ಮುಂಬೈ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಸೊಸೆ ಸಾನಿಯಾ ಚಾಂದೋಕ್ ಅವರಿಗೆ ಮೊದಲು ಟೀ ಬೇಕೇ ಎಂದು ಕೇಳಿದರು. ಅವರು ಬೇಡ ಎಂದಾಗ ತಕ್ಷಣ ಕೋಲ್ಡ್ ಕಾಫಿ ಆರ್ಡರ್ ಮಾಡಿದರು. ಈ ಸಣ್ಣ ಕಾಳಜಿ ಮತ್ತು ಆತ್ಮೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೊಸೆಯನ್ನು ಮಗಳಂತೆ ಕಾಣುವ ಸಚಿನ್ ಅವರ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈದಾನದ ಲೆಜೆಂಡ್, ಕುಟುಂಬದಲ್ಲೂ ಅಷ್ಟೇ ಸರಳ ವ್ಯಕ್ತಿತ್ವ,,!
ಮುಂಬೈ: ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಆದರೆ ಮೈದಾನದ ಹೊರಗಿನ ಅವರ ವಿನಯ, ಸರಳತೆ ಮತ್ತು ಕುಟುಂಬದ ಮೇಲಿನ ಪ್ರೀತಿ ಕೂಡ ಅಷ್ಟೇ ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ, ಅವರ ವ್ಯಕ್ತಿತ್ವದ ಮತ್ತೊಂದು ಸುಂದರ ಮುಖವನ್ನು ಅನಾವರಣಗೊಳಿಸಿದೆ.
ಸೊಸೆಯ ಇಷ್ಟಕ್ಕೆ ಆದ್ಯತೆ ನೀಡಿದ ಕ್ಷಣ ವೈರಲ್..!
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿನ್, ಪತ್ನಿ ಅಂಜಲಿ ಮತ್ತು ಸೊಸೆ ಸಾನಿಯಾ ಚಾಂದೋಕ್ ಅವರೊಂದಿಗೆ ಭಾಗವಹಿಸಿದ್ದರು. ಅತಿಥಿಗಳಿಗೆ ಚಹಾ-ಕಾಫಿ ನೀಡುತ್ತಿದ್ದ ವೇಳೆ ಸಚಿನ್, ಸಾನಿಯಾ ಅವರಿಗೆ "ಚಹಾ ಬೇಕಾ ಅಥವಾ ಕಾಫಿ?" ಎಂದು ಆತ್ಮೀಯವಾಗಿ ಕೇಳಿದರು. ಸಾನಿಯಾ ಕಪ್ಪು ಕಾಫಿ ಬೇಕೆಂದು ಹೇಳುತ್ತಿದ್ದಂತೆ, ಅದನ್ನು ತರುವಂತೆ ಸಿಬ್ಬಂದಿಗೆ ವಿನಮ್ರವಾಗಿ ಸೂಚಿಸಿದರು. ಈ ಸಣ್ಣ ಕಾಳಜಿಯ ನಡೆ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾನಿಯಾ ಚಾಂದೋಕ್ ಹಿನ್ನೆಲೆ ಏನು?
ಅರ್ಜುನ್ ತೆಂಡೂಲ್ಕರ್ ಅವರನ್ನು ವಿವಾಹವಾದ ಸಾನಿಯಾ ಚಾಂದೋಕ್ ಉದ್ಯಮಶೀಲ ಕುಟುಂಬದ ಸದಸ್ಯೆ. ಅವರು ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ಮುಂಬೈನಲ್ಲಿ ಪ್ರೀಮಿಯಂ ಪೆಟ್ ಸಲೂನ್, ಸ್ಪಾ ಮತ್ತು ಪೆಟ್ ಕೇರ್ ಸೇವೆಗಳನ್ನು ಒದಗಿಸುವ 'ಮಿಸ್ಟ್ ಪಾವ್' ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ.
ಸಣ್ಣ ನಡೆ, ದೊಡ್ಡ ಸಂದೇಶ!
ಸಚಿನ್ ಅವರ ಈ ನಡೆ ಕೇವಲ ಆತಿಥ್ಯದ ಉದಾಹರಣೆ ಮಾತ್ರವಲ್ಲ. ಕುಟುಂಬದ ಪ್ರತಿಯೊಬ್ಬರ ಅಭಿರುಚಿಗೆ ಗೌರವ ನೀಡುವುದು, ಪರಸ್ಪರ ಕಾಳಜಿ ತೋರಿಸುವುದು ಮತ್ತು ಆತ್ಮೀಯವಾಗಿ ವರ್ತಿಸುವುದು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂಬ ಸಂದೇಶವನ್ನು ಇದು ಸಾರುತ್ತದೆ. ಅದಕ್ಕಾಗಿಯೇ ಈ ವಿಡಿಯೋಗೆ ಸಾವಿರಾರು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, "ಸೊಸೆಯನ್ನು ಮಗಳಂತೆ ಕಾಣುವ ಮಾವ" ಎಂದು ಸಚಿನ್ ಅವರನ್ನು ಹೊಗಳುತ್ತಿದ್ದಾರೆ.


