ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್‌ ಫೇಮ್ ಗೌರವ, ನೂತನ ಜೆರ್ಸಿ ಅನಾವರಣ ಮಾಡಿದ ಕೊಹ್ಲಿ- ಫಾಫ್ ಜೋಡಿ

ಅಭಿಮಾನಿಗಳಿಗೆ ಮುದ ನೀಡಿದ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ
ಕ್ರಿಸ್ ಗೇಲ್ ಎಬಿ ಡಿವಿಲಿಯರ್ಸ್‌ಗೆ ಹಾಲ್ ಆಫ್‌ ಫೇಮ್ ಗೌರವ
ಆರ್‌ಸಿಬಿ 2023ನೇ ಸಾಲಿನ ಐಪಿಎಲ್‌ಗೆ ನೂತನ ಜೆರ್ಸಿ ಅನಾವರಣ

RCB Unbox 2023 Chris Gayle Ab De Villiers honoured RCB 2023 jersey launched kvn

ಬೆಂಗ​ಳೂ​ರು(ಮಾ.27): ದಿಗ್ಗಜ ಆಟ​ಗಾ​ರ​ರಾದ ದಕ್ಷಿಣ ಆ​ಫ್ರಿ​ಕಾದ ಎಬಿ ಡಿ ವಿಲಿ​ಯರ್ಸ್‌ ಹಾಗೂ ವೆಸ್ಟ್‌​ಇಂಡೀ​ಸ್‌ನ ಕ್ರಿಸ್‌ ಗೇಲ್‌ ಅವ​ರನ್ನು ಆರ್‌​ಸಿಬಿ ತಂಡ ಭಾನು​ವಾರ ಚಿನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ಅಪಾರ ಅಭಿ​ಮಾ​ನಿ​ಗಳ ಸಮ್ಮು​ಖ​ದಲ್ಲಿ ತನ್ನ ಹಾಲ್‌ ಆಫ್‌ ಫೇಮ್‌ಗೆ ಸೇರ್ಪ​ಡೆ​ಗೊ​ಳಿ​ಸಿ​ತು.

ಭಾನು​ವಾರ ಆರ್‌​ಸಿಬಿ ತಂಡ ‘ಅನ್‌​ಬಾಕ್ಸ್‌’ ಕಾರ್ಯಕ್ರಮ ಹಮ್ಮಿ​ಕೊಂಡಿತ್ತು. ಸಂಜೆ ಮಾಜಿ ನಾಯಕ ವಿರಾಟ್‌ ಕೊಹ್ಲಿ, ನಾಯಕ ಫಾಫ್‌ ಡು ಪ್ಲೆಸಿ ಸೇರಿ​ದಂತೆ ಬಹು​ತೇಕ ಎಲ್ಲಾ ಆಟ​ಗಾ​ರ​ರು ಕೆಲ ಹೊತ್ತು ಅಭ್ಯಾಸ ನಡೆ​ಸಿ​ದರು. ಅಪಾರ ಪ್ರಮಾ​ಣ​ದಲ್ಲಿ ಸೇರಿದ್ದ ಅಭಿ​ಮಾ​ನಿ​ಗಳು 2019ರ ಬಳಿಕ ತವ​ರು ಕ್ರೀಡಾಂಗ​ಣ​ದಲ್ಲಿ ಆರ್‌​ಸಿಬಿ ಆಟ​ಗಾ​ರ​ರನ್ನು ಕಂಡು ಆನಂದಿ​ಸಿ​ದರೆ, ಆಟ​ಗಾ​ರರು ಮೈದಾನದನು​ದ್ದಕ್ಕೂ ಸುತ್ತಾಡಿ ಅಭಿ​ಮಾ​ನಿ​ಗ​ಳಿಗೆ ಧನ್ಯ​ವಾದ ಸಮ​ರ್ಪಿ​ಸಿ​ದ​ರು.

ಅಭ್ಯಾಸದ ಬಳಿಕ ನಡೆದ ಕಾರ್ಯಕ್ರ​ಮ​ದಲ್ಲಿ ಆರ್‌​ಸಿಬಿ ಪರ ಹಲವು ವರ್ಷ​ಗಳ ಕಾಲ ಆಡಿದ್ದ ಕ್ರಿಸ್‌ ಗೇಲ್‌, ಎಬಿ ಡಿವಿಲಿ​ಯರ್ಸ್‌ಗೆ ಹಾಲ್‌ ಆಫ್‌ ಫೇಮ್‌ ಗೌರವ ಸಮ​ರ್ಪಿ​ಸಲಾ​ಯಿತು. ಜೊತೆಗೆ ಎಬಿ ಡಿವಿಲಿ​ಯರ್ಸ್‌ರ  17, ಗೇಲ್‌ರ 333 ಜೆರ್ಸಿ ಸಂಖ್ಯೆಗೂ ಫ್ರಾಂಚೈಸಿ ನಿವೃತ್ತಿ ಘೋಷಿ​ಸಿತು. 

ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್‌ 2011ರಿಂದ 2021ರವರೆಗೆ ಒಟ್ಟು 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ ಒಟ್ಟು 156 ಪಂದ್ಯಗಳನ್ನಾಡಿರುವ ಎಬಿ ಡಿವಿಲಿಯರ್ಸ್‌ 37 ಅರ್ಧ ಶತಕ ಹಾಗೂ 2 ಶತಕ ಸಹಿತ ಒಟ್ಟಾರೆ 4,491 ರನ್‌ ಬಾರಿಸಿ ಮಿಂಚಿದ್ದಾರೆ. 

RCB Unbox ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರಿದ ಆರ್‌ಸಿಬಿ ಫ್ಯಾನ್ಸ್‌..!

 ವೆಸ್ಟ್‌ ಇಂಡೀಸ್ ದೈತ್ಯ ಪ್ರತಿಭೆ ಕ್ರಿಸ್‌ ಗೇಲ್‌ ಕೂಡಾ 2011ರಿಂದ 2017ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. 2013ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್‌ ಆಡಿದ 16 ಪಂದ್ಯಗಳಲ್ಲಿ 708 ರನ್ ಸಿಡಿಸಿದ್ದರು. ಇದರಲ್ಲಿ ಅಜೇಯ 175 ರನ್‌ಗಳ ಇನಿಂಗ್ಸ್‌ ಕೂಡಾ ಒಂದಾಗಿತ್ತು. ಈ ವೈಯುಕ್ತಿಕ ಗರಿಷ್ಠ ಸ್ಕೋರ್ ದಾಖಲೆ ಐಪಿಎಲ್‌ನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.

ರಾತ್ರಿ​ವ​ರೆಗೂ ನಡೆದ ಸಮಾ​ರಂಭ​ದಲ್ಲಿ ಹಲವು ಸಂಗೀತ ಕಲಾ​ವಿ​ದರು ಪ್ರದ​ರ್ಶನ ನೀಡಿ​ದರು. ತಾರೆ​ಯರ ನೃತ್ಯ ಪ್ರದ​ರ್ಶ​ನ ಅಭಿ​ಮಾ​ನಿ​ಗಳ ಕಣ್ಮನ ಸೆಳೆ​ಯಿತು. ವಿವಿಧ ಬಣ್ಣ​ಗಳ ಚಿತ್ತಾರ, ನೃತ್ಯ​ಗಳ ನಡುವೆ ಅಭಿ​ಮಾ​ನಿ​ಗಳು ಕುಣಿದು ಕುಪ್ಪ​ಳಿ​ಸಿ​ದರು.

ಆರ್‌ಸಿಬಿ ನೂತನ ಜೆರ್ಸಿ ಅನಾವರಣ:

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು 2023ನೇ ಸಾಲಿನ ಐಪಿಎಲ್ ಟೂರ್ನಿಗೆ ನೂತನ ಜೆರ್ಸಿಯನ್ನು ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅನಾವರಣ ಮಾಡಿದರು.

ಹೊಸ ಜೆರ್ಸಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಹೆಚ್ಚಿನ ಬದಲಾವಣೆಯನ್ನು ಮಾಡಿಲ್ಲ. ಆರ್‌ಸಿಬಿ ಫ್ರಾಂಚೈಸಿಯು ಕೆಂಪು ಮತ್ತು ಕಪ್ಪು ಬಣ್ಣವನ್ನು ಜೆರ್ಸಿಯಲ್ಲಿ ಹಾಗೆಯೇ ಉಳಿಸಿಕೊಂಡಿದೆ. ಈ ಬಾರಿ ಸ್ಪಾನ್ಸರ್ ಹೆಸರು ಬದಲಾಗಿದ್ದು, ಕತಾರ್ ಏರ್‌ವೇಸ್, ಆರ್‌ಸಿಬಿ ತಂಡದ ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.

ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಆರ್‌ಸಿಬಿ: 

ಕಳೆದ 15 ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಲೇ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದುವರೆಗೂ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಆರ್‌ಸಿಬಿ ಫ್ರಾಂಚೈಸಿಯು ಮೂರು ಬಾರಿ ಫೈನಲ್ ಪ್ರವೇಶಿಸಿದೆಯಾದರೂ, ಪ್ರಶಸ್ತಿಗೆ ಮುತ್ತಿಡಲು ಇದುವರೆಗೂ ಸಾಧ್ಯವಾಗಿಲ್ಲ. ಇನ್ನು ಕಳೆದ ಮೂರು ಆವೃತ್ತಿಗಳಲ್ಲೂ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದೆಯಾದರೂ, ನಾಕೌಟ್‌ ಒತ್ತಡವನ್ನು ನಿಭಾಯಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಬಾರಿಯಾದರೂ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios