Asianet Suvarna News Asianet Suvarna News

2023ರಲ್ಲಿ ಟೀಂ ಇಂಡಿಯಾ ಪರ ಭರವಸೆ ಮೂಡಿಸಿದ ಐವರು ಪ್ಲೇಯರ್ಸ್..!

ಕೆಲ ಯುವ ಆಟಗಾರರು ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲರ್‌ ಮೂಲಕ ಯುವ ಆಟಗಾರರು ಭವಿಷ್ಯದ ಸ್ಟಾರ್‌ಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. 

Rinku Singh to Jitesh Sharma 5 young Indian players shine in 2023 kvn
Author
First Published Dec 25, 2023, 5:36 PM IST

ಬೆಂಗಳೂರು(ಡಿ.25) ಈ ವರ್ಷ ಟೀಂ ಇಂಡಿಯಾ ಒನ್​ಡೇ ವರ್ಲ್ಡ್​ಕಪ್ ಮಿಸ್ ಮಾಡಿಕೊಂಡಿರಬಹುದು. ಆದ್ರೆ ಭಾರತಕ್ಕೆ ಭರವಸೆ ಮೂಡಿಸಿರುವ ಐವರು ಆಟಗಾರರು ಸಿಕ್ಕಿದ್ದಾರೆ. ಈ ಯಂಗ್ ಪ್ಲೇಯರ್ಸ್​ ಭವಿಷ್ಯದಲ್ಲಿ ಟೀಂ ಇಂಡಿಯಾದ ಆಧಾರ ಸ್ಥಭವಾಗಲಿದ್ದಾರೆ. ಆ ಫೈವ್ ಸ್ಟಾರ್ಸ್ ಇಲ್ಲಿದ್ದಾರೆ ನೋಡಿ.

ಭರವಸೆ ಮೂಡಿಸಿದ ಐವರು ಪ್ಲೇಯರ್ಸ್​

2023ರ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಟೀಂ ಇಂಡಿಯಾ ಕೆಲವು ದ್ವಿಪಕ್ಷೀಯ ಸರಣಿ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.‌ ಆದರೆ ಐಸಿಸಿ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಲು ಕಂಡು ರನ್ನರ್‌ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಕೆಲ ಯುವ ಆಟಗಾರರು ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲರ್‌ ಮೂಲಕ ಯುವ ಆಟಗಾರರು ಭವಿಷ್ಯದ ಸ್ಟಾರ್‌ಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. 

ನಾಲ್ವರು ಆಟಗಾರರು ಇಂಜುರಿ, ಟೀಂ ಇಂಡಿಯಾಗೆ ಶಾಕ್..! IPL ವೇಳೆಗೆ ಫಿಟ್ ಆಗ್ತಾರಾ..?

ಯಶಸ್ವಿ ಜೈಸ್ವಾಲ್ ಪಯಣ ಯಶಸ್ವಿ

ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ಓಪನರ್ ಯಶಸ್ವಿ ಜೈಸ್ವಾಲ್, ಸ್ಫೋಟಕ ಬ್ಯಾಟಿಂಗ್ ಮೂಲ್ಕ 14 ಪಂದ್ಯಗಳಲ್ಲಿ 625 ರನ್ ಗಳಿಸಿದ್ದರು. ತಮ್ಮ ಈ ಪ್ರದರ್ಶನದಿಂದಲೇ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಆಗಿ ಚೊಚ್ಚಲ ಟೆಸ್ಟ್ ಇನಿಂಗ್ಸ್‌ನಲ್ಲೇ‌ ಶತಕ‌ ಸಿಡಿಸಿದ್ದಲ್ಲದೆ ಎರಡು ಟೆಸ್ಟ್ ಪಂದ್ಯಗಳಿಂದ 266 ರನ್ ಗಳಿಸಿದ್ದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 8 ಪಂದ್ಯಗಳಿಂದ ಒಂದು ಶತಕ ಹಾಗೂ ಒಂದು ಅರ್ಧಶತಕ ನೆರವಿನಿಂದ 232 ರನ್ ಹೊಡೆದು, ಭವಿಷ್ಯದಲ್ಲಿ ಟೀಮ್ ಇಂಡಿಯಾ ಪರ ಮೂರು ಮಾದರಿ ಆಟಗಾರ ಎಂಬ ಭರವಸೆಯನ್ನು ನೀಡಿದ್ದಾರೆ.

