ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಅವರ ಹೆಸರು ಟೀಂ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ತಳುಕು ಹಾಕಿಕೊಂಡಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಅಚ್ಚರಿಯ ಸುದ್ದಿ ಹರಿದಾಡುತ್ತಿದೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಅವರ ಹೆಸರು ಟೀಂ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ತಳುಕು ಹಾಕಿಕೊಂಡಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಅಚ್ಚರಿಯ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಕಿರಿಯ ಪುತ್ರ ರಾಜ್‌ವೀರ್ ಡಿಯೋಲ್ ಜೊತೆ ಸಾರಾ ತೆಂಡೂಲ್ಕರ್ ಮದುವೆಯಾಗಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? 2027ರಲ್ಲಿ ಈ ಜೋಡಿ ಹಸೆಮಣೆ ಏರಲಿದೆಯೇ?
ಸಾರಾ ತೆಂಡೂಲ್ಕರ್-ರಾಜ್‌ವೀರ್ ಡಿಯೋಲ್ ಮದುವೆ ಸುದ್ದಿ ವೈರಲ್
ಸಚಿನ್ ತೆಂಡೂಲ್ಕರ್ ಕುಟುಂಬ ಮತ್ತು ಸನ್ನಿ ಡಿಯೋಲ್ ಕುಟುಂಬದ ನಡುವೆ ಮದುವೆ ಸಂಬಂಧ ಏರ್ಪಡಲಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸಾರಾ ತೆಂಡೂಲ್ಕರ್ ಹಾಗೂ ರಾಜ್‌ವೀರ್ ಡಿಯೋಲ್ ನಡುವೆ ಪ್ರೀತಿ ಶುರುವಾಗಿದ್ದು, ಇಬ್ಬರೂ 2027ರ ಆರಂಭದಲ್ಲಿ ಮದುವೆಯಾಗಬಹುದು ಎಂದು ಕೆಲವು ಪೋಸ್ಟ್‌ಗಳಲ್ಲಿ ಹೇಳಲಾಗುತ್ತಿದೆ.
ಈ ವದಂತಿಗಳಿಗೆ ಪ್ರಮುಖ ಕಾರಣ ಎಕ್ಸ್ (X) ಖಾತೆಯೊಂದರಲ್ಲಿ ಹಂಚಿಕೊಳ್ಳಲಾದ ಪೋಸ್ಟ್. @Bhumika_2026 ಎಂಬ ಖಾತೆಯಿಂದ ಪ್ರಕಟವಾದ ಪೋಸ್ಟ್‌ನಲ್ಲಿ ರಾಜ್‌ವೀರ್ ಡಿಯೋಲ್ ಅವರು ಸಾರಾ ತೆಂಡೂಲ್ಕರ್‌ಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈ ಜೋಡಿ ಮುಂದಿನ ವರ್ಷದ ಆರಂಭದಲ್ಲೇ ಮದುವೆಯಾಗಬಹುದು ಎಂಬ ಊಹಾಪೋಹವನ್ನೂ ಹಂಚಿಕೊಳ್ಳಲಾಗಿದೆ. ಇದೇ ವಿಚಾರ ರೆಡ್ಡಿಟ್‌ನಲ್ಲೂ ಚರ್ಚೆಗೆ ಕಾರಣವಾಗಿದೆ.
ಸೈರಾ ಅತ್ತಿಗೆ ಸಾನಿಯಾ ಚಂದೋಕ್ ಹೆಸರೂ ಪ್ರಸ್ತಾಪ
ಈ ಮದುವೆ ವದಂತಿಯಲ್ಲಿ ಸಾರಾ ತೆಂಡೂಲ್ಕರ್ ಅವರ ಅತ್ತಿಗೆ ಸಾನಿಯಾ ಚಂದೋಕ್ಅವರ ಹೆಸರನ್ನೂ ಎಳೆದು ತರಲಾಗಿದೆ. ಸಾನಿಯಾ ಅವರು ಮುಂದಿನ ವರ್ಷ ಮದುವೆ ನಡೆಯುವ ಬಗ್ಗೆ ಸುಳಿವು ನೀಡಿದ್ದಾರೆ ಮತ್ತು ವರನು ಹತ್ತಿರದಲ್ಲೇ ವಾಸಿಸುತ್ತಿದ್ದಾರೆ ಎಂದು ಕೆಲವು ವೈರಲ್ ಪೋಸ್ಟ್‌ಗಳಲ್ಲಿ ಹೇಳಿಕೊಳ್ಳಲಾಗಿದೆ.
ಸಚಿನ್-ಸನ್ನಿ ಡಿಯೋಲ್ ಕುಟುಂಬಗಳು ಒಂದಾಗುತ್ತವೆಯೇ?
ಒಂದು ಕಡೆ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಕುಟುಂಬ, ಮತ್ತೊಂದು ಕಡೆ ಬಾಲಿವುಡ್‌ನ ಖ್ಯಾತ ಡಿಯೋಲ್ ಕುಟುಂಬ. ಈ ಎರಡು ಪ್ರಸಿದ್ಧ ಕುಟುಂಬಗಳ ನಡುವೆ ವೈವಾಹಿಕ ಸಂಬಂಧ ಏರ್ಪಡಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಹಿಂದೆ ಸಾರಾ ತೆಂಡೂಲ್ಕರ್ ಅವರ ಹೆಸರು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಕೇಳಿಬಂದಿತ್ತು. ಇದೀಗ ರಾಜ್‌ವೀರ್ ಡಿಯೋಲ್ ಜೊತೆಗಿನ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಆದರೆ ಸೈರಾ ಮತ್ತು ರಾಜ್‌ವೀರ್ ಇಬ್ಬರೂ ಪ್ರೀತಿಯಲ್ಲಿದ್ದಾರೆ ಅಥವಾ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬುದನ್ನು ಎಲ್ಲಿಯೂ ಅಧಿಕೃತವಾಗಿ ಖಚಿತಪಡಿಸಿಲ್ಲ.
ಅಧಿಕೃತ ಸ್ಪಷ್ಟನೆಗಾಗಿ ಕಾಯಬೇಕು
ಸದ್ಯಕ್ಕೆ ಸಚಿನ್ ತೆಂಡೂಲ್ಕರ್ ಕುಟುಂಬವಾಗಲಿ, ಸನ್ನಿ ಡಿಯೋಲ್ ಕುಟುಂಬವಾಗಲಿ ಈ ಮದುವೆ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸೈರಾ ಅಥವಾ ರಾಜ್‌ವೀರ್ ಕೂಡ ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಹೀಗಾಗಿ 2027ರಲ್ಲಿ ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹ ಮಾತ್ರ. ಅಧಿಕೃತ ಮಾಹಿತಿ ಹೊರಬರುವವರೆಗೆ ಈ ಸುದ್ದಿಯನ್ನು ದೃಢಪಟ್ಟ ಬೆಳವಣಿಗೆ ಎಂದು ಪರಿಗಣಿಸುವುದು ಸರಿಯಲ್ಲ.














