* ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿಯ ಫೈನಲ್‌ಗೆ ಇಂದು ಆತಿಥ್ಯ* ಪ್ರಶಸ್ತಿಗಾಗಿ ಪ್ರಿಟೋರಿಯಾ ಕ್ಯಾಪಿಟಲ್ಸ್-ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ಕಾದಾಟ* ಮಳೆಯಿಂದಾಗಿ ಫೈನಲ್‌ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆ

ಜೋಹಾನ್ಸ್‌ಬರ್ಗ್‌(ಫೆ.12): ಪ್ರಿಟೋರಿಯಾ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡಗಳ ನಡುವೆ ಫೆಬ್ರವರಿ 11ರಂದು ನಡೆಯಬೇಕಿದ್ದ SA20 ಲೀಗ್ ಫೈನಲ್‌ ಪಂದ್ಯವು ಇಂದಿಗೆ(ಫೆ.12) ಮುಂದೂಡಲ್ಪಟ್ಟಿದೆ. ಮೈದಾನದಲ್ಲಿ ತೇವಾಂಶದ ವಾತಾವರಣ ಹಾಗೂ ಪ್ರತಿಕೂಲ ಪರಿಸ್ಥಿತಿ ಇದ್ದಿದ್ದರಿಂದ ಫೈನಲ್ ಪಂದ್ಯವನ್ನು ಇಂದಿಗೆ ಮುಂದೂಡಲ್ಪಟ್ಟಿದ್ದು, ಮೀಸಲು ದಿನವಾದ ಇಂದು ಸ್ಥಳೀಯ ಕಾಲಮಾನ 1.30ಕ್ಕೆ ಮುಂದೂಡಲ್ಪಟ್ಟಿದೆ.

ಕಳೆದ ಕೆಲ ದಿನಗಳಿಂದ ಜೋಹಾನ್ಸ್‌ಬರ್ಗ್‌ನಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದಾಗಿ, ಶನಿವಾರ ಫೈನಲ್ ಪಂದ್ಯಕ್ಕೆ ಮೈದಾನ ಸಂಪೂರ್ಣ ಸಜ್ಜುಗೊಂಡಿರಲಿಲ್ಲ. ಹೀಗಾಗಿ ಇದೀಗ, ಇಂದು ಫೈನಲ್‌ ಪಂದ್ಯಕ್ಕೆ ಪ್ರಶಸ್ತವಾಗಿರುವುದರಿಂದಾಗಿ, ಇಂದಿಗೆ ಪಂದ್ಯವನ್ನು ಮುಂದೂಡಲಾಗಿದೆ.

Scroll to load tweet…

ಕಳೆದ ಬುಧವಾರದಿಂದ ಇಲ್ಲಿ ನಿರಂತವಾಗಿ ಮಳೆ ಸುರಿದಿದ್ದು, ಇಲ್ಲಿಯವರೆಗೆ 200 ಮಿಲಿ ಲೀಟರ್ ಮಳೆ ಸುರಿದಿದೆ, ಕಳೆದ ಮೂರು ದಿನಗಳಿಂದ ಪಿಚ್ ಕವರ್ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ಹವಾಮಾನ ಇಲಾಖೆಯು ಶನಿವಾರ ಕೂಡಾ ಭಾರೀ ಮಳೆಯಾಗುವ ಸೂಚನೆ ನೀಡಿದ್ದರಿಂದಾಗಿ ಪಂದ್ಯವನ್ನು ಒಂದು ದಿನಕ್ಕೆ ಮುಂದೂಡಲಾಗಿದೆ. ಭಾನುವಾರ ಪಂದ್ಯ ಆಯೋಜನೆಗೆ ಯಾವುದೇ ತೊಡಕಾಗುವುದಿಲ್ಲ ಎನ್ನುವ ಸ್ಪಷ್ಟ ಮಾಹಿತಿ ನಮಗೆ ಸಿಕ್ಕಿದೆ ಎಂದು ದಕ್ಷಿಣಆಫ್ರಿಕಾ 20 ಲೀಗ್ ಟೂರ್ನಿಯ ಆಯೋಜಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SA20 2023 Final: ಪ್ರಶಸ್ತಿಗಾಗಿಂದು ಪ್ರಿಟೋರಿಯಾ ಕ್ಯಾಪಿಟಲ್ಸ್‌-ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ಕಾದಾಟ

SA20 ಲೀಗ್ ಕಮಿಷನರ್ ಗ್ರೇಮ್ ಸ್ಮಿತ್ ಈ ಕುರಿತಂತೆ ತಮ್ಮ ಪ್ರತಿಕ್ರಿಯೆ ತಿಳಿಸಿದ್ದು, " ನಾವು ಈಗಾಗಲೇ ಮ್ಯಾಚ್ ಸಿಬ್ಬಂದಿಗಳು, ತಂಡಗಳು, ಮೈದಾನದ ಸಿಬ್ಬಂದಿಗಳು, ದಕ್ಷಿಣ ಆಫ್ರಿಕಾ ಹವಾಮಾನ ಇಲಾಖೆ ಹಾಗೂ ಪ್ರಾಯೋಜಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಶನಿವಾರ ಪಂದ್ಯವನ್ನು ಮುಂದೂಡದ ಹೊರತು ಬೇರೆಯ ಆಯ್ಕೆಯೇ ಇರಲಿಲ್ಲ. ಒಳ್ಳೆಯ ವಾತಾವರಣದಲ್ಲಿ ಸ್ಮರಣೀಯ ಫೈನಲ್‌ ಪಂದ್ಯವನ್ನಾಗಿಸಲು ನಾವು ಸಕಲ ಪ್ರಯತ್ನ ಮಾಡಲಿದ್ದೇನೆ" ಎಂದು ತಿಳಿಸಿದ್ದರು.

ದಕ್ಷಿಣ ಆಫ್ರಿಕಾದ ತಾರಾ ಆಲ್ರೌಂಡರ್ ವೇಯ್ನ್ ಪಾರ್ನೆಲ್ ನೇತೃತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಸೆಮಿಫೈನಲ್‌ನಲ್ಲಿ ಡೇವಿಡ್ ಮಿಲ್ಲರ್ ನೇತೃತ್ವದ ಪಾರ್ಲ್‌ ರಾಯಲ್ಸ್‌ ತಂಡವನ್ನು ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 31 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಂಪಾದಿಸಿತ್ತು.

ಇನ್ನೊಂದೆಡೆ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡವು ಆಡಿದ 10 ಪಂದ್ಯಗಳಲ್ಲಿ 19 ಅಂಕಗಳೊಂದಿಗೆ ನಾಕೌಟ್ ಹಂತ ಪ್ರವೇಶಿಸಿತ್ತು. ಇನ್ನು ಸೆಮಿಫೈನಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಬಲಿಷ್ಠ ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.