ನಕಲಿ ಮಿಸ್ಟರ್ ಬೀನ್ ಕಳಿಸಿದ್ರಲ್ಲ, ತಗೊಳ್ಳಿ ನಮ್ಮ ಗಿಫ್ಟು.. ಜಿಂಬಾಬ್ವೆ ಅಭಿಮಾನಿಗಳಿಂದಲೂ ಪಾಕ್ ಟ್ರೋಲ್!
2016ರಲ್ಲಿ ಜಿಂಬಾಬ್ವೆಗೆ ನಕಲಿ ಮಿಸ್ಟರ್ ಬೀನ್‌ಅನ್ನು ಪಾಕಿಸ್ತಾನ ಕಳಿಸಿತ್ತು. ಆಸಿಫ್ ಮೊಹಮದ್ ಎನ್ನುವ ವ್ಯಕ್ತಿ ಪಾಕಿಸ್ತಾನದ ಮಿ.ಬೀನ್ ಆಗಿ ಹೆಸರುವಾಸಿಯಾಗಿದ್ದು, ನೋಡಲು ಮಿ.ಬೀನ್‌ನಂತೆಎಯೇ ಇದ್ದಾರೆ. ಇವರನ್ನು ಜಿಂಬಾಬ್ವೆಯಲ್ಲಿ ಬಹುತೇಕ ಮಂದಿ ನಿಜವಾದ ಮಿ.ಬೀನ್ ಎಂದೇ ನಂಬಿದ್ದರು. ಇವರು ನೀಡಿದ್ದ ಹಾಸ್ಯ ಕಾರ್ಯಕ್ರಮ ಸಂಪೂರ್ಣವಾಗಿ ಫ್ಲಾಪ್ ಆಗಿತ್ತು.
ಬೆಂಗಳೂರು (ಅ.27): ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡ 2022ರ ಟಿ20 ವಿಶ್ವಕಪ್‌ನ ತನ್ನ 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರದ್ಧ 1 ರನ್‌ಗಳ ಸೋಲು ಕಂಡಿದೆ. ಇನ್ನೊಂದೆಡೆ ಜಿಂಬಾಬ್ವೆ ತಂಡದ ಗೆಲುವಿನ ಸಂಭ್ರಮಕ್ಕೆ ಪಾರವೇ ಇಲ್ಲ. ಇದರ ನಡುವೆ ಜಿಂಬಾಬ್ವೆಯ ಕ್ರಿಕೆಟ್ ಅಭಿಮಾನಿಗಳು ಸೇಡು ತೀರಿಸಿಕೊಂಡ ನಿರಾಳತೆ ಅನುಭವಿಸಿದ್ದಾರೆ. ಜಿಂಬಾಬ್ವೆಗೆ ನಕಲಿ ಮಿಸ್ಟರ್ ಬೀನ್‌ಅನ್ನು ಕಳಿಸಿದ್ದ ಕಾರಣಕ್ಕೆ, ಆ ದೇಶದ ಜನರಿಂದ ಆಕ್ರೋಶಕ್ಕೆ ಪಾಕಿಸ್ತಾನ ತುತ್ತಾಗುತ್ತಲೇ ಇತ್ತು. ಅದರ ನಡುವೆ ಪರ್ತ್‌ನಲ್ಲಿ ತಮ್ಮ ತಂಡ ಪಾಕಿಸ್ತಾನದ ವಿರುದ್ಧ 1 ರನ್‌ನಿಂದ ಗೆಲುವು ಕಂಡಿರುವುದು ಜಿಂಬಾಬ್ವೆಯ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ. ನಮಗೆ ನಕಲಿ ಮಿಸ್ಟರ್ ಬೀನ್ ಕಳಿಸಿದ್ರಲ್ಲ, ಇದೇ ನಾವು ನೀಡುತ್ತಿರುವ ಗಿಫ್ಟು ಎಂದು ಅಲ್ಲಿನ ಅಭಿಮಾನಿಗಳು ಕಾಲೆಳೆದಿದ್ದಾರೆ. ಪಂದ್ಯಕ್ಕೂ ಮುನ್ನ ಜಿಂಬಾಬ್ವೆಯ ಅಭಿಮಾನಿಯೊಬ್ಬ ಈ ಕುರಿತಾದ ವಿವರವಾದ ಟ್ವೀಟ್ ಕೂಡ ಹಾಕಿದ್ದ. ಪಾಕಿಸ್ತಾನ ತಂಡವನ್ನು ನಮ್ಮ ಟೀಮ್ ಸೋಲಿಸಬೇಕು ಅದಕ್ಕೆ ಕಾರಣವೂ ಇದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ. ಜಿಂಬಾಬ್ವೆಯಲ್ಲಿ 2016ರಲ್ಲಿ ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಗೆಸ್ಟ್ ಆಗಿ ಪಾಕಿಸ್ತಾನ ನಕಲಿ ಮಿಸ್ಟರ್ ಬೀನ್ ಅನ್ನು ಕಳಿಸಿತ್ತು. ಆದರೆ, ಜಿಂಬಾಬ್ವೆಯ ಜನರು ಈ ಅಸಲಿ ಎಂದು ನಂಬಿದ್ದರು. ಕೊನೆಗೆ ಸತ್ಯ ಗೊತ್ತಾಗಿತ್ತು.
ಪಾಕಿಸ್ತಾನ (Pakistan) ತಮ್ಮ ದೇಶಕ್ಕೆ ನಕಲಿ ಮಿ.ಬೀನ್ ಕಳಿಸಿದ ವಿಚಾರವಾಗಿ ಎನ್‌ಗುಗಿ ಚಾಸುರಾ (Ngugi Chasura) ಎನ್ನುವ ವ್ಯಕ್ತಿ ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಕ್ರಿಕೆಟ್ ಹ್ಯಾಂಡಲ್‌ಗಳಲ್ಲಿ ಟ್ವೀಟ್ ಮಾಡುತ್ತಿದ್ದರು. ಅದಲ್ಲದೆ, ನಕಲಿ ಬೀನ್ಅನ್ನು ಕಳಿಸಿದ್ದಕ್ಕೆ ನಾವು ರಿವೇಂಜ್ ಪಡೆದುಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದರು. 'ಪಾಕಿಸ್ತಾನದ ನಕಲಿ ಮಿ. ಬೀನ್ ವಿಚಾರವಾಗಿ ಜಿಂಬಾಬ್ವೆ ಬಹಳ ಗಂಭೀರವಾಗಿತ್ತು ಅನ್ನೋದು ನಮಗೆಲ್ಲ ಅರ್ಥವೇ ಆಗಲಿಲ್ಲ. ಅದ್ಭುತವಾಗಿ ರಿವೇಂಜ್ ಪಡೆದುಕೊಂಡಿದ್ದಾರೆ' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. 'ನಾನು ಜಿಂಬಾಬ್ವೆಗೆ ನಕಲಿ ಬೀನ್ ಅನ್ನು ಕಳುಹಿಸಿದ ವ್ಯಕ್ತಿಯೊಂದಿಗೆ ಮಾತನಾಡಲು ಬಯಸುತ್ತೇನೆ' ಎಂದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ಬರೆದುಕೊಂಡಿದ್ದಾನೆ. ಇನ್ನು ಕೆಲವು ಪಾಕ್ ಅಭಿಮಾನಿಗಳು ಎನ್‌ಗುಗಿ ಚಾಸುರಾಗೆ ಟ್ವಿಟರ್‌ನಲ್ಲಿಯೇ (Twitter) ಕ್ಷಮೆ ಕೇಳಿದ್ದಾರೆ.
"ಜಿಂಬಾಬ್ವೆಯನ್ನರಾಗಿ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ... ನೀವು ಒಮ್ಮೆ ಮಿಸ್ಟರ್ ಬೀನ್ ರೋವನ್ ಬದಲಿಗೆ ನಕಲಿ ಪಾಕ್ ಬೀನ್ ಅನ್ನು ನಮಗೆ ನೀಡಿದ್ದೀರಿ .. ನಾವು ನಾಳೆ ಈ ವಿಷಯವನ್ನು ಇತ್ಯರ್ಥಪಡಿಸುತ್ತೇವೆ ಮಳೆ ನಿಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇವೆ." ಎಂದು ಜಿಂಬಾಬ್ವೆ ಕ್ರಿಕೆಟ್ ಫ್ಯಾನ್ ಎನ್‌ಗುಗಿ ಚಾಸುರಾ ಪಿಸಿಬಿಯ ಟ್ವೀಟ್‌ಗೆ ರಿಪ್ಲೈ ಮಾಡುವ ವೇಳೆ (T20 WORLD CUP) ಬರೆದಿದ್ದರು.
