* ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದ ವಿರಾಟ್ ಕೊಹ್ಲಿ* ಚೇಸಿಂಗ್‌ನಲ್ಲಿ ರನ್‌ ಮಳೆ ಹರಿಸುತ್ತಿದ್ದ ಕೊಹ್ಲಿ ಈ ಬಾರಿ ಮೂರನೇ ಬಾರಿ ಶೂನ್ಯ ಸಂಪಾದನೆ* ಚೇಸಿಂಗ್ ಮಾಸ್ಟರ್‌ ಈಗ ಡಕ್ ಮಾಸ್ಟರ್‌ ಆಗಿ ಹೊರಹೊಮ್ಮುತ್ತಿದ್ದಾರೆ

ಮಂಬೈ(ಮೇ.09): ಎಲ್ಲಿ ಆ ಹಳೆಯ ಕಿಂಗ್ ಕೊಹ್ಲಿ ? ಎಲ್ಲಿ ಹೋಯ್ತು ಆ ವೀರಾವೇಶ ? ಎಲ್ಲಿ ಹೋಯ್ತು ಆ ಸೆಂಚುರಿ ವೈಭವ ?. ಪ್ರೀತಿಯ ವಿರಾಟ್ ಕೊಹ್ಲಿ (Virat Kohli) ನಿಮಗೇಕೆ ಇಂತಹ ದುಸ್ಥಿತಿ ? ನಿಮ್ಮ ಒಂದೊಂದು ಸೆಂಚುರಿ ಇನ್ನೂ ನಮ್ಮ ಕಣ್ಣಂಚಿನಲ್ಲಿವೆ. ನಿಮ್ಮ ವಿರಾಟ ರೂಪವಂತೂ ಇನ್ನೂ ರೋಮಾಂಚನ. ನೀವು ಶತಕ ಸಿಡಿಸಿ ಎದುರಾಳಿ ಮೇಲೆ ಸವಾರಿ ಮಾಡುತ್ತಿದ್ದೆ ನೋಡಿ, ಅದು ಕಿಲ್ಲಿಂಗ್​ ಇನ್ನಿಂಗ್ಸ್. ಇಂತಹ ದುಸ್ವಪ್ನಕಾರ, ಇಂತಹ ಜಗಮೆಚ್ಚಿದ ವೀರನಿಗೆ ಈಗೇನಾಯ್ತು ? ಪ್ಲೀಸ್​​ ವಿರಾಟ್ ನೀವು ನಿನ್ನ ಹಳೆಯ ವೈಭವವನ್ನ ಮತ್ತೆ ಮರುಕಳಿಸು. ಸದ್ಯ ಕೊಹ್ಲಿಯನ್ನ ಅಪ್ಪಿ, ಮನಸ್ಸಿನ ದೇಗುಲದಲ್ಲಿ ಪೂಜಿಸ್ತಿದ್ದ ಎಲ್ಲಾ ಭಕ್ತರ ಅಳಲು ಇದು.

ನಿಜ, ಕೊಹ್ಲಿಯನ್ನ ಇಂತಹ ಸಂಕಷ್ಟದಲ್ಲಿ ನೋಡಲಾಗುತ್ತಿಲ್ಲ. ಚೇಸಿಂಗ್​ ಮಾಸ್ಟರ್ ಅಲ್ಲ ಡಕ್​ ಮಾಸ್ಟರ್​​​​​, ಸೆಂಚುರಿ ಸ್ಪೆಶಲಿಸ್ಟ್ ಅಲ್ಲ ಡಕ್ ಸ್ಪೆಶಲಿಸ್ಟ್ ಅಂತ ಕರೆಸಿಕೊಳ್ಳುವಾಗಲೆಲ್ಲಾ ಮನಸ್ಸು ಘಾಸಿಗೊಳ್ತಿದೆ. ವಿರಾಟ್ ಅಂದ್ರೆ ಶೂನ್ಯ ಶೂರನಾ ? ಅಂತ ಕರೆಯುವಾಗಲಂತೂ ಹೃದಯ ನಿಜಕ್ಕೂ ಛಿದ್ರಗೊಳ್ತಿದೆ. ಇದಕ್ಕೆ ಕೊನೆ ಯಾವಾಗ ? ಎರಡು ಬಾರಿ ಡಕೌಟ್​​ ಆದಾಗಲೇ ಇದು ಕೊನೆ ಅಂದುಕೊಂಡಿದ್ವಿ. ಅದು ಸುಳ್ಳಾಯ್ತು. 

ಸೀಸನ್​ವೊಂದರಲ್ಲಿ 3 ಬಾರಿ ಶೂನ್ಯ ಸುತ್ತಿದ ವಿರಾಟ್:

ಇಡೀ ಆರ್​ಸಿಬಿ ಫ್ಯಾನ್ಸ್ (RCB Fans) ಗ್ರೀನ್​ ಜೆರ್ಸಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಆರ್ಭಟ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ರು.ಸ್ಟೇಡಿಯಂಗೆ ಜೋಶ್​​​ನಿಂದಲೇ ಕಾಲಿಟ್ಟ ಕೊಹ್ಲಿ ಕೊನೆಗೆ ಘರ್ಜಿಸಲೇ ಇಲ್ಲ. ಹೈದ್ರಾಬಾದ್​ ವಿರುದ್ಧ ಮೊದಲ ಎಸೆತದಲ್ಲೇ ಡಕೌಟ್ ಆಗಿಬಿಟ್ರು. ಅಲ್ಲಿಗೆ ವಿರಾಟ್ ಅನ್ನೋ ಸೆಂಚುರಿ ಸ್ಪೆಶಲಿಸ್ಟ್ ಕೊನೆಗೆ ಡಕೌಟ್​​​ನಿಂದ ಹೊರಬರಲು ಸಾಧ್ಯವಾಗ್ಲಿಲ್ಲ.

Virat Kohli ವಿಕೆಟ್ ಕಬಳಿಸಿ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಬರೆದ ಕನ್ನಡಿಗ ಜೆ ಸುಚಿತ್..!

ಡುಪ್ಲೆಸಿಸ್​ ಜೊತೆ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ಸೊನ್ನೆ ಸುತ್ತುವ ಮೂಲಕ ಮತ್ತೊಮ್ಮೆ ಡಕಪ್ಪ ಅನ್ನಿಸಿಕೊಂಡ್ರು. ಇದು ಪ್ರಸಕ್ತ ಐಪಿಎಲ್​​ನಲ್ಲಿ ವಿರಾಟ್ ಆದ 3ನೇ ಡಕೌಟ್​​​. ದಿಗ್ಗಜ ಕೊಹ್ಲಿ ಹೀಗೆ ಸೊನ್ನೆ ಸುತ್ತಿ ಅತೀ ಬೇಸರದಿಂದ ಡಕೌಟ್​ ಸೇರಿದ್ದು ಇದೇ ಮೊದಲು. ಹೌದು, ಯಾವುದೇ ಟೂರ್ನಮೆಂಟ್​ ಅಥವಾ ಸಿರೀಸ್​​​ವೊಂದರಲ್ಲೇ ಕೊಹ್ಲಿ ಈವರೆಗೆ 3 ಬಾರಿ ಡಕೌಟ್ ಆಗಿರಲಿಲ್ಲ. ಕೊನೆಗೆ ಆ ಅಪಖ್ಯಾತಿಗೆ ಮಾಡ್ರನ್​ ಕ್ರಿಕೆಟ್ ದೊರೆ ಭಾಜನರಾಗಿಬಿಟ್ರು.

ಕೊಹ್ಲಿಯನ್ನ ಉಳಿಸಿಕೊಂಡು ತಪ್ಪು ಮಾಡ್ತಾ ಮ್ಯಾನೇಜ್​​ಮೆಂಟ್​​?: 

ಮೂರು ಬಾರಿ ಡಕೌಟ್​​​, 21 ರ ಎವರೇಜ್​​ನಲ್ಲಿ 216 ರನ್​​ ಅಂದ್ರೆ ಯಾರಿಗೆ ತಾನೇ ಸಿಟ್ಟು ಬರಲ್ಲ ಹೇಳಿ ? ಕೊಹ್ಲಿ ಹೀಗೆ ಬ್ಯಾಕ್​​ ಟು ಬ್ಯಾಕ್​ ಶೂನ್ಯಕ್ಕೆ ಔಟಾಗ್ತಿರೋದಕ್ಕೆ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಕೊಹ್ಲಿ ಆರ್​ಸಿಬಿ ಸಂಕಷ್ಟ ತಂದೊಡ್ತಿದ್ದಾರೆ. ಇವರಿಂದ ತಂಡಕ್ಕೆ ನಯಾ ಪೈಸೆ ಲಾಭವಿಲ್ಲ. ಹಿಂದೆ ಮುಂದೆ ನೋಡದೇ ವಿರಾಟ್​​ರನ್ನ ತಂಡದಿಂದ ಹೊರಗಿಡಿ ಅಂತೆಲ್ಲಾ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರಂತೂ ಕೊಹ್ಲಿ ತಂಡಕ್ಕೆ ಭಾರ, ಅವರನ್ನ ಆಕ್ಷನ್​​ನಲ್ಲಿ ಟೀಂ​ ಮ್ಯಾನೇಜ್​​​ಮೆಂಟ್​ ಖರೀದಿಸಲೇಬಾರದಿತ್ತು ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ವಿರಾಟ್​​​ಗೂ ನಿಜಕ್ಕೂ ದೊಡ್ಡ ಮುಖಭಂಗ. ಈ ದಯನೀಯ ವೈಫಲ್ಯಕ್ಕೆ ಕೊಹ್ಲಿ ಆದಷ್ಟು ಬೇಗ ಸೆಲ್ಯೂಷನ್ ಕಂಡುಕೊಳ್ಳಬೇಕಿದೆ. ಇಲ್ಲವಾದ್ರೆ ಲವ್ ವಿರಾಟ್ ಕೊಹ್ಲಿ ಅಂತಿದ್ದವರೆಲ್ಲ, ಇನ್ಮುಂದೆ ಹೇಟ್​​ ಯು ಅನ್ನೋ ಮಾತು ಕೇಳಬೇಕಾದೀತು.