಪ್ಪಿದ್ದಲ್ಲ.
 

Follow Us:
Download App:
  • android
  • ios