RCB ಫ್ರಾಂಚೈಸಿಗೆ ದುಡ್ಡೇ ದೊಡ್ಡಪ್ಪ..! CSK ನೋಡಿ ಕಲಿಯಬೇಕಿದೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು

IPL ಸೀಸನ್ 17ರ ಆರಂಭಕ್ಕೆ ಇನ್ನು 11 ದಿನ ಮಾತ್ರ ಬಾಕಿಯಿದೆ. ಮಾರ್ಚ್ 22ರಿಂದ  ಟೂರ್ನಿ ಆರಂಭವಾಲಿದೆ. ಆದ್ರೆ, ಅದಕ್ಕೂ ಮೊದಲೇ RCBಯ ಅಬ್ಬರ ಶುರುವಾಗಲಿದೆ. ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ UNBOX RCB ಹೆಸರಿನ ಇವೆಂಟ್ ನಡೆಯಲಿದೆ.

RCB Unbox event on March 19 Bengaluru franchise money mind expose kvn

ಬೆಂಗಳೂರು(ಮಾ.11): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಕಪ್ ಗೆಲ್ಲದೇ ಹೋದ್ರೂ, ಅಭಿಮಾನಿಗಳಿಗೆ RCB ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅದಕ್ಕೆ, ಅಭಿಮಾನಿಗಳು RCB ಮೇಲಿಟ್ಟಿರೋ ಪ್ರೀತಿ, ಅಭಿಮಾನವೇ ಕಾರಣ. ಗೆದ್ದರೂ ಸೋತರೂ ಬದಲಾಗದೆ ಇರುವುದು ಒಂದೇ. ಅದು RCB ಅಭಿಮಾನಿಗಳ ನಿಯತ್ತು. ಆದ್ರೆ, ಈ ನಿಯತ್ತನ್ನೇ RCB ಫ್ರಾಂಚೈಸಿ ಬಂಡವಾಳ ಮಾಡಿಕೊಂಡಿದೆ. ಆ ಮೂಲಕ ಕೋಟಿ ಕೋಟಿ ದುಡ್ಡು ಮಾಡಲು ಹೊರಟಿದೆ.  

ಅಭಿಮಾನಿಗಳಿಗೆ RCB ಅಂದ್ರೆ ಜೀವ..! 

IPL ಸೀಸನ್ 17ರ ಆರಂಭಕ್ಕೆ ಇನ್ನು 11 ದಿನ ಮಾತ್ರ ಬಾಕಿಯಿದೆ. ಮಾರ್ಚ್ 22ರಿಂದ  ಟೂರ್ನಿ ಆರಂಭವಾಲಿದೆ. ಆದ್ರೆ, ಅದಕ್ಕೂ ಮೊದಲೇ RCBಯ ಅಬ್ಬರ ಶುರುವಾಗಲಿದೆ. ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ UNBOX RCB ಹೆಸರಿನ ಇವೆಂಟ್ ನಡೆಯಲಿದೆ. ಈಗಾಗ್ಲೇ ಈ ಇವೆಂಟ್ಗಾಗಿ ಆನ್ಲೈನ್ ಟಿಕೆಟ್ ಮಾರಾಟ ಆರಂಭವಾಗಿದೆ. ಮತ್ತೊಂದೆಡೆ RCB ಫ್ರಾಂಚೈಸಿ ವಿರುದ್ಧ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. RCB ತಂಡದ ಮಾಲೀಕರು ಅಭಿಮಾನಿಗಳ ಅಭಿಮಾನವನ್ನೇ, ಬಂಡವಾಳ ಮಾಡಿಕೊಂಡಿದ್ದಾರೆ. ಆ ಮೂಲಕ ದುಡ್ಡು ಮಾಡಲು ಹೊರಟಿದ್ದಾರೆ ಅನ್ನೋ ಮಾತುಳು ಕೇಳಿಬರುತ್ತಿವೆ. 

ಯೆಸ್, 16 ವರ್ಷಗಳಿಂದ RCB ಕಪ್ ಗೆಲ್ಲದೇ ಹೋದ್ರೂ, RCB ಕ್ರೇಜ್ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗ್ತಿದೆ. ಅದಕ್ಕೆ, ಕನ್ನಡಿಗರು RCB ಮೇಲಿಟ್ಟಿರೋ ಪ್ರೀತಿ, ಅಭಿಮಾನವೇ ಕಾರಣ. ಗೆದ್ದರೂ ಸೋತರೂ ಬದಲಾಗದೆ ಇರುವುದು ಒಂದೇ. ಅದು RCB ಅಭಿಮಾನಿಗಳ ನಿಯತ್ತು. 

