ರೋಹಿತ್-ಹಾರ್ದಿಕ್ ವೈಫಲ್ಯಕ್ಕೆ ಕಾರಣವೇನು..? ಐಪಿಎಲ್‌ನಲ್ಲಿ ಫೇಲಾದವ್ರು, ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸ್ತಾರಾ..?
ಐಪಿಎಲ್‌ನಲ್ಲಿ ರೋಹಿತ್ ಶರ್ಮಾ & ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಬಿಗ್ ಸ್ಟಾರ್ಸ್, ಆದ್ರೆ, ಇವರಿಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ. ಹಾರ್ದಿಕ್ ತಂಡದ ನಾಯಕನಾದ ಮೇಲೆ ಇವರಿಬ್ಬರ ನಡುವೆ ಗ್ಯಾಪ್ ಏರ್ಪಟ್ಟಿದೆ. ಮುಂಬೈ ಟೀಮ್ ಎರಡು ಬಣಗಳಾಗಿದೆ. ಕೆಲ ಆಟಗಾರರು ಹಾರ್ದಿಕ್ ಮಾತು ಕೇಳ್ತಿಲ್ಲ. ಇದು ನಾಯಕ ಮತ್ತು ಮಾಜಿ ನಾಯಕರ ಆಟದ ಮೇಲೆ ಪರಿಣಾಮ ಬೀರಿದೆ. ಇದ್ರಿಂದ IPLನಲ್ಲಿ ಇಬ್ಬರು ಫ್ಲಾಪ್ ಶೋ ನೀಡ್ತಿದ್ದಾರೆ.
ಬೆಂಗಳೂರು: ಯಾವುದೇ ಮನೆಯಲ್ಲಿ ಎಲ್ಲಾ ಸರಿಯಿರಬೇಕಂದ್ರೆ, ಮನೆ ಯಜಮಾನ ಸರಿಯಿರಬೇಕು. ಇಲ್ಲ ಅಂದ್ರೆ ಮನೆಯವರ ನೆಮ್ಮದಿ ಹಾಳಾಗುತ್ತೆ. ಅವರ ಕೆಲಸಗಳ ಮೇಲೂ ಕೆಟ್ಟ ಪ್ರಭಾವ ಬೀರುತ್ತೆ. ಈ ಸದ್ಯ ಐಪಿಎಲ್‌ನಲ್ಲಿ 5 ಬಾರಿ ಕಪ್ ಗೆದ್ದ ತಂಡದ್ದು ಅದೇ ಕಥೆ ಆಗಿದೆ. ಅಷ್ಟಕ್ಕೂ ಇವ್ರೇನು ಹೇಳ್ತಿದ್ದಾರೆ ಅನ್ಕೊಂಡ್ರಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಟೀಂ ಇಂಡಿಯಾ ನಾಯಕ-ಉಪನಾಯಕನ ಫ್ಲಾಪ್ ಶೋ..!
ಐಪಿಎಲ್ ಮುಗಿದ ಒಂದೇ ವಾರದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಶುರುವಾಗಲಿದೆ. ಅಮೇರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ಮೆಗಾ ಟೂರ್ನಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಟೀಂ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ಈ ಬಾರಿ ಬಿಸಿಸಿಐ ಮತ್ತು ಟೀಂ ಇಂಡಿಯಾ ಕೋಚ್ ರಾಹುಲ್ ವಿಶ್ವಕಪ್ ಗೆಲ್ಲಲೇಬೇಕು ಅಂತ ಫಿಕ್ಸ್ ಆಗಿದೆ. ಮತ್ತೊಂದೆಡೆ ಫ್ಯಾನ್ಸ್ ಐಸಿಸಿ ಕಪ್ ಕನಸು ಕಾಣ್ತಿದ್ದಾರೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಅಭಿಮಾನಿಗಳ ಚಿಂತೆ ಹೆಚ್ಚಿಸಿದ್ದಾರೆ. ಈ ಚಿಂತಗೆ ಐಪಿಎಲ್ ಕಾರಣವಾಗಿದೆ.
ಯೆಸ್, ಐಪಿಎಲ್‌ನಲ್ಲಿ ರೋಹಿತ್ ಶರ್ಮಾ & ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಬಿಗ್ ಸ್ಟಾರ್ಸ್, ಆದ್ರೆ, ಇವರಿಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ. ಹಾರ್ದಿಕ್ ತಂಡದ ನಾಯಕನಾದ ಮೇಲೆ ಇವರಿಬ್ಬರ ನಡುವೆ ಗ್ಯಾಪ್ ಏರ್ಪಟ್ಟಿದೆ. ಮುಂಬೈ ಟೀಮ್ ಎರಡು ಬಣಗಳಾಗಿದೆ. ಕೆಲ ಆಟಗಾರರು ಹಾರ್ದಿಕ್ ಮಾತು ಕೇಳ್ತಿಲ್ಲ. ಇದು ನಾಯಕ ಮತ್ತು ಮಾಜಿ ನಾಯಕರ ಆಟದ ಮೇಲೆ ಪರಿಣಾಮ ಬೀರಿದೆ. ಇದ್ರಿಂದ IPLನಲ್ಲಿ ಇಬ್ಬರು ಫ್ಲಾಪ್ ಶೋ ನೀಡ್ತಿದ್ದಾರೆ.
