Asianet Suvarna News Asianet Suvarna News

ಕೊಹ್ಲಿ - ರೋಹಿತ್ ಬಯೋಪಿಕ್‌ನಲ್ಲಿ ಈ ನಟರೇ ಅಭಿನಯಿಸಲಿ ಎಂದು ಫ್ಯಾನ್ಸ್ ಆಗ್ರಹ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಟೀಂ ಇಂಡಿಯಾ ಸೂಪರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಬಯೋಪಿಕ್‌ನಲ್ಲಿ ನಟಿಸಲು ಈ ಹೀರೋಗಳೇ ಬೆಸ್ಟ್ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Rohit Sharma and Virat Kohli Biopic Telugu Fans wants Jr  NTR and Ram Charan play the role kvn
Author
First Published Aug 31, 2024, 11:23 AM IST | Last Updated Aug 31, 2024, 11:23 AM IST

ಬೆಂಗಳೂರು: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ! ಭಾರತೀಯ ಕ್ರಿಕೆಟ್‌ನ ಸೂಪರ್ ಸ್ಟಾರ್ಸ್. ಇವರಿಬ್ಬರ ಬಯೋಪಿಕ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಅಭಿಮಾನಿಗಳು ಇವರಿಬ್ಬರ ಕ್ರಿಕೆಟ್ ಜರ್ನಿಯನ್ನ ತೆರೆಮ ಮೇಲೆ ನೋಡಲು ಕಾಯ್ತಿದ್ದಾರೆ. ಈ ನಡುವೆ ಇವ್ರ ಪಾತ್ರಕ್ಕೆ ಈ ನಟರೇ ಬೆಸ್ಟ್ ಅಂತಿದ್ದಾರೆ. 

ತೆರೆ ಮೇಲೆ ಹಿಟ್‌ಮ್ಯಾನ್- ರನ್‌ ಮಷಿನ್ ಆಗೋದ್ಯಾರು..?  

ಭಾರತೀಯ ಕ್ರಿಕೆಟ್‌ಗೂ ಬಾಲಿವುಡ್‌ಗೂ ಅವಿನಾಭಾವ ಸಂಬಂಧ. ಭಾರತದ ಹಲವು ಕ್ರಿಕೆಟರ್ಸ್ ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟ್ಯಾಗೋರ್ರಿಂದ ಹಿಡಿದು ವಿರಾಟ್ ಕೊಹ್ಲಿ- ಅನುಷ್ಕಾ, ಕೆಎಲ್ ರಾಹುಲ್- ಆಥಿಯಾ ಶೆಟ್ಟಿ ಜೋಡಿಗಳೇ  ಅದಕ್ಕೆ ಸಾಕ್ಷಿ.  

ಇನ್ನು ಹಲವು ಕ್ರಿಕೆಟ್ ಸ್ಟಾರ್‌ಗಳ ಲೈಫ್, ಬಾಲಿವುಡ್‌ನಲ್ಲಿ ಸಿನಿಮಾ ರೂಪದಲ್ಲಿ ಬಂದಿವೆ. ಆ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕೋಟಿ-ಕೋಟಿ ಕೊಳ್ಳೆ ಹೊಡೆದಿವೆ. MS ಧೋನಿ ಬಯೋಪಿಕ್, ಮಹಿ ದಿ ಅನ್ಟೋಲ್ಡ್ ಸ್ಟೋರಿ ಅದಕ್ಕೆ ಬೆಸ್ಟ್ ಎಕ್ಸಾಂಪಲ್.! 2016ರಲ್ಲಿ ರಿಲೀಸ್ ಆದ ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ಧೋನಿಯಾಗಿ ಕಾಣಿಸಿಕೊಂಡಿದ್ರು. ಇದು 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಒಂದೇ ದಿನ ಭಾರತಕ್ಕೆ 4 ಪದಕ! ಕಾಲಿನ ಸ್ವಾಧೀನ ಕಳೆದುಕೊಂಡ್ರೂ ಕುಗ್ಗದ ಅವನಿ

ಯುವರಾಜ್ ಸಿಂಗ್..! 2011ರ ಏಕದಿನ ವಿಶ್ವಕಪ್ ಹೀರೋ. ಭಾರತೀಯ ಕ್ರಿಕೆಟ್ ಕಂಡ ಒನ್ ಆಫ್ ದಿ ಬೆಸ್ಟ್ ಆಲ್ರೌಂಡರ್. ಟಿ20 ಕ್ರಿಕೆಟ್ನಲ್ಲಿ  ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಸಿಕ್ಸರ್ ಕಿಂಗ್.  ಇಂತಹ ಗ್ರೇಟ್ ಕ್ರಿಕೆಟರ್ ಜೀವನ ತೆರೆಯ ಮೇಲೆ ಬರಲಿದೆ. ಈಗಾಗ್ಲೇ ಯುವಿ ಬಯೋಪಿಕ್ ಅನೌನ್ಸ್ ಆಗಿದೆ. ಮತ್ತೊಂದೆಡೆ ಈ ಮೂವರು ನಟರು ಯುವಿ ಪಾತ್ರಕ್ಕೆ ಪರ್ಫೆಕ್ಟ್ ಮ್ಯಾಚ್ ಅನ್ನೋ ಮಾತುಗಳು ಕೇಳಿಬರ್ತಿವೆ. ರಣ್ಬೀರ್ ಕಪೂರ್, ರಣ್ವೀರ್ ಸಿಂಗ್ ಹೆಸರುಗಳ ಮುಂಚೂಣಿಯಲ್ಲಿವೆ.

