ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಇತ್ತೀಚೆಗೆ ನೂತನ ಕೋಚ್‌ಗಾಗಿ ಅರ್ಜಿ ಆಹ್ವಾನಿಸಿತ್ತು. ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆ ದಿನವಾಗಿದೆ. ದ್ರಾವಿಡ್ ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ.

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರದಲ್ಲಿ ಕುತೂಹಲ ಮುಂದುವರಿದಿದೆ. ಕೋಚ್ ಸ್ಥಾನದ ರೇಸ್ ನಲ್ಲಿ ಮುಂಚೂಣಿಯ ಇದ್ದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗ‌ರ್ ಹಾಗೂ ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಆಫರ್ ತಿರಸ್ಕರಿಸಿದ್ದು, ಸೂಕ್ತ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ಮುಂದುವರಿಸಿದೆ.

ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಇತ್ತೀಚೆಗೆ ನೂತನ ಕೋಚ್‌ಗಾಗಿ ಅರ್ಜಿ ಆಹ್ವಾನಿಸಿತ್ತು. ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆ ದಿನವಾಗಿದೆ. ದ್ರಾವಿಡ್ ಮರು ಆಯ್ಕೆ ಬಯಸಿ ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ. ಹೀಗಾಗಿ ಕೋಚ್ ಹುದ್ದೆಗೆ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿರುವ ರಿಕಿ ಪಾಂಟಿಂಗ್, ಆರ್‌ಸಿಬಿ ಕೋಚ್ ಆಗಿರುವ ಆ್ಯಂಡಿ ಫ್ಲವರ್, ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್, ಸಿಎಸ್‌ಕೆ ತಂಡದ ಕೋಚ್ ಸ್ಟೀಫನ್ ಪ್ಲೆಮಿಂಗ್, ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೆಸರು ಕೇಳಿಬಂದಿದ್ದವು.

IPL 2024 ಫೈನಲ್‌ಗೇರಲು ಸನ್‌ರೈಸರ್ಸ್‌ vs ರಾಯಲ್ಸ್‌ ಹಣಾಹಣಿ

ಸದ್ಯ ಪಾಂಟಿಂಗ್ ಕೋಚ್ ಆಫರ್ ತಿರಸ್ಕರಿಸಿ ದ್ದಾರೆ. 'ಭಾರತದ ಕೋಚ್ ಹುದ್ದೆ ಅಲಂಕರಿಸುವಂತೆ ಆಫರ್ ಬಂದಿದ್ದು ನಿಜ. ಆದರೆ ಕೋಚ್ ಹುದ್ದೆಗೆ ಆಸಕ್ತಿ ತೋರಿಲ್ಲ. ಐಪಿಎಲ್ ವೇಳೆ ನೇರವಾಗಿ ನನ್ನನ್ನು ಸಂಪರ್ಕಿಸಲಾಗಿತ್ತು. ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವುದು ನನಗೆ ಇಷ್ಟವಿದೆ. ಆದರೆ ಭಾರತಕ್ಕೆ ಕೋಚ್ ಆದರೆ 10-11 ತಿಂಗಳು ತಂಡದ ಜೊತೆಗಿರಬೇಕಾಗುತ್ತದೆ. ಇದು ನನ್ನ ಜೀವನಕ್ರಮಕ್ಕೆ ಸೂಕ್ತವಲ್ಲ, ಅಲ್ಲದೆ ಐಪಿಎಲ್ ಕೋಚ್ ಸ್ಥಾನವನ್ನೂ ತ್ಯಜಿಸಬೇಕಾಗುತ್ತದೆ. ಹೀಗಾಗಿ ಆಸಕ್ತಿ ತೋರಿಲ್ಲ' ಎಂದಿದ್ದಾರೆ.

ಅರ್ಜಿ ಸಲ್ಲಿಸುವುದಿಲ್ಲ: ಆ್ಯಂಡಿ ಫ್ಲವರ್ ಸ್ಪಷ್ಟನೆ

ಜಿಂಬಾಬೈ ಮಾಜಿ ನಾಯಕ ಆ್ಯಂಡಿ ಫ್ಲವರ್ ಹೆಸರು ಕೂಡಾ ಭಾರತ ತಂಡದ ಕೋಚ್ ಹುದ್ದೆಗೆ ಕೇಳಿಬರುತ್ತಿದ್ದರೂ, ಅದನ್ನು ಸ್ವತಃ ಫ್ಲವರ್ ನಿರಾಕರಿಸಿದ್ದಾರೆ. 'ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ. ವರ್ಷದಲ್ಲಿ 10 ತಿಂಗಳು ಕೋಚ್ ಆಗಿ ಕಾರ್ಯ ನಿರ್ವಹಿಸುವುದು ಇಷ್ಟವಿಲ್ಲ. ಫ್ರಾಂಚೈಸಿ ಲೀಗ್‌ನಲ್ಲೇ ಕೋಚ್ ಆಗಿರುತೇನೆ' ಎಂದಿದ್ದಾರೆ. ಪ್ಲವರ್ ಇಂಗ್ಲೆಂಡ್ ಟೆಸ್ಟ್‌ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ಅವರು ಐಪಿಎಲ್‌ನ ಲಖನ್ ಸೂಪರ್‌ ಜೈಂಟ್ಸ್ ತಂಡಕ್ಕೆ ಕೋಚ್ ಆಗಿದ್ದರು.

ಆರ್‌ಸಿಬಿಯ ಹೊಸ ಅಧ್ಯಾಯ ಮುಕ್ತಾಯ; ರಾಜಸ್ಥಾನ ಎದುರು ಹೋರಾಡಿ ಸೋತ ಬೆಂಗಳೂರು

'ಐಪಿಎಲ್‌ ತಂಡದಲ್ಲಿರುವ ಒತ್ತಡ ಮತ್ತು ರಾಜಕೀಯದ ಸಾವಿರ ಪಟ್ಟು ಹೆಚ್ಚು ಭಾರತದ ತಂಡ ಕೋಚ್‌ ಹುದ್ದೆಯಲ್ಲಿದೆ ಎಂದು ಕೆ.ಎಲ್‌.ರಾಹುಲ್‌ ಜೊತೆ ಮಾತನಾಡುತ್ತಿದ್ದಾಗ ನನ್ನಲ್ಲಿ ಹೇಳಿದರು. ಅದು ಉತ್ತಮ ಸಲಹೆ ಎಂದು ಭಾವಿಸುತ್ತೇನೆ. ಭಾರತದ ಕೋಚ್‌ ಆಗುವುದು ಅದ್ಭುತ ಕೆಲಸವಾಗಿದ್ದರೂ, ಈ ಸಮಯದಲ್ಲಿ ನನ್ನ ಪಾಲಿಗೆ ಸೂಕ್ತವಲ್ಲ'. -ಜಸ್ಟಿನ್‌ ಲ್ಯಾಂಗರ್‌