ಟೀಂ ಇಂಡಿಯಾ ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಈ ಇಬ್ಬರ ಸಾಧನೆಯನ್ನು ಹಲವು ಮಾಜಿ ಕ್ರಿಕೆಟಿಗರು ಶುಭಕೋರಿದ್ದಾರೆ.
ನವದೆಹಲಿ: ಟಿ20 ವಿಶ್ವಕಪ್ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯಕೋರಿದ ಭಾರತದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಕ್ರಿಕೆಟ್ ಲೋಕ ಶುಭ ಹಾರೈಸಿದ್ದು, ಭಾರತೀಯ ಕ್ರಿಕೆಟ್‌ಗೆ ಇಬ್ಬರು ದಿಗ್ಗಜರು ನೀಡಿದ ಕೊಡುಗೆಯನ್ನು ಶ್ಲಾಘಿಸಿದೆ.
ಭಾರತದ ಮುಂದಿನ ಕೋಚ್ ಎಂದೇ ಕರೆಸಿಕೊಳ್ಳುವ ಗೌತಮ್ ಗಂಭೀರ್, 'ಕೊಹ್ಲಿ ರೋಹಿತ್ ವಿಶ್ವಕಪ್ ಗೆಲುವಿನೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. ಇಬ್ಬರೂ ಶ್ರೇಷ್ಠ ಆಟಗಾರರು. ಭಾರತ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆ ಅಪಾರ' ಎಂದಿದ್ದಾರೆ.
'ಕ್ರಿಕೆಟ್ ದೇವರು' ಖ್ಯಾತಿಯ ಸಚಿನ್ ತೆಂಡುಲ್ಕರ್ ಕೂಡಾ ಎಕ್ಸ್ ಖಾತೆಯಲ್ಲಿ ಸಂದೇಶ ರವಾನಿ ಸಿದ್ದಾರೆ. 'ಪ್ರತಿಭಾವಂತ ಕ್ರಿಕೆಟಿಗನಿಂದ ವಿಶ್ವಕಪ್ ವಿಜೇತ ನಾಯಕ ಆಗುವವರೆಗೂ ರೋಹಿತ್ ಆಟ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಬದ್ಧತೆ ಮತ್ತು ಅಸಾಧಾರಣ ಪ್ರತಿಭೆ ದೇಶಕ್ಕೆ ಹೆಮ್ಮೆ ತಂದಿದೆ ಎಂದಿದ್ದಾರೆ. ಅಲ್ಲದೆ ಕೊಹ್ಲಿಯನ್ನು ನಿಜವಾದ ಚಾಂಪಿಯನ್ ಎಂದು ಬಣ್ಣಿಸಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಇಯಾನ್ ಬಿಷಪ್, ಪಾಕಿಸ್ತಾನದ ಶೋಯೆಬ್ ಅಖರ್ ಸೇರಿದಂತೆ ಹಾಲಿ, ಮಾಜಿ ಕ್ರಿಕೆಟಿಗರು ಕೂಡಾ ಕೊಹ್ಲಿ, ರೋಹಿತ್‌ಗೆ ಶುಭ ಹಾರೈಸಿದ್ದಾರೆ.
ಭಾರತ ಟಿ20 ವಿಶ್ವಕಪ್ ಗೆದ್ದು 24 ಗಂಟೆ ಕಳೆದರೂ ನಿಲ್ಲದ ಸಂಭ್ರಮ..!
ಟಿ20 ಸೆಣಿಯಲ್ಲಿ 250+ ರನ್: ರೋಹಿತ್ 2ನೇ ಭಾರತೀಯ ಬ್ಯಾಟರ್
ಟಿ20 ಸರಣಿವೊಂದರಲ್ಲಿ 250ಕ್ಕಿಂತ ಹೆಚ್ಚು ರನ್ ಕಲೆಹಾಕಿದ ಭಾರತದ 2ನೇ ಬ್ಯಾಟರ್ ಎನ್ನುವ ಹಿರಿಮೆಗೆ ನಾಯಕ ರೋಹಿತ್ ಶರ್ಮಾ ಪಾತ್ರರಾದರು. 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ 257 ರನ್ ಕಲೆಹಾಕಿದರು. ಈ ಟೂರ್ನಿಯಲ್ಲಿ ಅವರಿಂದ 3 ಅರ್ಧಶತಕಗಳು ದಾಖಲಾದವು.
