IPLನಲ್ಲಿ ಮಾತ್ರವಲ್ಲ, ಟೀಂ ಇಂಡಿಯಾ ಪರವೂ ರಿಂಕು ಅಬ್ಬರಿಸ್ತಿದ್ದಾರೆ. 6ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದು ಸಿಕ್ಸರ್​ಗಳ ಸುರಿಮಳೆ ಸುರಿಸುತ್ತಿದ್ದಾರೆ. ತಂಡದ ನಯಾ ಫಿನಿಶರ್ ಆಗೋ ಭರವಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯ ಮೊದಲ ಪಂದ್ಯದಲ್ಲಿ ಕೊನೆಯ ಬಾಲ್‌ನಲ್ಲಿ ಸಿಕ್ಸ್​ ಸಿಡಿಸಿ, ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಆ ಮೂಲಕ ತಾವೊಬ್ಬ ಬೆಸ್ಟ್ ಫಿನಿಶರ್ ಅನ್ನೋದ್ನನ ಮತ್ತೊಮ್ಮೆ ಪ್ರೂವ್ ಮಾಡಿದ್ರು. 

ರಿಂಕು ಸಿಂಗ್ ಟೀಂ ಇಂಡಿಯಾದ ಹಾರ್ಡ್​ ಹಿಟ್ಟರ್. ಎಂತದ್ದೇ ಸಂದರ್ಭದಲ್ಲೂ ಕೂಲ್ ಆಗಿರೊ ಬ್ಯಾಟರ್. ಆದ್ರೆ, ಒತ್ತಡದ ಸಂದರ್ಭದಲ್ಲೂ ರಿಂಕೂ... ಕೂಲ್ ಆಗಿ ಬ್ಯಾಟ್ ಬೀಸೋದನ್ನ ಕಲಿತದ್ದು ಯಾರಿಂದ..? ರಿಂಕೂಗೆ ಪ್ರೆಶರ್​ ಹ್ಯಾಂಡಲ್ ಮಾಡೋದನ್ನ ಹೇಳಿಕೊಟ್ಟಿದ್ದು ಯಾರು ಗೊತ್ತಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ....!!

ರಿಂಕು ಸಿಂಗ್​ಗೆ ಮಾಹಿ ನೀಡಿದ ಸಲಹೆ ಏನು ಗೊತ್ತಾ..? 

ರಿಂಕು ಸಿಂಗ್..! IPL ಮೂಲಕ ಬೆಳಕಿಗೆ ಬಂದ ದೈತ್ಯ ಪ್ರತಿಭೆ. ಕೋಲ್ಕತಾ ನೈಟ್ ರೈಡರ್ಸ್‌ ಪರ ಆಡ್ತಿರೋ ರಿಂಕೂ, ಕಳೆದ ವರ್ಷ ನಡೆದ IPL ಟೂರ್ನಿಯಲ್ಲಿ ತಮ್ಮ ತಾಕತ್ತನ್ನ ಪ್ರೂವ್ ಮಾಡಿದ್ರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ ಸತತ 5 ಸಿಕ್ಸರ್​ ಸಿಡಿಸಿದ್ರು. ಆ ಮೂಲಕ KKR ತಂಡಕ್ಕೆ ರೋಚಕ ಗೆಲುವು ತಂದುಕೊಟ್ರು. ಆವತ್ತೇ ತಾವೆಂತ ಗ್ರೇಟ್​ ಬ್ಯಾಟರ್ ಅನ್ನೋದನ್ನ ಸಾರಿದ್ರು. 

ಆವತ್ತು ರಿಂಕು ಸಿಂಗ್‌​ನ ಆರ್ಭಟಕ್ಕೆ ಕ್ರಿಕೆಟ್ ದುನಿಯಾನೇ ಸ್ಟನ್ ಆಗಿತ್ತು. ಕ್ರಿಕೆಟ್​ ಪಂಡಿತರ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿದ್ವು. ಅಲ್ಲಿಯವರೆಗೂ ಕೊನೆಯ ಬಾಲ್​ನಲ್ಲಿ ಸಿಕ್ಸರ್ ಬಾರಿಸಿ, ತಂಡವನ್ನ ಗೆಲ್ಲಿಸಿದವರನ್ನ ಕ್ರಿಕೆಟ್ ಫ್ಯಾನ್ಸ್ ನೋಡಿದ್ರು. ಸತತ 2 ಸಿಕ್ಸರ್ ಸಿಡಿಸಿ ಮ್ಯಾಚ್​ ಗೆಲ್ಲಿಸಿದ್ದನ್ನ ಕಂಡಿದ್ರು. ಆದ್ರೆ, ರಿಂಕು ಕೊನೆಯ 5 ಬಾಲ್​ಗಳಲ್ಲಿ 5 ಸಿಕ್ಸ್​ ಬಾರಿಸಿದ್ರು. ಅಸಾಧ್ಯವಾದುದನ್ನ ಸಾಧ್ಯವಾಗಿಸಿ, ಹೊಸ ಇತಿಹಾಸ ಬರೆದ್ರು. 

ಜೂನಿಯರ್​ ಯುವರಾಜ್ ಸಿಂಗ್ ನಮ್ಮ ಶಿವಂ ದುಬೆ.! ಧೋನಿ ಸೈನ್ಯ ಸೇರಿದ ನಂತರ ಬಯಲಾಯ್ತು ಅಸಲಿ ಟ್ಯಾಲೆಂಟ್..!

IPLನಲ್ಲಿ ಮಾತ್ರವಲ್ಲ, ಟೀಂ ಇಂಡಿಯಾ ಪರವೂ ರಿಂಕು ಅಬ್ಬರಿಸ್ತಿದ್ದಾರೆ. 6ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದು ಸಿಕ್ಸರ್​ಗಳ ಸುರಿಮಳೆ ಸುರಿಸುತ್ತಿದ್ದಾರೆ. ತಂಡದ ನಯಾ ಫಿನಿಶರ್ ಆಗೋ ಭರವಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯ ಮೊದಲ ಪಂದ್ಯದಲ್ಲಿ ಕೊನೆಯ ಬಾಲ್‌ನಲ್ಲಿ ಸಿಕ್ಸ್​ ಸಿಡಿಸಿ, ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಆ ಮೂಲಕ ತಾವೊಬ್ಬ ಬೆಸ್ಟ್ ಫಿನಿಶರ್ ಅನ್ನೋದ್ನನ ಮತ್ತೊಮ್ಮೆ ಪ್ರೂವ್ ಮಾಡಿದ್ರು. 

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ T20 ಮತ್ತು ಏಕದಿನ ಸರಣಿಯಲ್ಲೂ ರಿಂಕು ಸೈಎನಿಸಿಕೊಂಡ್ರು. ಈಗ ಅಪ್ಘಾನಿಸ್ತಾನ ವಿರುದ್ಧದ ಸರಣಿಯಲ್ಲೂ ತಮ್ಮ ಅದ್ಭುತ ಆಟ ಮುಂದುವರಿಸಿದ್ದಾರೆ. ಮೊದಲ ಪಂದ್ಯದಲ್ಲಿ 9 ಎಸೆತಗಳನ್ನ ಎದುರಿಸಿದ ರಿಂಕೂ, 2 ಭರ್ಜರಿ ಸಿಕ್ಸ್ ಸಹಿತ 16 ರನ್‌ಗಳಿಸಿದ್ರು. ಪಂದ್ಯದ ನಂತರ ಮಾತನಾಡಿದ ರಿಂಕು, ಬ್ಯಾಟಿಂಗ್ ವೇಳೆ ತಾವು ಅಷ್ಟು ಕೂಲ್ ಆಗಿರೋ ಕಾರಣ ಏನು ಅನ್ನೋದನ್ನ ರಿವೀಲ್ ಮಾಡಿದ್ರು. 

