ಮುಂಬೈ(ಡಿ.13):  ವೆಸ್ಟ್ ಇಂಡೀಸ್ ವಿರುದ್ಧದ ಟಿ20  ಸರಣಿ ಆರಂಭಿಕ 2 ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ರೋಹಿತ್ ಶರ್ಮಾಗೆ ಅಂತಿಮ ಪಂದ್ಯ ಸ್ಮರಣೀಯವಾಗಿತ್ತು. 3ನೇ ಪಂದ್ಯದಲ್ಲಿ ರೋಹಿತ್ ಅರ್ಧಶತಕ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಪಂದ್ಯದ ನಡುವೆ ರೋಹಿತ್ ಶರ್ಮಾ, ಮಗಳ ಗಮನಸೆಳೆಯಲು ನಡೆಸಿದ ಪ್ರಯತ್ನದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಅಬ್ಬರಕ್ಕೆ ಹಲವು ದಾಖಲೆ ಪುಡಿ ಪುಡಿ!

ಮುಂಬೈನ ಟಿ20 ಪಂದ್ಯಕ್ಕೆ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ ಹಾಗೂ ಮಗಳು ಸಮೈರಾ ಆಗಮಿಸಿದ್ದರು. ಗ್ಯಾಲರಿಯಲ್ಲಿ ಕುಳಿತಿದ್ದ  ಪತ್ನಿ ಜೊತೆಗಿದ್ದ ಮಗಳ ಗಮನ ಸೆಳೆಯಲು ರೋಹಿತ್ ಶರ್ಮಾ ಹಲವು ಕಸರತ್ತು ನಡೆಸಿದ್ದಾರೆ. ಪೆವಿಲಿಯನ್‌ನಿಂದ ರೋಹಿತ್ ಶರ್ಮಾ, ಕೈ ಸನ್ನೆ ಮೂಲಕ, ಮಗಳ ಜೊತೆ ಮಾತುಕತೆ ನಡೆಸಿದ್ದಾರೆ. ರೋಹಿತ್ ಆಂಗಿಕ ಭಾಷೆಯ ಸಂವಹನ ಇದೀಗ ವೈರಲ್ ಆಗಿದೆ.

 

 
 
 
 
 
 
 
 
 
 
 
 
 

Guess who is @rohitsharma45 talking to in the stands? 🤔 . Hint: 👶🏻 . #OneFamily #CricketMeriJaan #INDvWI

A post shared by Mumbai Indians (@mumbaiindians) on Dec 11, 2019 at 6:05am PST

ಇದನ್ನೂ ಓದಿ: ರೋಹಿತ್ ವಾರ್ಷಿಕ ಆದಾಯ ರಿಪೋರ್ಟ್ ಬಹಿರಂಗ!

ಮುಂಬೈ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಆರಂಭ ನೀಡಿದರು. 34 ಎಸೆತದಲ್ಲಿ 71 ರನ್ ಚಚ್ಚಿದರು. ರೋಹಿತ್ 6 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 135 ರನ್ ಜೊತೆಯಾಟ ನೀಡಿದ್ದರು. ರಾಹುಲ್ 91 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತ 67 ರನ್ ಗೆಲುವು ದಾಖಲಿಸಿ, 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.