ಹೌದು, ತಂಡದಲ್ಲಿನ ಒಳ ಜಗಳದಿಂದ ರೋಹಿತ್ IPL ಫಾರ್ಮ್ ಕಳೆದು ಕೊಂಡಿದ್ದಾರೆ. ಒಂದೊಂದು ರನ್‌ಗಳಿಸಲು ಒದ್ದಾಡ್ತಿದ್ದಾರೆ. ಏಕದಿನ ವಿಶ್ವಕಪ್ ವೇಳೆ ರೋಹಿತ್ ಶರ್ಮಾ ಅವರಲ್ಲಿದ್ದ ಕಾನ್ಫಿಡೆನ್ಸ್ ಈಗ ಕಾಣ್ತಿಲ್ಲ. ಸುಲಭವಾಗಿ ಹಿಟ್‌ಮ್ಯಾನ್ ವಿಕೆಟ್ ಒಪ್ಪಿಸ್ತಿದ್ದಾರೆ. ಆ ಮೂಲಕ ಮುಂಬೈ ಪಡೆಯ ಸೋಲಿಗೆ ಕಾರಣವಾಗ್ತಿದ್ದಾರೆ. ಆರಂಭಿಕರಾಗಿ ಆರ್ಭಟಿಸುವಲ್ಲಿ ಫೇಲ್ ಆಗಿದ್ದಾರೆ. ಅದರಲ್ಲೂ ಕಳೆದ 6 ಪಂದ್ಯಗಳಿಂದ ಹಿಟ್‌ಮ್ಯಾನ್ ಗಳಿಸಿರೋದು ಜಸ್ಟ್ 52 ರನ್.
ಟಿ20 ವಿಶ್ವಕಪ್ನಲ್ಲೂ ಫೇಲಾದ್ರೆ ಸಂಕಷ್ಟ ತಪ್ಪಿದ್ದಲ್ಲ..!
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಪರ್ಫಾಮೆನ್ಸ್ ಬಗ್ಗೆ ಹೇಳೋದಾದ್ರೆ, 36 ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ಮುಂಬೈಕರ್, ಕೇವಲ 127.88ರ ಸ್ಟ್ರೈಕ್ರೇಟ್ನಲ್ಲಿ 963 ರನ್‌ಗಳಿಸಿದ್ದಾರೆ. ಇದ್ರಿಂದ ರೋಹಿತ್ ಆದಷ್ಟು ಬೇಗ ಹಳೆಯ ಖದರ್‌ಗೆ ಮರಳಬೇಕಿದೆ. ಇಲ್ಲವಾದಲ್ಲಿ ತಂಡಕ್ಕೆ ಸ್ಟಾರ್ಟಿಂಗ್ ಟ್ರಬಲ್ ತಪ್ಪಿದ್ದಲ್ಲ.
RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್ ಫಿಕ್ಸ್..!
ಇನ್ನು ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಖ್ಯಾತಿಗೆ ತಕ್ಕಂತೆ ಆಡ್ತಿಲ್ಲ. ಹಾರ್ದಿಕ್ ಪಾಂಡ್ಯ IPLನಲ್ಲಿ ಮಕಾಡೆ ಮಲಗಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಇಂಜುರಿಯಾಗಿ ಕ್ರಿಕೆಟ್ನಿಂದ ದೂರ ಹೊರಗುಳಿದಿದ್ದ ಹಾರ್ದಿಕ್, ಐಪಿಎಲ್ ಮೂಲಕ ರೀ ಎಂಟ್ರಿ ನೀಡಿದ್ರು. ಆದ್ರೆ, ಕಮ್‌ಬ್ಯಾಕ್‌ನಲ್ಲಿ ಅಟ್ಟರ್ ಫ್ಲಾಪ್ ಶೋ ನೀಡ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಖದರ್ ಕಳೆದುಕೊಂಡಿದ್ದಾರೆ. ಡೆತ್ ಓವರ್ಗಳಲ್ಲಿ ಫಿನಿಶರ್ ರೋಲ್ ನಿಭಾಯಿಸ್ತಿದ್ದವರು, ಬೌಂಡರಿ ಬಾರಿಸಲು ಪರದಾಡ್ತಿದ್ದಾರೆ. ಆದ್ರೆ, ಬೌಲಿಂಗ್ನಲ್ಲಿ ಮಾತ್ರ ತಕ್ಕಮಟ್ಟಿಗೆ ಮಿಂಚುತ್ತಿದ್ದಾರೆ.
ಅದೇನೆ ಇರಲಿ, ಮುಂಬೈ ಇಂಡಿಯನ್ಸದ್ದು ಇನ್ನೊಂದು ಪಂದ್ಯ ಬಾಕಿಯಿದ್ದು, ಆ ಪಂದ್ಯದಲ್ಲಿ ಇವರಿಬ್ಬರು ಅಬ್ಬರಿಸಲಿ. ಆ ಮೂಲಕ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲಿ ಅನ್ನೋದೇ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್