Asianet Suvarna News Asianet Suvarna News

ಟಿ20 ವಿಶ್ವಕಪ್‌ಗೆ ಫಿಕ್ಸ್ ಆಯ್ತಾ ರಿಷಭ್ ಪಂತ್ ಸ್ಥಾನ..?

ಇಂದು IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗ್ತಿವೆ. ಈ ಪಂದ್ಯ ಯಾರಿಗೆ ಮಹತ್ವದ್ದೋ ಗೊತ್ತಿಲ್ಲ ಕಂಡ್ರಿ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್‌ಗೆ ಮಾತ್ರ ಮಹತ್ವದ ಪಂದ್ಯ. ಇದೊಂದು ಪಂದ್ಯ ಮಾತ್ರವಲ್ಲ. 17ನೇ ಸೀಸನ್ IPL ಟೂರ್ನಿಯೇ ಪಂತ್‌ಗೆ ಮಹತ್ವದ್ದು. ಯಾಕಂದ್ರೆ ಅವರು ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.

Rishabh Pant success vs CSK adds to India wicket keeping options for T20 World Cup 2024 kvn
Author
First Published Apr 3, 2024, 12:41 PM IST

ಬೆಂಗಳೂರು(ಏ.03) ರಿಷಭ್ ಪಂತ್ ಫಾರ್ಮ್‌ಗೆ  ಮರಳಿದ್ದಾರೆ. ಫಿಟ್ನೆಸ್ ಪ್ರೂವ್ ಮಾಡಿದ್ದಾರೆ. ಈಗ ಅವರ ಟಾರ್ಗೆಟ್. ಟಿ20 ವಿಶ್ವಕಪ್. ಮೆಗಾ ಟೂರ್ನಿಯಲ್ಲಿ ಆಡ್ಬೇಕು ಅಂದ್ರೆ ಅವರು ಐಪಿಎಲ್‌ನಲ್ಲಿ ಮತ್ತಷ್ಟು ರನ್ ಹೊಡೆಯಬೇಕು. ಇಂದು ಸಹ ಅವರು ರೈಡರ್ಸ್, ರೈಡ್ ಮಾಡಲು ಕಾಯ್ತಿದ್ದಾರೆ.

ಇಂದು ರೈಡರ್ಸ್ ರೈಡ್ ಮಾಡ್ತಾರಾ ರಿಷಭ್..?

ಇಂದು IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗ್ತಿವೆ. ಈ ಪಂದ್ಯ ಯಾರಿಗೆ ಮಹತ್ವದ್ದೋ ಗೊತ್ತಿಲ್ಲ ಕಂಡ್ರಿ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್‌ಗೆ ಮಾತ್ರ ಮಹತ್ವದ ಪಂದ್ಯ. ಇದೊಂದು ಪಂದ್ಯ ಮಾತ್ರವಲ್ಲ. 17ನೇ ಸೀಸನ್ IPL ಟೂರ್ನಿಯೇ ಪಂತ್‌ಗೆ ಮಹತ್ವದ್ದು. ಯಾಕಂದ್ರೆ ಅವರು ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಪ್ರತಿ ಪಂದ್ಯದಲ್ಲೂ ಅವರು ತಮ್ಮ ಸಾಮರ್ಥ್ಯ ಪ್ರೂವ್ ಮಾಡ್ತಲೇ ಇರ್ಬೇಕು.

ಈ ಬಾರಿಯೂ ರಿಪೀಟ್ ಆಗುತ್ತಾ ಇತಿಹಾಸ..! ಕಮ್‌ಬ್ಯಾಕ್ ಮಾಡೋದ್ರಲ್ಲಿ ಮುಂಬೈ ಎತ್ತಿದ ಕೈ..!

2022ರ ಡಿಸೆಂಬರ್ನಲ್ಲಿ ಕಾರು ಅಪಘಾತವಾದ್ಮೇಲೆ ರಿಷಬ್ ಪಂತ್, ಮೈದಾನಕ್ಕಿಳಿದಿರುವುದು IPLನಲ್ಲೇ. ಕಳೆದ ವರ್ಷ ಪೂರ್ತಿ ಮೈದಾನದಿಂದ ಹೊರಗುಳಿದಿದ್ದ ಅವರು, ಈಗ ಫಿಟ್ನೆಸ್ ಸಾಧಿಸಿ, ಐಪಿಎಲ್ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡೋ ಮೂಲಕ ಫಿಟ್ನೆಸ್ ಅನ್ನೂ ಪ್ರೂವ್ ಮಾಡಿದ್ದಾರೆ. ಸಣ್ಣಗಾಗಿದ್ದಾರೆ ಕೂಡ. ಈಗ ಅವರು ಫಾರ್ಮ್ ಪ್ರೂವ್ ಮಾಡೋ ಹಾದಿಯಲ್ಲಿದ್ದಾರೆ.

ಸಿಎಸ್‌ಕೆ ವಿರುದ್ಧ ಆರ್ಭಟ, ಆಯ್ಕೆಗಾರರ ಗಮನ ಸೆಳೆದ ಪಂತ್..!

ಪಂಜಾಬ್ ಕಿಂಗ್ಸ್ ವಿರುದ್ಧ 18 ಮತ್ತು ರಾಜಸ್ತಾನ ರಾಯಲ್ಸ್ ವಿರುದ್ಧ 28 ರನ್ ಗಳಿಸಿ ಔಟಾಗಿದ್ದ ಪಂತ್, ಭಾರಿ ನಿರಾಸೆ ಅನುಭವಿಸಿದ್ರು. ಸಿಟ್ಟಿನಿಂದ ಗೋಡೆಗೆ ಬ್ಯಾಟ್ನಿಂದ ಹೊಡೆದಿದ್ದರು ಕೂಡ. ಆದ್ರೆ ಸಿಎಸ್ಕೆ ವಿರುದ್ಧ ರಿಷಭ್ ಆರ್ಭಟಿಸಿದ್ರು. 32 ಬಾಲ್ನಲ್ಲಿ 4 ಬೌಂಡ್ರಿ, 3 ಸಿಕ್ಸರ್ ಸಹಿತ 51 ರನ್ ಬಾರಿಸಿದ್ರು. ಪಂತೂ ಫಾರ್ಮ್‌ಗೆ ಬಂದರು. ಡೆಲ್ಲಿಯೂ ಗೆಲುವಿನ ಖಾತೆ ತೆರೆಯಿತು. ಈ ಸ್ಫೋಟಕ ಬ್ಯಾಟಿಂಗ್ ಮೂಲಕ ರಿಷಭ್, ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಟಿ20 ವಿಶ್ವಕಪ್‌ಗೆ ಪಂತ್ ಸ್ಥಾನ ಬಹುತೇಕ ಫಿಕ್ಸ್ ಅದಂತಾಗಿದೆ.

ಎರಡು ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಕೊನೆಯ ಕ್ಷಣದಲ್ಲಿ ಬದಲು..!

ರಿಷಭ್ ಪಂತ್ ಬೆನ್ನಿಗಿದೆ ಇತಿಹಾಸ

ಟಿ20 ವರ್ಲ್ಡ್‌ಕಪ್‌ಗೆ ಕೀಪರ್ ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನಗಳು ಆಗ್ಲೇ ಭರ್ತಿಯಾಗಿವೆ. ಕೀಪರ್ ಸ್ಥಾನಕ್ಕೆ ಹಲವು ಆಟಗಾರರು ರೇಸ್ನಲ್ಲಿದ್ದರು. ಆದ್ರೆ ಈಗ ಆ ರೇಸ್ನಲ್ಲಿ ಪಂತ್ ಗೆದ್ದಿದ್ದಾರೆ. ಎಡಗೈ ಬ್ಯಾಟರ್. ಸ್ಫೋಟಕ ಬ್ಯಾಟಿಂಗ್. ಅನುಭವಿ ಪ್ಲೇಯರ್. ಈ ಎಲ್ಲವೂ ಪಂತ್ ಬೆನ್ನಿಗಿದೆ. ಹಾಗಾಗಿ ಪಂತ್ ಸ್ಥಾನ ಬಹುತೇಕ ಖಚಿತವಾಗಿದೆ. ಆದ್ರೆ ಉಳಿದ ಐಪಿಎಲ್ ಪಂದ್ಯಗಳಲ್ಲಿ ಅವರು ವಿಕೆಟ್ ಹಿಂದೆ ಮುಂದೆ ಉತ್ತಮ ಪ್ರದರ್ಶನ ನೀಡಬೇಕು. ಆಗ ಮಾತ್ರ ವರ್ಲ್ಡ್‌ಕಪ್‌ನಲ್ಲಿ ಪ್ಲೇಸ್ ಕನ್ಫರ್ಮ್ ಆಗೋದು. ಹಾಗಾಗಿ ಈಗ ರಿಷಬ್ಗೆ ಪ್ರತಿ ಪಂದ್ಯವೂ ಡು ಆರ್ ಡೈ. ರನ್ ಗಳಿಸಲೇ ಬೇಕು.

ಕೆಕೆಆರ್ ಹ್ಯಾಟ್ರಿಕ್ ಜಯಕ್ಕೆ ಬ್ರೇಕ್ ಹಾಕುತ್ತಾ ಡೆಲ್ಲಿ..?

ಪಂಜಾಬ್ ಮತ್ತು ರಾಜಸ್ಥಾನ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್, ಸಿಎಸ್‌ಕೆ ವಿರುದ್ಧ ಗೆದ್ದು, ಸೋಲಿನ ದವಡೆಯಿಂದ ಹೊರಬಂದಿತ್ತು. ಸಿಎಸ್‌ಕೆ ತಂಡದ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿತ್ತು. ಇಂದು ಸಹ ಕೆಕೆಆರ್ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು ಎದುರು ನೋಡ್ತಿದೆ. ಕೆಕೆಆರ್ ಸಹ ಎರಡಕ್ಕೆ ಎರಡು ಪಂದ್ಯ ಗೆದ್ದಿದೆ. ಕೆಕೆಆರ್‌ಗೆ ಹ್ಯಾಟ್ರಿಕ್ ಗೆಲುವೋ.? ಅಥವಾ ಹ್ಯಾಟ್ರಿಕ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ ಬ್ರೇಕ್ ಹಾಕುತ್ತಾ ಅನ್ನೋ ಕುತೂಹಲವಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Follow Us:
Download App:
  • android
  • ios