ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನವೆಂಬರ್ ಕೇವಲ ಒಂದು ತಿಂಗಳಲ್ಲ, ಅದು ಸಿಹಿ ಮತ್ತು ಕಹಿ ನೆನಪುಗಳ ಸಮ್ಮಿಲನ. ಸಚಿನ್, ಶಮಿ ಹಾಗೂ ಧೋನಿ ಅವರ ವಿದಾಯ ಮತ್ತು ವಿಶ್ವಕಪ್ ಸೋಲು ಇದೇ ತಿಂಗಳಲ್ಲಿ ನಡೆದಿರುವುದು ವಿಶೇಷವಾಗಿದೆ.
ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನವೆಂಬರ್ ಕೇವಲ ಒಂದು ತಿಂಗಳಲ್ಲ, ಅದು ಸಿಹಿ ಮತ್ತು ಕಹಿ ನೆನಪುಗಳ ಸಮ್ಮಿಲನ. ಟೀಮ್ ಇಂಡಿಯಾದ ದಿಗ್ಗಜ ಆಟಗಾರರ ವಿದಾಯ ಮತ್ತು ಅತ್ಯಂತ ನೋವಿನ ಸೋಲುಗಳೆಲ್ಲವೂ ಇದೇ ನವೆಂಬರ್ ತಿಂಗಳಿನಲ್ಲಿಯೇ ನಡೆದಿರುವುದು ವಿಶೇಷ ಹಾಗೂ ಕಾಕತಾಳೀಯ. ಹಾಗಾದರೆ ಈ ನವೆಂಬರ್ ಯಾರನ್ನು ಅಭಿಮಾನಿಗಳಿಂದ ಕಿತ್ತುಕೊಂಡಿದೆ, ಆ ಸಂಪೂರ್ಣ ವಿವರ ಇಲ್ಲಿದೆ.
'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ವಿದಾಯ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ 200ನೇ ಟೆಸ್ಟ್ ಪಂದ್ಯವಾಡಿದ ಸಚಿನ್ ತೆಂಡೂಲ್ಕರ್ 2013ರ ನವೆಂಬರ್ 16ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಚಿನ್ ಅವರ ಭಾವನಾತ್ಮಕ ವಿದಾಯದ ಭಾಷಣ ಇಡೀ ಭಾರತೀಯ ಕ್ರಿಕೆಟ್ ಲೋಕವನ್ನೇ ಭಾವುಕಗೊಳಿಸಿತ್ತು. ಅಲ್ಲದೇ ಅವರ ನಿವೃತ್ತಿ ವೇಳೆ ಅವರನ್ನು ಹೊತ್ತು ಗ್ರೌಂಡ್ ತುಂಬ ಸುತ್ತಿದ್ದು,ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ.
ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ
ಟೀಮ್ ಇಂಡಿಯಾದ ಮಾರಕ ವೇಗದ ಬೌಲರ್ ಮೊಹಮ್ಮದ್ ಶಮಿ, ತಾವು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಂದೇ (ನವೆಂಬರ್ 6) ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಅಂದರೆ 2026ರ ನವೆಂಬರ್ 6ರಂದು ವಿದಾಯ ಘೋಷಿಸಿದರು. ವಿದೇಶಿ ನೆಲದಲ್ಲಿ ಭಾರತದ ಐತಿಹಾಸಿಕ ಗೆಲುವುಗಳಿಗೆ ಕಾರಣರಾಗಿದ್ದ ಶಮಿ ಅವರ ನಿವೃತ್ತಿ ಟೆಸ್ಟ್ ತಂಡದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿತು. ಅಲ್ಲದೇ ಅಭಿಮಾನಿಗಳಿಂದ ಸೋಶಿಯಲ ಮೀಡಿಯಾದಲ್ಲಿ ವಿಭಿನ್ನ ಪ್ರತಿಕ್ರಿಯೆ ಸಹ ಕೇಳಿ ಬಂದಿತ್ತು.
'ಥಾಲಾ' ಎಂ.ಎಸ್. ಧೋನಿ ಐಪಿಎಲ್ ನಿವೃತ್ತಿ!
ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಎಂ.ಎಸ್. ಧೋನಿ ಅವರು ನಿನ್ನೆಯಷ್ಟೇ (ನವೆಂಬರ್ 17) ಐಪಿಎಲ್ ಆಟಗಾರನಾಗಿ ನಿವೃತ್ತಿ ಘೋಷಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆದ್ದುಕೊಟ್ಟ ನಾಯಕ ಇನ್ನು ಮುಂದೆ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ಭಾರಿ ನೋವು ತಂದಿದ್ದನ್ನು ನೋಡಬಹುದಾಗಿದೆ.
ಏಕದಿನ ವಿಶ್ವಕಪ್ ಫೈನಲ್ ಸೋಲಿನ ಆಘಾತ!
2023ರ ಏಕದಿನ ವಿಶ್ವಕಪ್‌ನಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಅಜೇಯವಾಗಿದ್ದ ರೋಹಿತ್ ಶರ್ಮಾ ಪಡೆ, ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. 12 ವರ್ಷಗಳ ನಂತರ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಭಾರತೀಯರ ಕನಸು ನುಚ್ಚುನೂರಾದ ಆ ದಿನವನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ.ಒಂದೆಡೆ ದಿಗ್ಗಜರ ನಿರ್ಗಮನ, ಇನ್ನೊಂದೆಡೆ ವಿಶ್ವಕಪ್ ಕನಸು ಭಗ್ನ. ಈ ಎಲ್ಲಾ ಘಟನೆಗಳು ನವೆಂಬರ್ ತಿಂಗಳನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮಾಸದ ಭಾವನಾತ್ಮಕ ಪುಟವನ್ನಾಗಿ ಮಾಡಿವೆ.












