* ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆರ್‌ಸಿಬಿ* 2022ನೇ ಸಾಲಿನಲ್ಲಿ RCB ವಿಶ್ವದ 2ನೇ ಜನಪ್ರಿಯ ತಂಡವಾಗಿ ಹೊರಹೊಮ್ಮಿದೆ.* 190 ಮಿಲಿಯನ್ ಫಾಲೋರ್ಸ್ ಹೊಂದಿದ RCB
ಬೆಂಗಳೂರು(ಮೇ.26): ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) (Royal Challengers Bangalore ), ಐಪಿಎಲ್ ಹಿಸ್ಟರಿಯಲ್ಲಿ ಒಮ್ಮೆಯೂ ಕಪ್ ಗೆದ್ದಿಲ್ಲ ನಿಜ. ಆದ್ರೆ ಈ ತಂಡಕ್ಕಿರೋ ಫ್ಯಾನ್ ಬೇಸ್ ಮತ್ಯಾವ ತಂಡಕ್ಕಿಲ್ಲ. ಆರ್ಸಿಬಿಗೆ ನಿಷ್ಠಾವಂತ ಅಭಿಮಾನಿಗಳಿದ್ದಾರೆ. ಹೀಗಾಗಿನೇ ಕೆಂಪಂಗಿ ಸೈನ್ಯ ಐಪಿಎಲ್ನ ಜನಪ್ರಿಯ ತಂಡಗಳಲ್ಲಿ ಒಂದೆನಿಸಿಕೊಂಡಿದೆ. ಇಂತಹ ಬ್ರ್ಯಾಂಡ್ ತಂಡ ಈಗ ಇನ್ನೊಂದು ಬೆಂಚ್ ಮಾರ್ಕ್ ಸೃಷ್ಟಿಸಿದೆ. ವಿಶ್ವದ ಜನಪ್ರಿಯ ಕ್ರಿಕೆಟ್ ತಂಡವಾಗಿ ಹೊರಹೊಮ್ಮಿದೆ.
RCB ವಿಶ್ವದ ಜನಪ್ರಿಯ ಕ್ರಿಕೆಟ್ ಟೀಂ :
ಯೆಸ್, RCB ಖ್ಯಾತಿಗೆ ಈಗ ಬರೀ ಐಪಿಎಲ್ಗೆ ಸೀಮಿತವಾಗಿಲ್ಲ. ಅದು ವಿಶ್ವದಗಲಕ್ಕೂ ಪಸರಿಸಿದೆ. RCB ತಾಕತ್ತೇನು ಏನು ಅನ್ನೋದು ಈಗ ಸಾಬೀತಾಗಿದೆ. RCB ಬರೀ ಐಪಿಎಲ್ ಮಾತ್ರವಲ್ಲ, ವಿಶ್ವದ ಜನಪ್ರಿಯ ಸ್ಪೋಟ್ಸ್ ತಂಡ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.
ಪ್ರತಿ ವರ್ಷ ಏಪ್ರಿಲ್ ಅವಧಿಯ ವಿಶ್ವದ ಜನಪ್ರಿಯ ಸ್ಪೋಟ್ಸ್ ತಂಡವನ್ನ ಅನೌನ್ಸ್ ಮಾಡಲಾಗುತ್ತೆ. ಸೋಷಿಯಲ್ ಮೀಡಿಯಾದಲ್ಲಿನ ಎಂಗೇಜ್ಮೆಂಟ್ ಆಧಾರದ ಮೇಲೆ ಟಾಪ್ ತಂಡಗಳನ್ನು ನಿರ್ಧರಿಸಲಾಗುತ್ತೆ. 2022ನೇ ಸಾಲಿನಲ್ಲಿ RCB ವಿಶ್ವದ 2ನೇ ಜನಪ್ರಿಯ ತಂಡವಾಗಿ ಹೊರಹೊಮ್ಮಿದೆ. 190 ಮಿಲಿಯನ್ ಫಾಲೋರ್ಸ್ ಹೊಂದಿದ RCB ತಂಡ 2ನೇ ಸ್ಥಾನದಲ್ಲಿದ್ರೆ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡ 321 ಮಿಲಿಯನ್ ನೊಂದಿಗೆ ಅಗ್ರಸ್ಥಾನದಲ್ಲಿದೆ. RCB ಬಿಟ್ರೆ ಟಾಪ್-10ನಲ್ಲಿ ಬೇರಾವ ಕ್ರಿಕೆಟ್ ತಂಡವೂ ಸ್ಥಾನ ಪಡೆದಿಲ್ಲ. ಅಲ್ಲಿಗೆ ಅರ್ಥಮಾಡಿಕೊಳ್ಳಿ RCB ರೇಂಜ್, RCB ಪವರ್ ಎಷ್ಟರ ಮಟ್ಟಿಗೆ ಇದೇ ಅನ್ನೋದನ್ನ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಆರ್‌ಸಿಬಿ ಪಾಪ್ಯುಲಾರಿಟಿ :
ಈ ಬಾರಿ 2ನೇ ಸ್ಥಾನ ಪಡೆದಿರೋ ಆರ್‌ಸಿಬಿ, ಕಳೆದ ವರ್ಷ 8ನೇ ವಿಶ್ವದ ಜನಪ್ರಿಯ ಸ್ಪೋಟ್ಸ್ ತಂಡವೆನಿಸಿಕೊಂಡಿತ್ತು. ಅಂದ್ರೆ ಕಳೆದ ಬಾರಿಗಿಂತ ಈ ಸಲ ಆರ್‌ಸಿಬಿ ಪಾಪ್ಯುಲಾರಿಟಿ ಹೆಚ್ಚಿದೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಆರ್ಸಿಬಿಯ ಬದ್ಧವೈರಿ ಚೆನ್ನೈ ಈ ಬಾರಿ ಲಿಸ್ಟ್ನಿಂದ ಹೊರಬಿದ್ದಿದೆ. ಕಳೆದ ಸಲ ಧೋನಿ ನಾಯಕತ್ವದ ಸಿಎಸ್ಕೆ 9ನೇ ಸ್ಥಾನದಲ್ಲಿತ್ತು.
IPL 2022 ಲಖನೌ ಮಣಿಸಿ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ಆರ್‌ಸಿಬಿ!
RCB ಜನಪ್ರಿಯತೆ ದಿಢೀರ್ ಹೆಚ್ಚಾಗಿದ್ದೇಕೆ:
ಕಳೆದ ಬಾರಿಗೆ ಹೋಲಿಸಿದ್ರೆ ಈ ವರ್ಷ ಆರ್‌ಸಿಬಿ ಪಾಪ್ಯುಲಾರಿಟಿ ಎರಡು ಪಟ್ಟು ಹೆಚ್ಚಿದೆ. ಇದಕ್ಕೆ ಕಾರಣ ಏನಿರಬಹುದು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು. ಅದಕ್ಕೆ ಆನ್ಸರ್ ಸಿಂಪಲ್. ಮಾರ್ಚ್ ತಿಂಗಳಲ್ಲಿ ಐಪಿಎಲ್ ಆರಂಭಗೊಂಡಿತ್ತು. 5 ಬಾರಿ ಚಾಂಪಿಯನ್ ಮುಂಬೈ ಹಾಗೂ 4 ಬಾರಿ ಚಾಂಪಿಯನ್ ಚೆನ್ನೈ ತಂಡಗಳು ವರ್ಸ್ಟ್ ಪರ್ಫಾಮೆನ್ಸ್ ನೀಡಿದ್ವು. ಈ ಕಾರಣಕ್ಕಾಗಿ ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಎರಡು ತಂಡಗಳ ಫಾಲೋವರ್ಸ್ ಸಂಖ್ಯೆ ಕಮ್ಮಿಯಾಯ್ತು. ಆದ್ರೆ ಆರಂಭದಿಂದಲೇ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡ್ತಿದ್ದಂತೆ ಫಾಲೋವರ್ಸ್ ಹೆಚ್ಚಾದ್ರು. ಜೊತೆಗೆ ಪ್ಲೇ ಆಫ್ ಬೇರೆ ಪ್ರವೇಶಿಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಎಂಗೇಜ್ಮೆಂಟ್ನಲ್ಲಿ ಆರ್‌ಸಿಬಿ ವಿಶ್ವದ 2ನೇ ಪಾಪ್ಯುಲರ್ ತಂಡ ಎನಿಸಿಕೊಂಡಿದೆ.
