ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ, 14 ವರ್ಷದ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕ (144) ಮತ್ತು ನಾಯಕ ಜಿತೇಶ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ಎ ತಂಡವು ಯುಎಇ ವಿರುದ್ಧ 148 ರನ್‌ಗಳ ಭರ್ಜರಿ ಜಯ ಸಾಧಿಸಿತು.
ದೋಹಾ: ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಎ ತಂಡಕ್ಕೆ ರೋಚಕ ಜಯ ಲಭಿಸಿದೆ. ಯುಎಇ ತಂಡವನ್ನು ಭಾರತೀಯ ತಂಡ 148 ರನ್‌ಗಳಿಂದ ಸೋಲಿಸಿತು. ಭಾರತ ನೀಡಿದ 298 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಯುಎಇ ತಂಡ 149 ರನ್‌ಗಳಿಗೆ ಆಲೌಟ್ ಆಯಿತು. 3 ವಿಕೆಟ್ ಪಡೆದ ಗುರಪ್ರೀತ್ ಸಿಂಗ್ ಯುಎಇ ತಂಡದ ಪತನಕ್ಕೆ ಕಾರಣರಾದರು. ಇದಕ್ಕೂ ಮುನ್ನ, ಸ್ಫೋಟಕ ಶತಕ ಸಿಡಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಮತ್ತು ವೇಗದ ಅರ್ಧಶತಕ ಗಳಿಸಿದ ನಾಯಕ ಜಿತೇಶ್ ಶರ್ಮಾ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತ್ತು. 42 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 11 ಬೌಂಡರಿಗಳೊಂದಿಗೆ 144 ರನ್ ಗಳಿಸಿದ ವೈಭವ್ ಸೂರ್ಯವಂಶಿ ಭಾರತದ ಟಾಪ್ ಸ್ಕೋರರ್ ಎನಿಸಿಕೊಂಡರು.
ಭಾರತದ ಬ್ಯಾಟಿಂಗ್ ಅಬ್ಬರ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು. 42 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 11 ಬೌಂಡರಿಗಳೊಂದಿಗೆ 144 ರನ್ ಗಳಿಸಿದ ವೈಭವ್ ಸೂರ್ಯವಂಶಿ, ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, 32 ಎಸೆತಗಳಲ್ಲಿ ಶತಕ ಪೂರೈಸಿದರು. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕದಲ್ಲಿ 15 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳು ಸೇರಿದ್ದವು. ಹದಿಮೂರನೇ ಓವರ್‌ನ ಮೂರನೇ ಎಸೆತದಲ್ಲಿ ವೈಭವ್ ಔಟಾದಾಗ ಭಾರತದ ಸ್ಕೋರ್ 195 ಆಗಿತ್ತು. 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಾಯಕ ಜಿತೇಶ್ ಶರ್ಮಾ 32 ಎಸೆತಗಳಲ್ಲಿ 83 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತಕ್ಕೆ ವಿಸ್ಪೋಟಕ ಆರಂಭ ಒದಗಿಸಿಕೊಟ್ಟ ವೈಭವ್
ಟಾಸ್ ಗೆದ್ದು ಕ್ರೀಸ್‌ಗೆ ಇಳಿದ ಭಾರತ ಮೊದಲ ಓವರ್‌ನಲ್ಲೇ 11 ರನ್ ಗಳಿಸಿ ತನ್ನ ಆಕ್ರಮಣಕಾರಿ ಆಟವನ್ನು ಸ್ಪಷ್ಟಪಡಿಸಿತು. ಎರಡನೇ ಓವರ್‌ನಲ್ಲಿ ಪ್ರಿಯಾಂಶ್ ಆರ್ಯ ರನೌಟ್ ಆದರೂ, ಮೊಹಮ್ಮದ್ ಖೋಹಿದ್ ಖಾನ್‌ಗೆ ಸಿಕ್ಸರ್ ಬಾರಿಸುವ ಮೂಲಕ ವೈಭವ್ ಅಬ್ಬರಕ್ಕೆ ಚಾಲನೆ ನೀಡಿದರು. ಅಯಾನ್ ಖಾನ್ ಎಸೆದ ಮೂರನೇ ಓವರ್‌ನಲ್ಲಿ ವೈಭವ್ ಮತ್ತು ನಮನ್ ಧಿರ್ ಸೇರಿ 21 ರನ್ ಕಲೆಹಾಕಿದರು. ಮೊಹಮ್ಮದ್ ರೋಹಿದ್ ಖಾನ್ ಎಸೆದ ನಾಲ್ಕನೇ ಓವರ್‌ನಲ್ಲಿ ಕೇವಲ ಎಂಟು ರನ್ ಗಳಿಸಿದ ಭಾರತ, ಜವಾದುಲ್ಲಾ ಎಸೆದ ಐದನೇ ಓವರ್‌ನಲ್ಲಿ 20 ರನ್ ಗಳಿಸಿತು. ಪವರ್‌ಪ್ಲೇಯ ಕೊನೆಯ ಓವರ್‌ನಲ್ಲಿ 17 ಎಸೆತಗಳಲ್ಲಿ ವೈಭವ್ ಸೂರ್ಯವಂಶಿ ಅರ್ಧಶತಕ ಪೂರೈಸಿದರು.