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ RCB ಫ್ಯಾನ್ಸ್, RCB ತಂಡಕ್ಕೆ ಕೊಟ್ಟ ಪ್ರೀತಿ ಕಂಡು ಆಟಗಾರಗಾರ್ತಿಯೇ ದಂಗಾಗಿದ್ರು. RCB ತಂಡವನ್ನು ಇಷ್ಟೊಂದು ಪ್ರೀತಿಸುವ ಅಭಿಮಾನಿಗಳಿಗೆ RCB ಫ್ರಾಂಚೈಸಿ ಏನು ಕೊಟ್ಟಿದೆ..? ಕಪ್ ಅಂತೂ ಇವರ ಹಣೆಬರಹದಲ್ಲಿ ಬರೆದಂತೆ ಕಾಣುತ್ತಿಲ್ಲ. ಹೋಗಲಿ, ಅಭಿಮಾನಿಗಳಿಗೆ ಇಂಥಾ unbox ಇವೆಂಟ್ಗಳನ್ನಾದರೂ ಉಚಿತವಾಗಿ ತೋರಿಸಬಹುದಲ್ಲವೇ..? ಆದ್ರೆ, ಇಲ್ಲೂ ದುಡ್ಡು ಮಾಡೋದೇ ಮೇನ್ ಅಝೆಂಡಾ..! 

ಪಕ್ಕಾ ಕಮರ್ಷಿಲ್ RCB ಫ್ರಾಂಚೈಸಿ..! 

ಯೆಸ್, ಅಭಿಮಾನಿಗಳು RCB ತಂಡವನ್ನ ಹೃದಯದಲ್ಲಿಟ್ಟುಕೊಂಡಿದ್ದಾರೆ. ಆದ್ರೆ, RCB ಫ್ರಾಂಚೈಸಿ ಮಾತ್ರ ಪಕ್ಕಾ ಕಮರ್ಷಿಯಲ್. ನಮಗೆ ದುಡ್ಡೇ ಮುಖ್ಯ. ದುಡ್ಡೊಂದೇ ಮುಖ್ಯ ಎನ್ನುತ್ತಿದೆ. ಇದಕ್ಕೆ ಈ ಅನ್ಬಾಕ್ಸ್ ಇವೆಂಟ್, ಬೆಸ್ಟ್ ಎಕ್ಸಾಂಪಲ್ ಆಗಿದೆ. ಈ ಇವೆಂಟ್ಗೆ 800ರಿಂದ 4000 ವರೆಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದೊಂದೆ ಅಲ್ಲ, ಚಿನ್ನಸ್ವಾಮಿಯಲ್ಲಿ ನಡೆಯೋ RCB ಪಂದ್ಯಗಳ ಟಿಕೆಟ್ ಬೆಲೆ  ಕೂಡ, ಸಾಮಾನ್ಯ ಫ್ಯಾನ್ಸ್ ಖರೀದಿಸುವಂತಿಲ್ಲ. ಯಾಕಂದ್ರೆ, ಟಿಕೆಟ್ ರೇಟ್ನ 2100 ರಿಂದ 30 ಸಾವಿರವರೆಗೆ ಫಿಕ್ಸ್ ಮಾಡ ಲಾಗಿದೆ. ಬೇಱವ ತಂಡಗಳ ತವರಿನ ಪಂದ್ಯಗಳ ಟಿಕೆಟ್ ಬೆಲೆ ಇಷ್ಟೊಂದಿಲ್ಲ. 

CSK ನೋಡಿ ಕಲಿಯಬೇಕಿದೆ RCB 

2017-18ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಿಂದ ಬ್ಯಾನ್ ಆಗಿದ್ದ CSK, 2019ರಲ್ಲಿ ಮತ್ತೆ ಮೈದಾನಕ್ಕಿಳಿದಿತ್ತು. ಆ ವರ್ಷ ಧೋನಿ ಸೇರಿದಂತೆ ಇತರೆ  ಆಟಗಾರರ ಪ್ರಾಕ್ಟೀಸ್  ನೋಡಲು ಚೆಪಾಕ್ ಫ್ಯಾನ್ಸ್‌ಗೆ ಫ್ರೀ ಎಂಟ್ರಿ ನೀಡಲಾಗಿತ್ತು. 

ಒಟ್ಟಿನಲ್ಲಿ RCB ಫ್ರಾಂಚೈಸಿ ಯಾವ ಅವಕಾಶವನ್ನೂ ಬಿಡದೇ, ಅಭಿಮಾನಿಗಳ ಭಾವನೆಗಳ ಮೇಲೆ ಹಣ ವಸೂಲಿಗಿಳಿದಿದೆ. ಇದು ಪದೇ..ಪದೇ ಪ್ರೂವ್ ಆಗುತ್ತಲೇ ಇದೆ. ಇದು ಹೀಗೆ ಮುಂದುವರಿದ್ರೆ ಅಭಿಮಾನಿಗಳೇ ಫ್ರಾಂಚೈಸಿಗೆ ಪಾಠ ಕಲಿಸೋದು ಪಕ್ಕಾ..!

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios