ಕೊಹ್ಲಿಯಿಂದ ಟಿ20 ನಾಯಕತ್ವ ಪಡೆಯಲು ರೋಹಿತ್‌ಗಿದು ಸಕಾಲ: ನಾಸಿರ್ ಹುಸೇನ್
ಮುಂಬೈ ಇಂಡಿಯನ್ಸ್ ತಂಡಕ್ಕೆ 5ನೇ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ರೋಹಿತ್ ಶರ್ಮಾ ನಾಯಕತ್ವವನ್ನು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹಸೇನ್ ಗುಣಗಾನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಂಡನ್(ನ.15): ಕಳೆದ ವಾರವಷ್ಟೇ ಮುಕ್ತಾಯವಾದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆದ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್, ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಗುಣಗಾನ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಅವರ ನಾಯಕತ್ವದಲ್ಲಿ ತಂಡದ ತೋರಿದ ಪ್ರದರ್ಶನವೇ ಸಾಕ್ಷಿ ಎಂದು ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಯುಎಇನಲ್ಲಿ ಒಟ್ಟು 56 ದಿನಗಳ ಕಾಲ ನಡೆದ ಸುದೀರ್ಘ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 16 ಪಂದ್ಯಗಳನ್ನಾಡಿ 11ರಲ್ಲಿ ಗೆಲುವು ದಾಖಲಿಸಿತ್ತು. ಕುತೂಹಲಕಾರಿ ಅಂಶವೆಂದರೆ ರೋಹಿತ್ ಶರ್ಮಾ ನಾಯಕನಾಗಿ 5 ಹಾಗೂ ಒಟ್ಟಾರೆ 6 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಆಟಗಾರ ಎನಿಸಿದ್ದಾರೆ. 2009ರ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು, ಆಗ ರೋಹಿತ್ ಡೆಕ್ಕನ್ ತಂಡದ ಸಹ ಆಟಗಾರರಾಗಿದ್ದರು.
ರೋಹಿತ್ ಶರ್ಮಾ ಬದಲು ಸೂರ್ಯಕುಮಾರ್ ಯಾದವ್‌ಗೆ ಚಾನ್ಸ್ ನೀಡಲು ಒತ್ತಾಯ
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ 5ನೇ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಬೆನ್ನಲ್ಲೇ ಹಿಟ್‌ಮ್ಯಾನ್ ನಾಯಕತ್ವಕ್ಕೆ ಅಭಿನಂದನೆಗಳು ಸುರಿಮಳೆಯೇ ಹರಿದು ಬರಲಾರಂಭಿಸಿದೆ. ಇದೀಗ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಕೂಡಾ ರೋಹಿತ್ ನಾಯಕತ್ವವನ್ನು ಗುಣಗಾನ ಮಾಡಿದ್ದಾರೆ.
ರೋಹಿತ್ ನಾಯಕನಾಗಿ ಕೂಲ್ ಆಗಿರುತ್ತಾರೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಎನಿಸುತ್ತಿದೆ. ಯಾಕೆಂದರೆ ರೋಹಿತ್ ಶರ್ಮಾ ಅವರ ರೆಕಾರ್ಡ್ ಎಲ್ಲವನ್ನು ಮಾತನಾಡುತ್ತಿದೆ ಎಂದು ನಾಸಿರ್ ಹುಸೇನ್ ಹೇಳಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 3 ದ್ವಿಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿರುವ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ನಾಸಿರ್ ಹುಸೇನ್ ಬಣ್ಣಿಸಿದ್ದಾರೆ.