ತಮ್ಮ ಯಶಸ್ಸಿನಲ್ಲಿ ಧೋನಿಗೂ ಪಾಲು ನೀಡಿದ ರಿಂಕು..!

ಯೆಸ್, ಧೋನಿ ಎಂತ ಕೂಲ್ ಮೈಂಡೆಡ್ ಅನ್ನೋದನ್ನ ಪ್ರತೇಕವಾಗಿ ಹೇಳಬೇಕಾಗಿಲ್ಲ. ಪಂದ್ಯ ಸೋಲುವ ಹಂತದಲ್ಲಿದ್ರೂ ಧೋನಿ ಜಾಸ್ತಿ ತಲೆಕೆಡಿಸಿ ಕೊಳ್ಳದೇ ಆರಾಮಾಗಿರ್ತಾರೆ. ಅದನ್ನೇ ಈಗ ರಿಂಕೂ ಸಿಂಗ್ ಫಾಲೋ ಮಾಡ್ತಿದ್ದಾರೆ. ಇನ್​ಫ್ಯಾಕ್ಟ್​ ರಿಂಕೂಗೆ ಇದನ್ನ ಹೇಳಿಕೊಟ್ಟಿದ್ದೇ ಧೋನಿ ಅಂತೆ..! ಇದನ್ನ ನಾವೇಳ್ತಿಲ್ಲ.. ಖುದ್ದು ರಿಂಕೂನೇ ಹೇಳಿದ್ದಾರೆ. 

ಕ್ರಿಕೆಟ್​ ಲೆಜೆಂಡ್​ ಸೌರವ್​ ಗಂಗೂಲಿ ಬಯೋಪಿಕ್​ಗೆ ಕೊನೆಗೂ ನಾಯಕನ ಆಯ್ಕೆ: ಯಾರಿಗೆ ಒಲಿದಿದೆ ಈ ಪಟ್ಟ?

6ನೇ ಕ್ರಮಾಂಕದಲ್ಲಿ ಆಡೋದು ಅಭ್ಯಾಸವಾಗಿ ಹೋಗಿದೆ. ಈ ಕ್ರಮಾಂಕದಲ್ಲಿ ಆಡೋದಕ್ಕೆ ಕೂಲ್ ಮೈಂಡ್​ ಬೇಕಾಗುತ್ತೆ. ಕಳೆದ IPL ವೇಳೆ ಧೋನಿಯು ನನಗೆ ಇದನ್ನೇ ಹೇಳಿದ್ರು. ಅದನ್ನೇ ನಾನು ಫಾಲೋ ಮಾಡ್ತಿದ್ದೇನೆ ಅಂತ ರಿಂಕು ಹೇಳಿದ್ದಾರೆ. ಆ ಮೂಲಕ ತಮ್ಮ ಯಶಸ್ಸಿನಲ್ಲಿ ಧೋನಿಗೂ ಪಾಲು ನೀಡಿದ್ದಾರೆ. 

ಸದ್ಯ ರಿಂಕು ಸಿಂಗ್ ಆರನೇ ಕ್ರಮಾಂಕದಲ್ಲಿ ಮಿಂಚುತ್ತಿ ರೋದಕ್ಕೆ ಧೋನಿ ನೀಡಿದ ಸಲಹೆಗಳೇ ಕಾರಣ. ಅದೇನೆ ಇರಲಿ, ರಿಂಕೂ ಮುಂದಿನ ಪಂದ್ಯಗಳಲ್ಲೂ ಘರ್ಜಿಸಲಿ...ತಂಡದ ಗೆಲುವಿನಲ್ಲಿ ಮಿಂಚಲಿ ಅನ್ನೋದೆ ನಮ್ಮ ಆಶಯ...!

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್