ರಾಯ್‌ಪುರ್(ಮಾ.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತೆ ಅಭಿಮಾನಿಗಳಿಗೆ ಫುಲ್ ಮನರಂಜನೆ ನೀಡಿದ್ದಾರೆ. ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್ ಸಿಡಿಸಿ ಮತ್ತೆ ತಮ್ಮ ಹಳೇ ಬ್ಯಾಟಿಂಗ್ ಪ್ರದರ್ಶನ ನೆನಪಿಸಿದ್ದಾರೆ. ರೋಡ್ ಸೆಫ್ಟಿ ಸರಣಿಯಲ್ಲಿ ಇಂಡಿಯಾ ಲೆಜೆಂಡ್ ಹಾಗೂ ಸೌತ್ ಆಫ್ರಿಕಾ ಲೆಜೆಂಡ್ಸ್ ನಡುವಿನ ಪಂದ್ಯದಲ್ಲಿ ಯುವಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್‌ - ಯುವರಾಜ್ ಸಿಂಗ್‌: ಭಾರತದ ಶ್ರೀಮಂತ ಕ್ರಿಕೆಟಿಗರು!.

ಸೌತ್ ಆಫ್ರಿಕಾ ಲೆಜೆಂಡ್ಸ್ ತಂಡದ ಝೆಂಡರ್ ಡೆ ಬ್ರುಯನ್ ಓವರ್‌ನಲ್ಲಿ ಸತತ 4 ಸಿಕ್ಸರ್ ಸಿಡಿಸಿದ ಯುವಿ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯ ನೆನಪಿಸಿದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಟುವರ್ಟ್ ಬ್ರಾಡ್ ಓವರ್‌ನ 6 ಎಸೆತ ಸಿಕ್ಸರ್ ಗಟ್ಟಿದ ಯುವರಾಜ್ ಸಿಂಗ್ ಹೊಸ ದಾಖಲೆ ಬರೆದಿದ್ದರು. ಇದೀಗ ಓವರ್‌ನ 4 ಎಸೆತದ ಸಿಕ್ಸರ್ ಸಿಡಿಸಿದ್ದಾರೆ.

 

ಯುವರಾಜ್ ಸಿಂಗ್ ಕೇವಲ 22 ಎಸೆತದಲ್ಲಿ ಅಜೇಯ 52 ರನ್ ಸಿಡಿಸಿದ್ದಾರೆ. ಈ ಮೂಲಕ ಇಂಡಿಯಾ ಲೆಜೆಂಡ್ಸ್ 204 ರನ್ ಸಿಡಿಸಿತು. ಯುವಿ ಅಬ್ಬರಿಂದ ಇಂಡಿಯಾ ಲೆಜೆಂಡ್ಸ್ , ಸೌತ್ ಆಫ್ರಿಕಾ ವಿರುದ್ಧ 56 ರನ್ ಗೆಲುವು ದಾಖಲಿಸಿತು. ಯುವಿ ತನ್ನ ಹಳೇ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಮತ್ತೆ ಅಭಿಮಾನಿಗಳ ಮನತಣಿಸಿದ್ದಾರೆ.