ಅಂಬಾಟಿ ರಾಯಡು ಈಗ ಬದಲಾಗಿದ್ದಾರೆ. ಆರ್‍‌ಸಿಬಿ ಹಾಗೂ ಆರ್‍‌ಸಿಬಿ ಅಭಿಮಾನಿಗಳ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. 2027ರಲ್ಲಿ ಐಪಿಎಲ್ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ರಾಯಡು ಗುಡ್‌ನ್ಯೂಸ್ ನೀಡಿದ್ದಾರೆ.

ಬೆಂಗಳೂರು: ಆರ್‍‌ಸಿಬಿ ವಿರುದ್ಧ ಸದಾ ಬೆಂಕಿಯ ಉಂಡೆಯನ್ನು ಉಗುಳುವ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ಈಗ ಬದಲಾಗಿದ್ದಾರೆ. 2027ರ ಐಪಿಎಲ್‌ ಎದುರು ನೋಡುತ್ತಿರುವ ಆರ್‍‌ಸಿಬಿ ಅಭಿಮಾನಿಗಳಿಗೆ ರಾಯಡು ಭರ್ಜರಿ ಗುಡ್‌ನ್ಯೂಸ್ ನೀಡಿದ್ದಾರೆ. ರಾಯಡು ಮಾತು ಕೇಳಿ ಕೆಲವು ಆರ್‍‌ಸಿಬಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇನ್ನು ಕೆಲವರು ರಾಯಡುಗೆ ಈಗ ಬುದ್ಧಿ ಬಂದಿದೆ. ಅವರು ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರೆ ಎಂದು ವಾದಿಸಿದ್ದಾರೆ.

ರಾಯಡು ಏನಂದ್ರು?

RCB ತಂಡ ಈಗ ಎಲ್ಲಾ ಫ್ರಾಂಚೈಸಿಗಳಿಗಿಂತ ಬಲಿಷ್ಠವಾಗಿದೆ. ತಂಡದಲ್ಲಿ 11 ಮ್ಯಾಚ್ ವಿನ್ನರ್‌ಗಳಿದ್ದಾರೆ. 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿರುವ RCB, ಮುಂದಿನ ಸೀಸನ್‌ನಲ್ಲೂ ಚಾಂಪಿಯನ್ ಆಗುವ ಸಾಮರ್ಥ್ಯ ಹೊಂದಿದೆ. ಸತತ ಮೂರನೇ ಟ್ರೋಫಿ ಗೆದ್ದರೂ ಅಚ್ಚರಿಯಿಲ್ಲ ಎಂದು ರಾಯಡು ಹೊಗಳಿದ್ದಾರೆ.

ಈಗ ಆರ್‍‌ಸಿಬಿಯಲ್ಲಿ ಎಲ್ಲವೂ ಚೆನ್ನಾಗಿದೆ. ಅವರು ಎರಡು ಟೈಟಲ್ ಗೆದ್ದಿದ್ದಾರೆ ಎಂದು ಹೇಳುತ್ತಿಲ್ಲ. ಅವರು ತಮ್ಮ ಕೆಲಸದ ವಿಧಾನವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಅವರು ತಾವು ಇಷ್ಟಪಟ್ಟು ಆಡುವ ಕ್ರಿಕೆಟ್ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಅವರು ವೇಗವಾಗಿ ಸುಧಾರಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ಇರುವ ಪರಿಸ್ಥಿತಿ ಬದಲಾಯಿಸಬೇಕು ಎಂಬ ಹಸಿವು ಅವರಲ್ಲಿತ್ತು. ಅದಕ್ಕೆ ಅವರು ವೇಗವಾಗಿ ಸುಧಾರಿಸಿಕೊಂಡಿದ್ದಾರೆ. ಆರ್‍‌ಸಿಬಿಯಲ್ಲಿ ಈಗ ಒಂದು ಸಿಸ್ಟಮ್ ಇದೆ. ಈಗ ಬೇರೆ ತಂಡಗಳು ಕೂಡ ಅವರನ್ನು ಅನುಸರಿಸಲು ಪ್ರಯತ್ನಿಸುತ್ತಿವೆ. ಆದರೆ ಅದು ಅಷ್ಟು ಸುಲಭವಲ್ಲ.

