ಪಾಕಿಸ್ತಾನ ಎದುರಿನ ಮೊದಲ ಟೆಸ್ಟ್‌ನ ಮೊದಲ ದಿನವೇ ಇಂಗ್ಲೆಂಡ್ ರನ್ ಸುರಿಮಳೆರಾವುಲ್ಪಿಂಡಿ ಟೆಸ್ಟ್‌ನ ಮೊದಲ ದಿನವೇ ಇಂಗ್ಲೆಂಡ್ ಪರ 4 ಶತಕ ದಾಖಲುಮೊದಲ ದಿನದಾಟದಲ್ಲೇ 500+ ರನ್ ಬಾರಿಸಿ ದಾಖಲೆ ಬರೆದ ಬೆನ್ ಸ್ಟೋಕ್ಸ್‌ ಪಡೆ

ರಾವಲ್ಪಿಂಡಿ(ಡಿ.02): ಅನಾರೋಗ್ಯಕ್ಕೆ ತುತ್ತಾಗಿದ್ದರೂ ತನ್ನ ಅಕ್ರಮಣಕಾರಿ ಆಟ ಬಿಡದ ಇಂಗ್ಲೆಂಡ್‌ ಗುರುವಾರ ಆರಂಭಗೊಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ ನಿಗದಿತ ಸಮಯಕ್ಕೆ ಶುರುವಾಗಲಿದೆ ಎನ್ನುವುದು ಖಚಿತವಾಗಿದ್ದೇ ಕೇವಲ 2 ಗಂಟೆ ಮೊದಲು. ಹಲವು ಆಟಗಾರರು ಸಂಪೂರ್ಣ ಗುಣಮುಖರಾಗದೆ ಇದ್ದರೂ ಕಣಕ್ಕಿಳಿದಿದ್ದು ಮಾತ್ರವಲ್ಲದೇ, ಪಾಕಿಸ್ತಾನಿ ಬೌಲರ್‌ಗಳನ್ನು ಚೆಂಡಾಡಿದರು.

4 ಶತಕ: ಹೊಸ ದಾಖಲೆ!

ಟೆಸ್ಟ್‌ ಪಂದ್ಯದ ಮೊದಲ ದಿನವೇ ನಾಲ್ವರು ಬ್ಯಾಟರ್‌ಗಳು ಶತಕ ಬಾರಿಸಿದ್ದು ಇದೇ ಮೊದಲು. ಜ್ಯಾಕ್‌ ಕ್ರಾಲಿ 122, ಬೆನ್‌ ಡಕೆಟ್‌ 107, ಓಲಿ ಪೋಪ್‌ 108, ಹ್ಯಾರಿ ಬ್ರೂಕ್‌ ಔಟಾಗದೆ 101 ರನ್‌ ಸಿಡಿಸಿದರು. ಮೊದಲ ವಿಕೆಟ್‌ಗೆ ಕ್ರಾಲಿ ಹಾಗೂ ಡಕೆಟ್‌ 35.4 ಓವರಲ್ಲಿ 233 ರನ್‌ ಜೊತೆಯಾಟವಾಡಿ, ಮೊದಲ ವಿಕೆಟ್‌ಗೆ ಅತಿವೇಗದ ದ್ವಿಶತಕದ ಜೊತೆಯಾಟದ ದಾಖಲೆಯನ್ನೂ ಬರೆದರು.

ಮೊದಲ ದಿನ ಗರಿಷ್ಠ ರನ್‌ ದಾಖಲೆ!

ಇಂಗ್ಲೆಂಡ್‌ 75 ಓವರಲ್ಲಿ 6.74ರ ರನ್‌ರೇಟ್‌ನಲ್ಲಿ ಬರೋಬ್ಬರಿ 506 ರನ್‌ ಕಲೆಹಾಕಿತು. ಟೆಸ್ಟ್‌ ಪಂದ್ಯದ ಮೊದಲ ದಿನವೇ 500 ರನ್‌ ದಾಖಲಾಗಿದ್ದು ಇದೇ ಮೊದಲು. ಮಂದ ಬೆಳಕಿನ ಕಾರಣ ಅಂಪೈರ್‌ಗಳು ದಿನದಾಟವನ್ನು ಮುಕ್ತಾಯಗೊಳಿಸಿದರು. 1910ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಪ್ರೇಲಿಯಾ ಮೊದಲ ದಿನ 494 ರನ್‌ ಗಳಿಸಿತ್ತು. ಆ ದಾಖಲೆ ಪತನಗೊಂಡಿದೆ. 2012ರಲ್ಲಿ ದ.ಆಫ್ರಿಕಾ ವಿರುದ್ಧವೇ ಆಸೀಸ್‌ ಮೊದಲ ದಿನ 5 ವಿಕೆಟ್‌ಗೆ 482 ರನ್‌ ಗಳಿಸಿತ್ತು.

Ind vs Ban ಬಾಂಗ್ಲಾದೇಶಕ್ಕೆ ಹಾರಿದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್..!

ಓವರಲ್ಲಿ 6 ಬೌಂಡರಿ: 5ನೇ ಬಾರಿ

ಸೌದ್‌ ಶಕೀಲ್‌ರ ಓವರಲ್ಲಿ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ 6 ಬೌಂಡರಿ ಬಾರಿಸಿದರು. ಟೆಸ್ಟ್‌ನಲ್ಲಿ ಇದು ಕೇವಲ 5 ಬಾರಿ. 1982ರಲ್ಲಿ ಬಾಬ್‌ ವಿಲ್ಲೀಸ್‌ ಓವರಲ್ಲಿ ಸಂದೀಪ್‌ ಪಾಟೀಲ್‌, 2004ರಲ್ಲಿ ಮ್ಯಾಥ್ಯೂ ಹೊಗಾರ್ಡ್‌ ಓವರಲ್ಲಿ ಕ್ರಿಸ್‌ ಗೇಲ್‌, 2004ರಲ್ಲಿ ಮುನಾಫ್‌ ಪಟೇಲ್‌ ಓವರಲ್ಲಿ ರಾಮನರೇಶ್‌ ಸರ್ವನ್‌, 2007ರಲ್ಲಿ ಜೇಮ್ಸ್‌ ಆ್ಯಂಡರ್‌ಸನ್‌ ಓವರಲ್ಲಿ ಸನತ್‌ ಜಯಸೂರ್ಯ ಈ ಸಾಧನೆ ಮಾಡಿದ್ದರು.

29ನೇ ಶತಕ: ಬ್ರಾಡ್‌ಮನ್‌ ದಾಖಲೆ ಸರಿಗಟ್ಟಿದ ಸ್ಮಿತ್‌

ಪತ್‌ರ್‍: ವಿಂಡೀಸ್‌ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ ದ್ವಿಶತಕ ಬಾರಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಶತಕ ದಾಖಲಿಸಿದ್ದಾರೆ. ಇದರೊಂದಿಗೆ ಡಾನ್‌ ಬ್ರಾಡ್‌ಮನ್‌ರ ದಾಖಲೆ ಸರಿಗಟ್ಟಿದ್ದಾರೆ. 88 ಟೆಸ್ಟ್‌ಗಳಲ್ಲಿ ಸ್ಮಿತ್‌ ಈ ಮೈಲಿಗಲ್ಲು ತಲುಪಿದ್ದಾರೆ. ಬ್ರಾಡ್‌ಮನ್‌ 51ನೇ ಟೆಸ್ಟ್‌ನಲ್ಲಿ 29 ಶತಕ ಪೂರೈಸಿದ್ದರು. 2 ವಿಕೆಟ್‌ಗೆ 293 ರನ್‌ಗಳಿಂದ 2ನೇ ದಿನ ಆರಂಭಿಸಿದ ಆಸೀಸ್‌, 4 ವಿಕೆಟ್‌ಗೆ 598 ರನ್‌ ಗಳಿಸಿ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡಿತು. ಸ್ಮಿತ್‌ 200 ರನ್‌ ಗಳಿಸಿ ಔಟಾಗದೆ ಉಳಿದರು. 2ನೇ ದಿನದಂತ್ಯಕ್ಕೆ ವಿಂಡೀಸ್‌ ವಿಕೆಟ್‌ ನಷ್ಟವಿಲ್ಲದೆ 74 ರನ್‌ ಗಳಿಸಿದೆ.