ಇದಕ್ಕೂ ಮೊದಲು ಈ ಸಾಧನೆಯನ್ನು ವಿರಾಟ್ ಕೊಹ್ಲಿ ನಾಲ್ಕು ಸರಣಿಗಳಲ್ಲಿ ಮಾಡಿದ್ದರು. 2014ರ ಟಿ20 ವಿಶ್ವಕಪ್, 2016ರ ಟಿ20 ವಿಶ್ವಕಪ್, 2022ರ ಏಷ್ಯಾಕಪ್ ಹಾಗೂ 2022ರ ಟಿ20 ವಿಶ್ವಕಪ್‌ಗಳಲ್ಲಿ ವಿರಾಟ್ ಕೊಹ್ಲಿ 250ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದರು.
2024ರ ಟಿ20 ವಿಶ್ವಕಪ್‌ನಲ್ಲಿ 200ಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೂ ರೋಹಿತ್ ಶರ್ಮಾ ಪಾತ್ರರಾದರು. ಸೂರ್ಯಕುಮಾರ್ ಯಾದವ್ 199 ರನ್ ಗಳಿಸಿ, 2ನೇ ಗರಿಷ್ಠ ರನ್ ಸರದಾರ ಎನಿಸಿದರು.
ಆಟಗಾರ, ಕೋಚ್, ಆಯ್ಕೆಗಾರ, ಬಿಸಿಸಿಐ ಅಧ್ಯಕ್ಷರಾಗಿ ಐಸಿಸಿ ಟ್ರೋಫಿ ಗೆದ್ದ ರೋಜರ್ ಬಿನ್ನಿ!
ನವದೆಹಲಿ: ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಭಾರತದ ಟಿ20 ವಿಶ್ವಕಪ್ ಗೆಲುವಿನೊಂದಿಗೆ ವಿಶೇಷ ಸಾಧನೆ ಮಾಡಿದ್ದಾರೆ. 1983ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ಬಿನ್ನಿ ಭಾರತ ತಂಡದಲ್ಲಿ ಪ್ರಮುಖ ಬೌಲರ್ ಆಗಿದ್ದರು. ಬಳಿಕ 2000ರಲ್ಲಿ ಅವರು ಕೋಚ್ ಆಗಿದ್ದಾಗ ಭಾರತ ಅಂಡರ್-19 ವಿಶ್ವಕಪ್ ಗೆದ್ದಿತ್ತು. 2013ರಲ್ಲಿ ಭಾರತ ಎಂ.ಎಸ್.ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಬಿನ್ನಿ ಆಯ್ಕೆ ಸಮಿತಿಯಲ್ಲಿದ್ದರು. ಈ ವರ್ಷ ಟಿ20 ವಿಶ್ವಕಪ್ ಗೆದ್ದಾಗ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾರೆ.
ಭಾರತದಲ್ಲಿ ಅಪಾರ ಪ್ರಮಾಣದ ಯುವ ಕ್ರಿಕೆಟಿಗರಿದ್ದಾರೆ. ಐಪಿಎಲ್ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬರುತ್ತಿರುತ್ತಾರೆ. ಆದರೆ ಕೊಹ್ಲಿ, ರೋಹಿತ್ ಅನುಪಸ್ಥಿತಿ ಭಾರತ ತಂಡಕ್ಕೆ ಬಹಳ ದಿನ ಕಾಡಲಿದೆ. ಭಾರತೀಯ ಕ್ರಿಕೆಟ್‌ಗೆ ಅವರಿಬ್ಬರ ಕೊಡುಗೆ ಅಪಾರ.
• ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ
