Disney+Hotstar ವೀಕ್ಷಣೆಯಲ್ಲಿ ಆರ್‌ಸಿಬಿ-ಲಖನೌ ಪಂದ್ಯ ದಾಖಲೆ..!
* ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಎದುರು ಆರ್‌ಸಿಬಿ ಜಯಭೇರಿ
* ರ್ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್ ಪಂದ್ಯ ವೀಕ್ಷಣೆಯಲ್ಲಿ ಹೊಸ ದಾಖಲೆ
* ಡಿಸ್ನಿ ಹಾಟ್ಸ್ಟಾರ್ನಲ್ಲಿ ಬರೋಬ್ಬರಿ 8.7 ಮಿಲಿಯನ್ ಮಂದಿ ವೀಕ್ಷಣೆ
ಬೆಂಗಳೂರು(ಏ.27): ಮಾರ್ಚ್ 26ಕ್ಕೆ ಆರಂಭಗೊಂಡು ಸುದೀರ್ಘ ಎರಡು ತಿಂಗಳ ಕಾಲ ಭರ್ಜರಿ ಮನರಂಜನೆ ಉಣಬಡಿಸಿದ್ದ 15ನೇ ಐಪಿಎಲ್ (IPL 2022) ಕೊನೆ ಘಟ್ಟ ತಲುಪಿದೆ. ಕಲರ್ಫುಲ್ ಟೂರ್ನಿಯಲ್ಲಿ ಇನ್ನೆರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಸಂಡೇ ಐಪಿಎಲ್ ಹಂಗಾಮಕ್ಕೆ ತೆರೆ ಬೀಳಲಿದೆ. ಆರಂಭದಿಂದಲೇ ಭಾರಿ ಸುದ್ದಿಯಾಗಿದ್ದ ಈ ಬಾರಿಯ ಐಪಿಎಲ್ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಕಾಣಲಿಲ್ಲ. ಟೂರ್ನಿಯ ಇತಿಹಾಸದಲ್ಲೇ ವೀಕ್ಷಕರ ಸಂಖ್ಯೆ ಪಾತಾಳಕ್ಕೆ ಕುಸಿದಿತ್ತು.
ಶೇಖಡ 28 ರಿಂದ 30 ರಷ್ಟು ವೀವರ್ಸ್ ಕಮ್ಮಿಯಾಗಿದ್ರು. ನೇರಪ್ರಸಾರದ ಹಕ್ಕು ಪಡೆದಿರೋ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಹಾಗೂ ಬಿಸಿಸಿಐ ಇದರಿಂದ ಅಕ್ಷರಶಃ ಕಂಗೆಟ್ಟಿತ್ತು. ಇಂತಹ ಸಂಕಷ್ಟದ ಟೈಮ್ಅಲ್ಲಿ ಆರ್‌ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್ ಪಂದ್ಯ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಡಿಸ್ನಿ ಹಾಟ್ಸ್ಟಾರ್ನಲ್ಲಿ 8.7 ಮಿಲಿಯನ್ ಮಂದಿ ವೀಕ್ಷಣೆ:
ಆರ್‌ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್ ಪಂದ್ಯ ಸಾಕಷ್ಟು ಥ್ರಿಲ್ಲಿಂಗ್ನಿಂದ ಕೂಡಿತ್ತು. ಕೊನೆಗೆ ಈ ರೋಚಕ ಗೇಮ್ನಲ್ಲಿ ಆರ್‌ಸಿಬಿ ಗೆದ್ದಿತ್ತು. ಈ ತೀವ್ರ ಜಿದ್ದಿನ ಪಂದ್ಯವನ್ನ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬರೋಬ್ಬರಿ 8.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇದು ಪ್ರಸಕ್ತ ಐಪಿಎಲ್‌ನಲ್ಲಿ ಹೆಚ್ಚು ವೀಕ್ಷಣೆ ಪಡೆದ ಖ್ಯಾತಿಗೆ ಭಾಜನವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 15ನೇ ಆವೃತ್ತಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್-2ಕ್ಕೆ ಲಗ್ಗೆ ಇಟ್ಟಿದೆ. ಬುಧವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ತಂಡ 14 ರನ್‌ಗಳಿಂದ ಗೆಲುವು ಸಾಧಿಸಿತು. ಕಳೆದೆರಡು ಆವೃತ್ತಿಗಳಲ್ಲಿ ಕ್ರಮವಾಗಿ ಹೈದರಬಾದ್ ಹಾಗೂ ಕೋಲ್ಕತಾ ವಿರುದ್ಧ ಎಲಿಮಿನೇಟರ್ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ತಂಡ ಈ ಬಾರಿ ಗೆಲುವು ಸಾಧಿಸಲು ಯಶಸ್ವಿಯಾಯಿತು. ಚೊಚ್ಚಲ ಆವೃತ್ತಿಯಲ್ಲೇ ಪ್ಲೇ-ಆಫ್ ಪ್ರವೇಶಿಸಿ ಗಮನ ಸೆಳೆದಿದ್ದ ಲಖನೌ ಎಲಿಮಿನೇಟರ್‌ನಲ್ಲಿ ಅಭಿಯಾನ ಕೊನೆಗೊಳಿಸಿತು.
ಚೆನ್ನೈ - ಮುಂಬೈ ಪಂದ್ಯದ ದಾಖಲೆ ಖತಂ:
ಇನ್ನು ಆರ್‌ಸಿಬಿ-ಲಖನೌ ಪಂದ್ಯವನ್ನ 8.7 ಮಿಲಿಯನ್ ಮಂದಿ ನೋಡುವ ಮೂಲಕ ಚೆನ್ನೈ-ಮುಂಬೈ ಪಂದ್ಯದ ದಾಖಲೆ ಉಡೀಸ್ ಆಗಿದೆ. ಈ ಪಂದ್ಯವನ್ನ 8.3 ಮಿಲಿಮಂದಿ ಹಾಟ್ಸ್ಟಾರ್ನಲ್ಲಿ ವೀಕ್ಷಿಸಿದ್ರು. ಈ ಪಂದ್ಯದಲ್ಲಿ ಧೋನಿ ಕೊನೆ ಓವರ್ನಲ್ಲಿ ಅಬ್ಬರಿಸಿ ಚೆನ್ನೈಗೆ ಗೆಲುವು ತಂದುಕೊಟ್ರು. ಹಾಗಾಗಿ ವೀಕ್ಷಣೆಯಲ್ಲಿ ಭಾರೀ ಏರಿಕೆ ಕಂಡಿತ್ತು.
IPL Qualifier 2: ಹೀಗಿದೆ ಆರ್‌ಸಿಬಿ ಎದುರಿನ ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ಸಂಭಾವ್ಯ ತಂಡ..!
ಇನ್ನು ಇಂದು ಕೂಡ ಆರ್‌ಸಿಬಿ-ರಾಜಸ್ಥಾನ ನಡುವೆ ಕ್ವಾಲಿಫೈಯರ್-2 ಫೈಟ್ ಏರ್ಪಡಲಿದೆ. ಎರಡು ತಂಡಕ್ಕೂ ಡು ಆರ್ ಡೈ. ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಅದ್ರಲ್ಲೂ ಆರ್‌ಸಿಬಿ ರಾಯಲ್ಸ್ಗೆ ಸವಾಲೆಸೆಯೋದ್ರಿಂದ ಇಂದಿನ ಪಂದ್ಯ ಕೂಡ ದಾಖಲೆಯ ವೀಕ್ಷಣೆಯ ಪಡೆಯುವ ನಿರೀಕ್ಷೆ ಇದೆ.