Sania Mirza - Shoaib Malik separation: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಬೇರೆಯಾಗಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿರುವಾಗಲೇ ಸಾನಿಯಾ ಮಿರ್ಜಾ ಇದು ಹೌದು ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ಧಾರೆ. 

ನವದೆಹಲಿ: ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಮಾಜಿ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಶೋಯೆಬ್‌ ಮಲಿಕ್‌ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ವ್ಯಾಪಕವಾಗಿ ವರದಿಯಾಗಿದೆ. ಇದು ಸತ್ಯ ಎಂಬಂತೆ ಸಾನಿಯಾ ಮಿರ್ಜಾ ಇನ್ನೊಂದು ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇನ್ಸ್‌ಟಾಗ್ರಾಂ ಸ್ಟೋರಿಯಲ್ಲಿ "ಮುರಿದ ಹೃದಯಗಲು ಎಲ್ಲಿಗೆ ಹೋಗುತ್ತವೆ. ಅಲ್ಲಾನ ಹುಡುಕಲು ಹೋಗುತ್ತವೆ," ಎಂದು ಬರೆದುಕೊಂಡಿದ್ದಾರೆ. ಇದರಿಂದ ಅವರ ಖಾಸಗಿ ಜೀವನದಲ್ಲಿ ಬಿರುಕು ಬಿಟ್ಟಿರುವುದು ಸ್ಪಷ್ಟವಾಗಿದೆ. ಸಾನಿಯಾ ಮಿರ್ಜಾರಿಗೆ ಮೋಸ ಮಾಡಿ ಇನ್ನೊಂದು ಹುಡುಗಿಯ ಜೊತೆ ಶೋಯೆಬ್‌ ಮಲಿಕ್‌ಗೆ ಸಂಬಂಧವಿತ್ತು ಎಂಬ ಆರೋಪವೂ ಕೇಳಿ ಬಂದಿವೆ. 

ಇಬ್ಬರ ನಡುವೆ ಕೆಲ ಸಮಯದಿಂದ ಎಲ್ಲವೂ ಸರಿಯಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಮತ್ತು ಮಗ ಇಜಾನ್‌ನನ್ನು ಒಬ್ಬೊಬ್ಬರು ಒಂದಷ್ಟು ದಿನ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ ಮದುವೆ ಭಾರತ ಮತ್ತು ಪಾಕಿಸ್ತಾನದ ಅಭಿಮಾನಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಕೆಲವರು ಇದನ್ನು ಖಂಡಿಸಿದ್ದರೆ, ಕೆಲವರು ಪ್ರೀತಿಗೆ ದೇಶದ ಹಂಗಿಲ್ಲ ಎಂದಿದ್ದರು. ಆದರೆ ಈಗ ಇಬ್ಬರ ಮದುವೆ ವಿಚ್ಛೇದನದಲ್ಲಿ ಅಂತ್ಯವಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇದಕ್ಕೆ ಮೂಲ ಕಾರಣ ಸಾನಿಯಾ ಮಿರ್ಜಾ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌. ಶೋಯೆಬ್‌ ಮಲಿಕ್‌ ಸಾನಿಯಾ ಮಿರ್ಜಾಗೆ ಮೋಸ ಮಾಡಿ ಇನ್ನೊಬ್ಬಳ ಜತೆಗೆ ಸಂಬಂಧ ಹೊಂದಿದ್ದರು ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್‌ 2010ರಲ್ಲಿ ಮದುವೆಯಾಗಿದ್ದರು. ಎರಡು ದೇಶಗಳ ನಡುವೆ ದ್ವೇಷಗಳಿದ್ದರೂ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ದೇಶಗಳ ಹಂಗು ಮೀರಿ ಇಬ್ಬರೂ ಮದುವೆಯಾಗಿದ್ದರು. ಜಗತ್ತಿನಾದ್ಯಂತ ಭಾರೀ ಸದ್ದು ಮಾಡಿದ ಮದುವೆಯಿದು. ಜತೆಗೆ ಸ್ಟಾರ್‌ ಜೋಡಿ ಅತ್ಯಂತ ಕ್ಯೂಟ್‌ ಜೋಡಿ ಎಂದೂ ಕರೆಸಿಕೊಂಡಿದ್ದರು. ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಶೋಯೆಬ್‌ ಮಲಿಕ್‌ ಸಾನಿಯಾ ಮಿರ್ಜಾ ಅವರಿಗೆ ವಂಚಿಸಿದ್ದಾರೆ. ಅವರು ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು. ಇದು ತಿಳಿದ ನಂತರ ಸಾನಿಯಾ ಮತ್ತು ಶೋಯೆಬ್‌ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. ಈ ಊಹಾಪೋಹಗಳ ಕುರಿತು ಇಬ್ಬರೂ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

ಇದನ್ನೂ ಓದಿ: ಸಾನಿಯಾ ಮಿರ್ಜಾ ಪುತ್ರ ಸಿನಿಮಾಗೆ ಎಂಟ್ರಿ? ಕಡಿಮೆ ಬೆಲೆಗೆ ಸಿಕ್ಕ ಹೀರೋ ಎಂದ ನಿರ್ದೇಶಕಿ ಫರಾ ಖಾನ್

ಕಳೆದ ಶುಕ್ರವಾರ ಇನ್ಸ್‌ಟಾಗ್ರಾಂ ಪೋಸ್ಟ್‌ನಲ್ಲಿ ಸಾನಿಯಾ ಮಿರ್ಜಾ ಮಗ ಇಜಾನ್‌ ಜೊತೆಗಿನ ಫೋಟೊ ಹಾಕಿದ್ದಾರೆ. ಅದರ ಕ್ಯಾಪ್ಷನ್‌ನಲ್ಲಿ ಕಷ್ಟದ ದಿನಗಳಿಂದ ಆಚೆ ಬರಲು ಸಹಕರಿಸಿದ ಸಂದರ್ಭ ಎಂದು ಹೇಳಿಕೊಂಡಿದ್ದಾರೆ. ಮೊದಲೇ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಹಬ್ಬುತ್ತಿರುವ ಸಮಯದಲ್ಲೇ ಸಾನಿಯಾ ಮಿರ್ಜಾ ಕಷ್ಟದ ದಿನಗಳು ಎಂಬ ಪೋಸ್ಟ್‌ ಮಾಡಿರುವುದು ಊಹಾಪೋಹಗಳಿಗೆ ಪುರಾವೆ ಒದಗಿಸಿದಂತಾಗಿದೆ. 

ಇತ್ತೀಚೆಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್ ಮಗ ಇಜಾನ್‌ನ ನಾಲ್ಕನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದಾರೆ. ಆದರೆ ಇದರ ಫೋಟೊಗಳನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಆದರೆ ಶೋಯೆಬ್‌ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೂ ಕೂಡ ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿತ್ತು. 

ಇದನ್ನೂ ಓದಿ: ಇನ್ನೊಬ್ಬಳಿಗಾಗಿ Sania Mirzaಗೆ ವಂಚಿಸಿದ Shoaib Malik?: ಡಿವೋರ್ಸ್‌ಗೆ ಮುಂದಾದ ಸ್ಟಾರ್‌ ಜೋಡಿ

ಇತ್ತೀಚೆಗೆ ಪಾಕಿಸ್ತಾನಿ ಕ್ರಿಕೆಟ್‌ ಶೋ ಒಂದರಲ್ಲಿ ಸಾನಿಯಾ ಮಿರ್ಜಾ ಅವರ ಟೆನ್ನಿಸ್‌ ಅಕಾಡೆಮಿಗಳು ಮತ್ತು ಅವು ಎಲ್ಲೆಲ್ಲಿವೆ ಎಂಬ ಪ್ರಶ್ನೆಗೆ ಶೋಯೆಬ್‌ ಮಲಿಕ್‌ ನನಗೆ ಅದರ ಕುರಿತು ಯಾವುದೇ ಮಾಹಿತಿಯಿಲ್ಲ ಎಂದಿದ್ದರು. ನಾನು ಯಾವ ಅಕಾಡೆಮಿಗಳಿಗೂ ಇದುವರೆಗೂ ಹೋಗಿಲ್ಲ ಎಂದಿದ್ದರು. ಇದರಿಂದ ಸಿಟ್ಟಾದ ವಕಾರ್‌ ಯೂನಸ್‌ ಶೋಯೆಬ್‌ ನೀನೆಂತ ಗಂಡ, ಹೆಂಡತಿಯ ಅಕಾಡೆಮಿ ಎಲ್ಲಿದೆ ಎಂಬುದೂ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದರು.