ಐಸಿಸಿ ಚೇರ್ಮನ್ ಹುದ್ದೆ ಮೇಲೆ ಕಣ್ಣು, ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಜಯ್ ಶಾ!
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಸಲುವಾಗಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿ (ಜ.30): ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಪ್ರಸ್ತುತ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಐಸಿಸಿ ಅಧ್ಯಕ್ಷರಾಗಿದ್ದು, 2020ರ ನವೆಂಬರ್‌ನಿಂದ ಈ ಅಧಿಕಾರದಲ್ಲಿದ್ದಾರೆ. ಜಯ್ ಶಾ ಆಯ್ಕೆಯಾದರೆ, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗುವ ಮೂರನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕಾರ್ಯದರ್ಶಿ ಜಯ್ ಶಾ ಅವರನ್ನು ಸಿಐಐ ಸ್ಪೋರ್ಟ್ಸ್ ಬ್ಯುಸಿನೆಸ್ ಅವಾರ್ಡ್ಸ್ 2023 ರಲ್ಲಿ ವರ್ಷದ ಪ್ರತಿಷ್ಠಿತ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಸಿಐಐ ರಾಷ್ಟ್ರೀಯ ಕ್ರೀಡಾ ಸಮಿತಿಯ ಅಧ್ಯಕ್ಷ ಚಾಣಕ್ಯ ಚೌಧರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು, ಭಾರತೀಯ ಕ್ರಿಕೆಟ್ ಅನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶಾ ಅವರ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಜಯ್ ಶಾ ಅವರ ಸಾರಥ್ಯದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ವಿಶ್ವಕಪ್ ಟೂರ್ನಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಗರಿಷ್ಠ ಮಂದಿ ವೀಕ್ಷಿಸಿದ ಐಸಿಸಿ ವಿಶ್ವಕಪ್ ಟೂರ್ನಿ ಎನ್ನುವ ಹೆಗ್ಗಳಿಕೆ ಇದರದಾಗಿದೆ.
ಐಪಿಎಲ್ ಮಾದರಿಯಲ್ಲಿ ಭಾರತದಲ್ಲಿ ಟಿ10 ಲೀಗ್ ಆರಂಭಿಸುವ ನಿರ್ಧಾರ ಮಾಡಿದ ಬಿಸಿಸಿಐ!
ಇನ್ನು ಜಯ್ ಶಾ ಅವರ ನೇತೃತ್ವದಲ್ಲಿಯೇ ಭಾರತದ ಪುರುಷ ಹಾಗೂ ಮಹಿಳಾ ತಂಡಡದ ಆಟಗಾರರಿಗೆ ಸಮಾನ ವೇತನ ಪದ್ಧತಿ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಇದ್ದ ಎಲ್ಲಾ ಅಡೆತಡೆಗಳನ್ನು ಅವರು ನಿವಾರಿಸಿದ್ದಾರೆ. ಭಾರತದಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ಸಮಾನವಾದ ವೇತನ ಪಡೆದುಕೊಳ್ಳಲಿದ್ದಾರೆ ಎಂದು ಜಯ್ ಷಾ ಘೋಷಣೆ ಮಾಡುವ ಮೂಲಕ, ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣರಾಗಿದ್ದರು.
ಇನ್ಮುಂದೆ ಭಾರತದಲ್ಲಿ ನಡೆಯೊಲ್ಲ ಪಿಂಕ್ ಬಾಲ್ ಟೆಸ್ಟ್..! ಡೇ & ನೈಟ್ ಟೆಸ್ಟ್ ಬಗ್ಗೆ BCCI ನಿರಾಸಕ್ತಿ ಯಾಕೆ..?