ಇನ್ನು ಭಾರತೀಯ ಕ್ರಿಕೆಟ್‌ನ ಸೂಪರ್ ಸ್ಟಾರ್‌ಗಳಾದ ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಬಯೋಪಿಕ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಅಭಿಮಾನಿಗಳು ಇವರಿಬ್ಬರ ಕ್ರಿಕೆಟ್ ಜರ್ನಿಯನ್ನ ತೆರೆಯ ಮೇಲೆ ನೋಡಲು ಕಾಯ್ತಿದ್ದಾರೆ. ಈ ನಡುವೆ ಇವ್ರ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಅನ್ನೋ ಕುತೂಹಲ  ಮೂಡಿದೆ.  ಆದ್ರೆ, ಫ್ಯಾನ್ಸ್ ಮಾತ್ರ ಈ ನಟರೇ, ಕೊಹ್ಲಿ - ರೋಹಿತ್ ಪಾತ್ರಕ್ಕೆ ಬೆಸ್ಟ್ ಅಂತಿದ್ದಾರೆ. 

ನೂರಾರು ಆಟಗಾರರನ್ನು ಬದಲಿಸಿದರೂ ಆರ್‌ಸಿಬಿಗೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಏಕೆ? ಕೊನೆಗೂ ಬಯಲಾಯ್ತು ಸತ್ಯ..!

ಕೊಹ್ಲಿಯಾಗಿ ಮಿಂಚ್ತಾರಾ ಮೆಗಾ ಪವರ್‌ ಸ್ಟಾರ್ ರಾಮ್‌ಚರಣ್..? 

ಯೆಸ್, ರಾಮ್‌ಚರಣ್ ತೆಲುಗು ಸಿನಿ ದುನಿಯಾದ ಮೆಗಾ ಪವರ್ ಸ್ಟಾರ್.  ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರೋ ರಾಮ್‌ಚರಣ್, ಕೊಹ್ಲಿ ರೋಲ್‌ನಲ್ಲಿ ಮಿಂಚಬೇಕು ಅನ್ನೋದು ಅಭಿಮಾನಿಗಳ ಆಸೆ. ಈಗಾಗ್ಲೇ ಯೂಟ್ಯೂಬ್ನಲ್ಲಿ ಇದಕ್ಕೆ ಸಂಬಂಧಿಸಿದ ಎಡಿಟೆಡ್ ವೀಡಿಯೋಗಳು ಹರಿದಾಡ್ತಿವೆ. 

ರೋಹಿತ್ ಶರ್ಮಾ ಬಯೋಪಿಕ್‌ಗೆ ಜೂನಿಯರ್ NTR ಬೆಸ್ಟ್..! 

ಇನ್ನು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬಯೋಪಿಕ್‌ಗೆ ತೆಲುಗಿನ ಯಂಗ್‌ಟೈಗರ್ ಜೂನಿಯರ್ NTR ಫರ್ಪೆಕ್ಟ್. NTR ಫೇಸ್, ಅವ್ರ ಬಾಡಿ ಎಲ್ಲಾ ರೋಹಿತ್‌ಗೆ ಸಖತ್ತಾಗಿ ಮ್ಯಾಚ್ ಆಗುತ್ತೆ. ಇದ್ರಿಂದ NTR ರೋಹಿತ್ ಪಾತ್ರಕ್ಕೆ ಬೆಸ್ಟ್ ಆಫ್ಷನ್ ಅಗಿದ್ದಾರೆ.

ಒಟ್ಟಿನಲ್ಲಿ ಕೊಹ್ಲಿ- ರೋಹಿತ್ ಬಯೋಪಿಕ್ ಬರೋಕೆ ಇನ್ನು ಸಿಕ್ಕಾಪಟ್ಟೆ ಟೈಮಿದೆ. ಆಗ ಇವ್ರ ಪಾತ್ರದಲ್ಲಿ ಇವ್ರೇ ನಟಿಸ್ತಾರಾ..? ಅಥವಾ ಬೇರಾದ್ರೂ ಮಿಂಚ್ತಾರಾ..? ಅನ್ನೋದನ್ನ ಕಾದು ನೋಡಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios