Asianet Suvarna News Asianet Suvarna News

ಕ್ರಿಸ್ ಗೇಲ್ ರೆಕಾರ್ಡ್ ನುಚ್ಚುನೂರು, ವಿಶ್ವಕಪ್‌ನಲ್ಲಿ ಸಿಕ್ಸರ್ ಚಚ್ಚುವುದರಲ್ಲಿ ರೋಹಿತ್ ಬಲು ಜೋರು..!

ಇದೀಗ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್‌ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಿಂದಲೇ ನಾಯಕ ರೋಹಿತ್, ಕಿವೀಸ್ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಮೇಲೆ ಸವಾರಿ ಮಾಡಿದರು. ಮೊದಲ 5 ಓವರ್‌ನಲ್ಲೇ ಕಿವೀಸ್ ಬೌಲರ್‌ಗಳು ತಬ್ಬಿಬ್ಬಾಗುವಂತಹ ಪ್ರದರ್ಶನ ತೋರಿದರು.

Rohit Sharma breaks Chris Gayle unique record become batter to hit most sixes in ODI World Cup history kvn
Author
First Published Nov 15, 2023, 3:38 PM IST

ಮುಂಬೈ(ನ.15): ಟೀಂ ಇಂಡಿಯಾ ನಾಯಕ ಹಾಗೂ ಸ್ಪೋಟಕ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲೂ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದಾರೆ. ಇನ್ನು ಇದೇ ವೇಳೆ ಯೂನಿವರ್ಸಲ್ ಬಾಸ್ ಖ್ಯಾತಿಯ ಕೆರಿಬಿಯನ್ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಸಿಕ್ಸರ್ ದಾಖಲೆ ಇದೀಗ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪಾಲಾಗಿದೆ.

ಹೌದು, ಇದೀಗ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್‌ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಿಂದಲೇ ನಾಯಕ ರೋಹಿತ್, ಕಿವೀಸ್ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಮೇಲೆ ಸವಾರಿ ಮಾಡಿದರು. ಮೊದಲ 5 ಓವರ್‌ನಲ್ಲೇ ಕಿವೀಸ್ ಬೌಲರ್‌ಗಳು ತಬ್ಬಿಬ್ಬಾಗುವಂತಹ ಪ್ರದರ್ಶನ ತೋರಿದರು.

ಇಲ್ಲಿಯವರೆಗೆ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಏಕದಿನ ವಿಶ್ವಕಪ್‌ನಲ್ಲಿ ಕ್ರಿಸ್ ಗೇಲ್ 49 ಸಿಕ್ಸರ್ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ 50+ ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು:

1. ರೋಹಿತ್ ಶರ್ಮಾ - 51 ಸಿಕ್ಸರ್
2. ಕ್ರಿಸ್ ಗೇಲ್ - 49 ಸಿಕ್ಸರ್
3. ಗ್ಲೆನ್ ಮ್ಯಾಕ್ಸ್‌ವೆಲ್ - 43 ಸಿಕ್ಸರ್
4. ಎಬಿ ಡಿ ವಿಲಿಯರ್ಸ್‌ - 37 ಸಿಕ್ಸರ್
5. ಡೇವಿಡ್ ವಾರ್ನರ್ - 37 ಸಿಕ್ಸರ್

ಇನ್ನು ಇದಷ್ಟೇ ಅಲ್ಲದೇ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ಕೂಡಾ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ಇಲ್ಲಿಯವರೆಗೆ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2015ರ ಏಕದಿನ ವಿಶ್ವಕಪ್‌
ನಲ್ಲಿ ಗೇಲ್‌ 26 ಸಿಕ್ಸರ್ ಸಿಡಿಸಿದ್ದರು. ಇದೀಗ ಆ ದಾಖಲೆ ರೋಹಿತ್ ಪಾಲಾಗಿದೆ

ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳಿವರು

1. ರೋಹಿತ್ ಶರ್ಮಾ(28) - 2023*
2. ಕ್ರಿಸ್ ಗೇಲ್(26) - 2015
3. ಇಯಾನ್ ಮಾರ್ಗನ್(22) -2019
4. ಗ್ಲೆನ್ ಮ್ಯಾಕ್ಸ್‌ವೆಲ್(22) - 2023*
5. ಎಬಿ ಡಿವಿಲಿಯರ್ಸ್‌(21)- 2015
6. ಕ್ವಿಂಟನ್ ಡಿ ಕಾಕ್(21)- 2023*
 

Follow Us:
Download App:
  • android
  • ios