₹450 ಕೋಟಿ ಚಿಟ್‌ ಫಂಡ್‌ ಹಗರಣದಲ್ಲಿ ಶುಭ್‌ಮನ್ ಗಿಲ್ ಸೇರಿದಂತೆ ಗುಜರಾತ್ ಟೈಟಾನ್ಸ್‌ನ ನಾಲ್ವರು ಕ್ರಿಕೆಟಿಗರಿಗೆ ಸಿಐಡಿ ಸಮನ್ಸ್. ಯೋಜನೆಯ ರೂವಾರಿ ಭೂಪೇಂದ್ರಸಿಂಗ್ ಝಾಲಾ ವಿರುದ್ಧ ₹6000 ಕೋಟಿ ವಂಚನೆ ಆರೋಪ. ಗಿಲ್ ₹1.9 ಕೋಟಿ ಹೂಡಿಕೆ ಮಾಡಿದ್ದರು. ತನಿಖೆಗೆ ಆಟಗಾರರ ಸಹಕಾರ ಅಗತ್ಯ ಎಂದು ಸಿಐಡಿ ತಿಳಿಸಿದೆ.

ಅಹಮದಾಬಾದ್: ₹450 ಕೋಟಿ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ತಾರಾ ಕ್ರಿಕೆಟಿಗ ಶುಭ್‌ಮನ್ ಗಿಲ್‌ ಸೇರಿ ಐಪಿಎಲ್‌ನ ಗುಜರಾತ್‌ ಟೈಟಾನ್ಸ್‌ ತಂಡದ ನಾಲ್ವರಿಗೆ ಸಿಐಡಿ ಸಮನ್ಸ್‌ ನೀಡಲಿದೆ ಎಂದು ವರದಿಯಾಗಿದೆ. ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾರನ್ನೂ ಅಪರಾಧ ತನಿಖಾ ಇಲಾಖೆ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಕ್ರಿಕೆಟಿಗರನ್ನು ಒಳಗೊಂಡು ಮಾಡಲಾದ ಹೂಡಿಕೆಯನ್ನು ಹಿಂದಿರುಗಿಸಲು ವಿಫಲವಾಗಿದ್ದಕ್ಕೆ ಯೋಜನೆಯ ಮಾಸ್ಟರ್‌ಮೈಂಡ್‌ ಭೂಪೇಂದ್ರಸಿಂಗ್‌ ಝಾಲಾ ಎಂಬವರ ವಿಚಾರಣೆ ನಡೆಸಲಾಗಿತ್ತು. ಯೋಜನೆ ಹೆಸರಲ್ಲಿ ಝಾಲಾ ಹಣವನ್ನು ಸಂಗ್ರಹಿಸಲು ಏಜೆಂಟ್‌ಗಳನ್ನು ನೇಮಿಸಿ ಬ್ಯಾಂಕ್‌ಗಳ ಮೂಲಕ ಸುಮಾರು ₹6,000 ಕೋಟಿ ವಹಿವಾಟು ನಡೆಸಿದ್ದರು. ಇದರಲ್ಲಿ ಗಿಲ್‌ ₹1.9 ಕೋಟಿ ಹೂಡಿಕೆ ಮಾಡಿದ್ದರು. ಆದರೆ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಝಾಲಾ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.

ಭಾರತ ತಂಡದಲ್ಲಿ ಯಾವುದೇ ಬಿರುಕಿಲ್ಲ, ಚೆನ್ನಾಗಿದ್ದೇವೆ: ಗೌತಮ್ ಗಂಭೀರ್

ಫೋಂಜಿ ಸ್ಕೀಮ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ. ಇನ್ನುಳಿದಂತೆ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ ಅವರು ಸಣ್ಣ ಪ್ರಮಾಣದಲ್ಲಿ ಈ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಎಲ್ಲರನ್ನೂ ಸಿಐಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

ಸದ್ಯ ಶುಭ್‌ಮನ್‌ ಗಿಲ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡುತ್ತಿದ್ದು ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಹಗರಣದ ಕುರಿತಂತೆ ಆಟಗಾರರ ಸಹಕಾರ ತನಿಖೆಗೆ ತುಂಬಾ ಅಗತ್ಯ ತುಂಬಾ ಮುಖ್ಯ ಎಂದು ಗುಜರಾತ್ ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. 

ರಾಹುಲ್-ಯಶಸ್ವಿ ಫೇಲ್; ಸಿಡ್ನಿ ಟೆಸ್ಟ್‌ನಲ್ಲೂ ಭಾರತಕ್ಕೆ ಆರಂಭಿಕ ಆಘಾತ!

ಸಿಡ್ನಿ ಟೆಸ್ಟ್‌ನಲ್ಲಿ ಫೇಲ್: ಮೆಲ್ಬರ್ನ್ ಟೆಸ್ಟ್‌ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದ ಶುಭ್‌ಮನ್ ಗಿಲ್ ಇದೀಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ತಂಡ ಕೂಡಿಕೊಂಡಿದ್ದಾರೆ. ಆದರೆ ಗಿಲ್‌ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಕೇವಲ20 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.