ಮಧ್ಯಮ ಕ್ರಮಾಂಕಕ್ಕೆ ಫಿಕ್ಸ್ ತಿಲಕ್ ವರ್ಮಾ 

21 ವರ್ಷದ ತಿಲಕ್ ವರ್ಮಾ ತಮ್ಮ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ತಮ್ಮ ಬ್ಯಾಟಿಂಗ್‌ನಲ್ಲಿ ತೋರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪದಾರ್ಪಣೆ ಪಂದ್ಯದಲ್ಲೇ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದುವರೆಗೂ ಆಡಿರುವ 15 ಪಂದ್ಯಗಳಿಂದ 310 ರನ್ ಗಳಿಸಿದ್ದು, 2 ಅರ್ಧಶತಕ ಬಾರಿಸಿ, ಟೀಮ್ ಇಂಡಿಯಾಗೆ ಭವಿಷ್ಯದ ಸ್ಟಾರ್‌ ಆಟಗಾರ ಎಂಬ ಭರವಸೆ ಮೂಡಿಸಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ 11 ಪಂದ್ಯಗಳಿಂದ 343 ರನ್ ಗಳಿಸಿದ್ದರು.

ಭಾರತ vs ಆಫ್ರಿಕಾ ಮೊದಲ ಟೆಸ್ಟ್‌ಗೆ ಮಳೆ ಅಡ್ಡಿ ಸಾಧ್ಯತೆ! ಮೊದಲ ದಿನದಾಟ ನಡೆಯೋದೇ ಡೌಟ್

ಭಾರತಕ್ಕೆ ಸಿಕ್ಕಿದ ಹೊಸ ಫಿನಿಶರ್​ ರಿಂಕು

ಕಳೆದ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್‌ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್‌ಗೆ ಪಂದ್ಯ ಗೆಲ್ಲಿಸುವ ಮೂಲಕ ಗ್ರೇಟ್ ಫಿನಿಷರ್ ಆಗಿದ್ದರು. 26ರ ಹರೆಯದ ರಿಂಕು ಸಿಂಗ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಹೊಡೆತಗಳ ಮೂಲಕ ಮ್ಯಾಚ್‌ ಫಿನಿಷರ್‌ ಎಂಬ ಕೀರ್ತಿಯನ್ನು ಸಂಪಾದಿಸಿದ್ದಾರೆ. ಭಾರತ ತಂಡದ ಪರ 12 ಟಿ20 ಪಂದ್ಯಗಳಿಂದ 65.5ರ ಸರಾಸರಿಯಲ್ಲಿ 262 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 2 ಪಂದ್ಯಗಳಿಂದ 55 ರನ್ ಗಳಿಸಿದ್ದಾರೆ. 

2023ರಲ್ಲಿ ವೇಗದ ಬೌಲರ್ ಉಗಮ

ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದಂತಹ ಬೌನ್ಸಿ ಪಿಚ್‌ಗಳಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಮತ್ತು ನಿರ್ಣಾಯಕ ವಿಕೆಟ್ ಪಡೆಯುವ ಮುಕೇಶ್​ ಕುಮಾರ್​​ ಮಿಂಚುತ್ತಿದ್ದಾರೆ. ಭಾರತದ ಪರ ಈಗಾಗಲೇ ಎಲ್ಲ ಮೂರು ಮಾದತ ಕ್ರಿಕೆಟ್ ಆಡಿ ವಿಕೆಟ್ ಪಡೆದಿದ್ದು, ಉಜ್ವಲ ಭವಿಷ್ಯದ ಬಗ್ಗೆ ಸುಳಿವು ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ವೇಗಿ ಳೆದ ಐಪಿಎಲ್ ಟೂರ್ನಿಯಲ್ಲಿ 7 ವಿಕೆಟ್ ಪಡೆದಿದ್ದರು.

ವಿಕೆಟ್ ಹಿಂದೆ ಮುಂದೆ ಅದ್ಭುತ ಪ್ರದರ್ಶನ

ಪಂಜಾಬ್ ಕಿಂಗ್ಸ್‌ನ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ, ಫಿನಿಷಿಂಗ್ ಹಾಗೂ ಕ್ಲೀನ್ ಹಿಟ್ಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ 309 ರನ್ ಗಳಿಸಿರುವ ಜಿತೇಶ್, ಟೀಮ್ ಇಂಡಿಯಾದಲ್ಲೂ ಡೆತ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. 4 ಟಿ20 ಪಂದ್ಯಗಳಿಂದ ಜಿತೇಶ್ ಶರ್ಮಾ, 40 ರನ್ ಹಾಗೂ 3 ಕ್ಯಾಚ್ ಪಡೆದಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios