ಸಿಡ್ನಿ(ಜ.03) : ಆಸ್ಪ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್‌ ಮಾರ್ಕ್ ವಾ, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಲೆಗ್‌ ಬೈ ತೆಗೆದುಹಾಕಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಬಿಗ್‌ಬ್ಯಾಶ್‌ ಲೀಗ್‌ನ ಪಂದ್ಯದ ವೀಕ್ಷಕ ವಿವರಣೆ ವೇಳೆ ವಾ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಹಾರ್ದಿಕ್-ನತಾಶಾ ಎಂಗೇಜ್‌ಮೆಂಟ್: ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ

‘ಕ್ರಿಕೆಟ್‌ನಲ್ಲಿ ನಿಯಮ ಬದಲಿಸಬೇಕು. ಲೆಗ್‌ ಬೈ ಇರಬಾರದು. ಕೊನೆ ಪಕ್ಷ ಟಿ20ಯಿಂದಾದರೂ ತೆಗೆದು ಹಾಕಬೇಕು . ಬ್ಯಾಟ್ಸ್‌ಮನ್‌ ಚೆಂಡನ್ನು ಬಾರಿಸಲು ವಿಫಲರಾದಾಗ ಅದರ ಲಾಭ ಬ್ಯಾಟಿಂಗ್‌ ತಂಡಕ್ಕೆ ಸಿಗಬಾರದು. ಈ ನಿಯಮವನ್ನು ಪರಿಚಯಿಸಿದ ವ್ಯಕ್ತಿ ತಾನು ಆಡುತ್ತಿದ್ದ ದಿನಗಳಲ್ಲಿ ಒಬ್ಬ ಸಾಧಾರಣ ಬ್ಯಾಟ್ಸ್‌ಮನ್‌ ಆಗಿದ್ದ ಎನಿಸುತ್ತದೆ’ ಎಂದು ವಾ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಕ್ರಿಕೆಟ್‌ ಚುನಾವಣೆ ಸ್ಪರ್ಧಿಸಲು ಗಂಭೀರ್ ಅನರ್ಹ..!.

ಬೌಲರ್ ಚಾಣಾಕ್ಷತನದಿಂದ ಬ್ಯಾಟ್ಸ್‌ಮನ್‌ಗೆ ಸಿಗದೆ ಹಾಗೇ ಬೌಲಿಂಗ್ ಮಾಡಿದಾಗ ಲೆಗ್ ಬೈ ಮೂಲಕ ರನ್ ನೀಡುವುದು ಸರಿಯಲ್ಲ. ಲೆಗ್ ಬೈಯಿಂದ ಬೌಲರ್ ಶ್ರಮ ವ್ಯರ್ಥವಾಗುತ್ತಿದೆ. ಅಂತಿಮ ಕ್ಷಣದಲ್ಲಿ ಲೆಗ್ ಬೈ ಮೂಲಕ ಪಂದ್ಯ ಗೆದ್ದ ಊದಾಹರಣೆಗಳಿವೆ. ಬೌಲರ್‌ಗೆ ಶ್ರೇಯಸ್ಸು ನೀಡಬೇಕು ಎಂದು ವ್ಹಾ ಹೇಳಿದ್ದಾರೆ.