T20 World Cup: ಒಂದೇ ರನ್‌ನಿಂದ ಜಿಂಬಾಬ್ವೆ ವಿರುದ್ಧ ಮಕಾಡೆ ಮಲಗಿದ ಪಾಕಿಸ್ತಾನ!
ಆಸಿಫ್ ಮೊಹಮ್ಮದ್ ಒಬ್ಬ ಪಾಕಿಸ್ತಾನಿ (PAKISTAN, ) ಪ್ರಜೆಯಾಗಿದ್ದು, ಅವರು ಮಿಸ್ಟರ್ ಬೀನ್ (ZIMBABWE), ಅಂದರೆ ರೋವನ್ ಅಟ್ಕಿನ್ಸನ್ ಅವರಂತೆ ಕಾಣುತ್ತಾರೆ. ಮಿಸ್ಟರ್ ಪಾಕ್ ಬೀನ್ ಎಂದು ಕರೆಯಲ್ಪಡುವ ಆಸಿಫ್ ಮೊಹಮ್ಮದ್ ಅವರನ್ನು ಕೆಲವು ಕಾರ್ಯಕ್ರಮಗಳಿಗಾಗಿ 2016 ರಲ್ಲಿ ಜಿಂಬಾಬ್ವೆಗೆ ಕರೆಸಲಾಗಿತ್ತು. ಅಲ್ಲಿ ಅವರು ಜನರಿಗೆ ಮನರಂಜನಾ ಕಾರ್ಯಕ್ರಮ ನೀಡಬೇಕಾಗಿತ್ತು. ವರದಿಗಳ ಪ್ರಕಾರ, ಹರಾರೆ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಕಲಿ ಮಿಸ್ಟರ್ ಬೀನ್ ನೀಡಿದ್ದ ಪ್ರದರ್ಶನವು ಭಾರಿ ಫ್ಲಾಪ್ ಶೋ ಆಗಿತ್ತು. ಪಾಕಿಸ್ತಾನದ ಮಿ.ಬೀನ್ ಎಂದು ಹೆಸರಾಗಿದ್ದರೂ ಅವರ ಕಾರ್ಯಕ್ರಮ ಜನರಿಗೆ ನಗು ತರಿಸಿರಲಿಲ್ಲ. ಸ್ಥಳೀಯ ಕಲಾವಿದರೊಂದಿಗೆ ಕೆಲ ಕಾರ್ಯಕ್ರಮ ಮಾಡಿ ನಿರಾಶಾದಾಯಕವಾಗಿ ಪ್ರೋಗ್ರಾಂ ಮುಗಿಸಿದ್ದರು.
BCCI ಐತಿಹಾಸಿಕ ತೀರ್ಮಾನ; ಭಾರತ ಪುರುಷ-ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ..!
ಎನ್‌ಗುಗಿ ಚಾಸುರಾ ಪ್ರಕಾರ, ಪಾಕ್‌ನ ಮಿ.ಬೀನ್ ಪ್ರತಿ ಟಿಕೆಟ್‌ಗೆ 10 ಡಾಲರ್ ಶುಲ್ಕ ವಿಧಿಸಿದ್ದರು. ಆದರೆ, ಅವರು ಕಾರ್ಯಕ್ರಮದಲ್ಲಿ ಯಾವುದೇ ವಿಶೇಷತೆ ಇದ್ದಿರಲಿಲ್ಲ. ಹಾಗಾಗಿ, ಜಿಂಬಾಬ್ವೆ ವಿರುದ್ಧದ ವಿಶ್ವ ಟಿ20 ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನು ಸೋಲಿಸಿ, ಪಾಕಿಸ್ತಾನಿಗಳಿಗೆ ತಕ್ಕ ಪಾಠ ಸಿಗಲಿ ಎಂದು ಬೇಡಿಕೊಳ್ಳುವುದಾಗಿ ಬರೆದಿದ್ದರು.