ಮುಂಬೈ(ಏ.24): ವಿಶ್ವ ಕ್ರಿಕೆಟ್ ಸಾಮ್ರಾಟ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಚಿನ್ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಗಣ್ಯರು ಶುಭಕೋರಿದ್ದಾರೆ. ಲಾಕ್‌ಡೌನ್ ಕಾರಣ ಸಚಿನ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲೇ ಶುಭಹಾರೈಸಿದ್ದಾರೆ. ಹುಟ್ಟು ಹಬ್ಬದ ದಿನವನ್ನು ಸಚಿನ್ ತೆಂಡುಲ್ಕರ್ ತಾಯಿಯ ಆಶೀರ್ವಾದ ಪಡೆಯುವ ಮೂಲಕ ಆರಂಭಿಸಿದ್ದಾರೆ. 

47ನೇ ವಸಂತಕ್ಕೆ ಕಾಲಿರಿಸಿದ ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್

ಸಚಿನ್ ತಾಯಿಯ ಆಶೀರ್ವಾದ ಪಡೆಯುತ್ತಿದ್ದಂತೆ ಅಚ್ಚರಿ ಕಾದಿತ್ತು. ಕಾರಣ ಆಶೀರ್ವಾದ ಪಡೆದ ಸಚಿನ್‌ಗೆ ತಾಯಿ ವಿಶೇಷ ಉಡುಗೊರೆ ನೀಡಿದ್ದಾರೆ. ಗಣೇಶನ ಫೋಟೋವನ್ನು ಸಚಿನ್‌ಗೆ ನೀಡಿದ್ದಾರೆ. ಈ ವಿಶೇಷ ಗಿಫ್ಟ್ ಫೋಟೋವನ್ನು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ತಾಯಿ ಉಡುಗೊರೆ ಸಂತಸವನ್ನು ಹಂಚಿಕೊಂಡಿದ್ದಾರೆ.

 

ಸಚಿನ್ ಪ್ರತಿ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೂ ತಾಯಿ ರಜನಿ ತೆಂಡುಲ್ಕರ್ ಯಾವುತ್ತೂ ಸಚಿನ್ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಆಗಮಿಸಿರಲಿಲ್ಲ. ಸಚಿನ್ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ದೇವರ ಮನೆಯಲ್ಲಿ ಪೂಜೆ ಆರಂಭಿಸುತ್ತಿದ್ದರು. ಸಚಿನ್ ಉತ್ತಮ ಪ್ರದರ್ಶನ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಸಚಿನ್ ವಿದಾಯದ ಪಂದ್ಯ ಅಂದರೆ 200ನೇ ಟೆಸ್ಟ್ ಪಂದ್ಯಕ್ಕೆ ರಜನಿ ತೆಂಡುಲ್ಕರ್ ಮೊದಲ ಬಾರಿ ಕ್ರೀಡಾಂಗಣ ಪ್ರವೇಶಿಸಿ ಸಚಿನ್ ಪಂದ್ಯ ವೀಕ್ಷಿಸಿದ್ದರು.

ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರಜನಿ ತೆಂಡುಲ್ಕರ್, ಮಗನ ಬ್ಯಾಟಿಂಗ್ ಮೊದಲ ಬಾರಿಗೆ ಕ್ರೀಡಾಂಗಣಗಲ್ಲಿ ವೀಕ್ಷಿಸಿದ್ದರು. ಇಷ್ಟೇ ಅಲ್ಲ ಸಚಿನ್ ಪ್ರತಿ ಬೌಂಡರಿ , ರನ್ ಸಿಡಿಸಿದಾಗ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದ್ದರು. ಸಚಿನ್ ತಾಯಿಗಾಗಿ ವಾಂಖೆಡೆ ಕ್ರೀಡಾಂಗಣ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಕಾರಣ ಸಚಿನ್ ತಾಯಿಗೆ ಕಾಲು ನೋವು ಕಾರಣ ನಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೀಲ್ಹ್ ಚೇರ್ ಮೂಲಕ ವಿಐಪಿ ಗ್ಯಾಲರಿ ವರೆಗೆ ತೆರಳು ಕ್ರಿಕೆಟ್ ಸಂಸ್ಥೆ ಎಲ್ಲಾ ವ್ಯವಸ್ಥೆ ಮಾಡಿತ್ತು.

ಕ್ರಿಕೆಟ್‌ಗೆ ವಿದಾಯ ಹೇಳಿದರೂ ಈಗಲೂ ಅಭಿಮಾನಿಗಳು ಸಚಿನ್ ಸಚಿನ್  ಕೂಗು ಕೇಳುತ್ತಲೇ ಇದೆ. ವಿದಾಯದ ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಚಿನ್ ತೆಂಡುಲ್ಕರ್‌ ಅವರ ಮಾರ್ಗದರ್ಶನ ಯುವ ಕ್ರಿಕೆಟಿಗರಿಗೆ ಸಿಗಲಿ. ಈ ಸಂದರ್ಭದಲ್ಲಿ ದಿಗ್ಗಜ ಸಚಿನ್‌ಗೆ ಹ್ಯಾಪಿ ಬರ್ತ್ ಡೇ.