ಆ ಸಿಸ್ಟಮ್ ಬಗ್ಗೆ ಚೆನ್ನಾಗಿ ತಿಳಿದಿರುವವರು.. ಅದು ಹೇಗೆ ಕೆಲಸ ಮಾಡುತ್ತದೆ ಎಂದು ಅರಿತಿರುವವರು.. ಜೊತೆಗೆ ಅಗತ್ಯವಿದ್ದಾಗ ಸಣ್ಣಪುಟ್ಟ ಬದಲಾವಣೆ ಮಾಡಬಲ್ಲವರು ಮುಂಚೂಣಿಯಲ್ಲಿರುತ್ತಾರೆ. ಆಗ ಅದು ಗೆಲ್ಲುವ ನೆಚ್ಚಿನ ತಂಡವಾಗಿ ಇರುತ್ತದೆ. RCB ಪ್ರಮುಖ ಆಟಗಾರರಿಗೆ.. ಮುಖ್ಯವಾಗಿ ಬೌಲಿಂಗ್ ವಿಭಾಗದ ಭುವಿ (ಭುವನೇಶ್ವರ್ ಕುಮಾರ್), ಹೇಜಲ್‌ವುಡ್ ಮತ್ತು ಡಫಿಗೆ ಯಾವುದೇ ಗಾಯಗಳಾಗದಿದ್ದರೆ.. ಈ ಸೀಸನ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಇದು ನನ್ನ ಅಭಿಪ್ರಾಯ. ಆ ತಂಡಕ್ಕೆ ಒಳ್ಳೆದಾಗಲು ಈ ಮೂವರು ತುಂಬಾನೇ ಮುಖ್ಯ. ಜೊತೆಗೆ ಇವರ ಬದಲಿಗೆ ಒಳ್ಳೆಯ ಬ್ಯಾಕಪ್ ಪ್ಲೇಯರ್ ಕೂಡ ಬೇಕಾಗುತ್ತದೆ ಎಂದು ಅಂಬಟಿ ರಾಯಡು ಹೇಳಿದ್ದಾರೆ.

ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳು ಡಿಸೆಂಬರ್‍‌ನಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಸಿದ್ಧವಾಗುತ್ತಿವೆ. ಅಂತೆಯೇ ಆರ್‍‌ಸಿಬಿ ಕೂಡ ಅಳೆದು ತೂಗಿ ಲೆಕ್ಕಾಚಾರ ಹಾಕುತ್ತಿದೆ. ನವೆಂಬರ್ 17 ರಂದು ಆರ್‍‌ಸಿಬಿ ಒಟ್ಟು 20 ಆಟಗಾರರನ್ನು ಉಳಿಸಿಕೊಂಡಿದೆ. ಜೊತೆಗೆ 6 ಆಟಗರಾರರನ್ನು ರಿಲೀಸ್ ಮಾಡಿದೆ. ಮಂಗೇಶ್ ಯಾದವ್, ಜೇಕಬ್ ಬೆಥಲ್, ರಿಚರ್ಡ್ ಗ್ಲೀಸನ್, ಸ್ವಪ್ನಿಲ್ ಸಿಂಗ್, ಸಾತ್ವಿಕ್ ದೇಸ್ವಾಲ್, ವಿಹಾನ್ ಮಲ್ಹೋತ್ರಾ ಅವರನ್ನು ಆರ್‍‌ಸಿಬಿ ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ಆರ್‍‌ಸಿಬಿ ಪರ ರಾಯಡು ಬ್ಯಾಟ್ ಬೀಸಿದ್ದಾರೆ.