ಜೀವದಾನ ಬಳಸಿಕೊಂಡ ವೈಭವ್ ಸೂರ್ಯವಂಶಿ:
ಅರ್ಧಶತಕದ ನಂತರ ವೈಭವ್ ನೀಡಿದ ಕ್ಯಾಚ್ ಅನ್ನು ಕೈಬಿಟ್ಟಿದ್ದು ಯುಎಇಗೆ ದುಬಾರಿಯಾಯಿತು. ಪವರ್‌ಪ್ಲೇ ನಂತರ ಮೊಹಮ್ಮದ್ ಫರ್ಜುದ್ದೀನ್‌ಗೆ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಬಾರಿಸಿದ ವೈಭವ್, ಏಳು ಓವರ್‌ಗಳಲ್ಲಿ ಭಾರತವನ್ನು 100ರ ಗಡಿ ದಾಟಿಸಿದರು. ಭಾರತದ ಇನ್ನಿಂಗ್ಸ್‌ನ ಹತ್ತನೇ ಓವರ್‌ನಲ್ಲಿ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದ ವೈಭವ್, ನಂತರವೂ ತಮ್ಮ ಅಬ್ಬರ ಮುಂದುವರೆಸಿದರು. ವೈಭವ್ ಶತಕ ಪೂರೈಸಿದ ನಂತರ 23 ಎಸೆತಗಳಲ್ಲಿ 34 ರನ್ ಗಳಿಸಿದ್ದ ನಮನ್ ಧಿರ್ ಅವರನ್ನು ಔಟ್ ಮಾಡುವ ಮೂಲಕ ಯುಎಇ ಎರಡನೇ ವಿಕೆಟ್ ಜೊತೆಯಾಟವನ್ನು ಮುರಿಯಿತು. ಎರಡನೇ ವಿಕೆಟ್‌ಗೆ ಇವರಿಬ್ಬರು 57 ಎಸೆತಗಳಲ್ಲಿ 163 ರನ್ ಕಲೆಹಾಕಿದ್ದರು. ಶತಕದ ನಂತರ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ ವೈಭವ್, 42 ಎಸೆತಗಳಲ್ಲಿ 144 ರನ್ ಗಳಿಸಿ ಹದಿಮೂರನೇ ಓವರ್‌ನಲ್ಲಿ ಔಟಾದರು. 15 ಸಿಕ್ಸರ್ ಮತ್ತು 11 ಬೌಂಡರಿ ಬಾರಿಸಿದ ವೈಭವ್ 342.86 ಸ್ಟ್ರೈಕ್ ರೇಟ್‌ನಲ್ಲಿ 144 ರನ್ ಗಳಿಸಿದರು.
ಇನ್ನು ವೈಭವ್ ಔಟಾದ ನಂತರ ಸ್ಕೋರ್ ಹೆಚ್ಚಿಸಿದ ನಾಯಕ ಜಿತೇಶ್ ಶರ್ಮಾ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 32 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿದ ಜಿತೇಶ್, ಎಂಟು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿದರು. 9 ಎಸೆತಗಳಲ್ಲಿ 14 ರನ್ ಗಳಿಸಿದ ನೆಹಾಲ್ ವಧೇರಾ ನಿರಾಸೆ ಮೂಡಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
